ಭಾರತದ ಮೊದಲ ಹಗಲು-ರಾತ್ರಿ ಟೆಸ್ಟ್ ಪಂದ್ಯ ನಡಿಯೋದು ಎಲ್ಲಿ..?

By Suvarna Web DeskFirst Published Mar 18, 2018, 4:18 PM IST
Highlights

ಭಾರತ ಕ್ರಿಕೆಟ್ ತಂಡದ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಶನಿವಾರ ಅಂತಿಮಗೊಳಿಸಿತು. ‘ಸಿಒಎ ಅನುಮತಿ ನೀಡಿದರೆ ಹೈದರಾಬಾದ್ ಅಥವಾ ರಾಜ್ ಕೋಟ್‌'ನಲ್ಲಿ ಹೊನಲು ಬೆಳಕಿನ ಟೆಸ್ಟ್ ನಡೆಯಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ನವದೆಹಲಿ(ಮಾ.18): ಭಾರತದಲ್ಲಿ ನಡೆಯಲಿರುವ ಚೊಚ್ಚಲ ಹಗಲು-ರಾತ್ರಿ ಟೆಸ್ಟ್‌ಗೆ ಹೈದರಾಬಾದ್ ಅಥವಾ ರಾಜ್ ಕೋಟ್ ಆತಿಥ್ಯ ವಹಿಸುವ ಸಾಧ್ಯತೆಯಿದೆ. ಅಕ್ಟೋಬರ್-ನವೆಂಬರ್‌ನಲ್ಲಿ ವೆಸ್ಟ್‌ಇಂಡೀಸ್ ತಂಡ ಭಾರತ ಪ್ರವಾಸ ಕೈಗೊಳ್ಳಲಿದ್ದು, ಈ ವೇಳೆ ಹಗಲು-ರಾತ್ರಿ ಟೆಸ್ಟ್ ಆಡಲಿದೆ.

ಭಾರತ ಕ್ರಿಕೆಟ್ ತಂಡದ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಶನಿವಾರ ಅಂತಿಮಗೊಳಿಸಿತು. ‘ಸಿಒಎ ಅನುಮತಿ ನೀಡಿದರೆ ಹೈದರಾಬಾದ್ ಅಥವಾ ರಾಜ್ ಕೋಟ್‌'ನಲ್ಲಿ ಹೊನಲು ಬೆಳಕಿನ ಟೆಸ್ಟ್ ನಡೆಯಲಿದೆ’ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ತಂಡದ ಪ್ರಧಾನ ಕೋಚ್ ರವಿಶಾಸ್ತ್ರಿ ಗಮನಕ್ಕೆ ತರದೇ ಹಗಲು-ರಾತ್ರಿ ಟೆಸ್ಟ್ ಆಯೋಜನೆಗೆ ಮುಂದಾಗಿರುವ ಬಿಸಿಸಿಐ ನಡೆಗೆ ಸಿಒಎ ಅಸಮಾಧಾನ ವ್ಯಕ್ತಪಡಿಸಿದೆ ಎಂದು ತಿಳಿದು ಬಂದಿದೆ. ವೇಳಾಪಟ್ಟಿ ಪ್ರಕಾರ ಭಾರತ ತವರಿನಲ್ಲಿ ಬಾಂಗ್ಲಾ ವಿರುದ್ಧ 1 ಹಾಗೂ ವಿಂಡೀಸ್ ವಿರುದ್ಧ 2 ಸೇರಿದಂತೆ ಒಟ್ಟು 3 ಟೆಸ್ಟ್ ಪಂದ್ಯಗಳನ್ನು ಆಡಲಿದೆ.

click me!