
ಈ ಬಾರಿಯ ಐಪಿಎಲ್‌ನಲ್ಲಿ ಕಪ್ಪು ನಮ್ಮದಾಗಿರುವುದು ಗೊತ್ತೆ ಇದೆ. ದೇಶದೆಲ್ಲೆಡೆ ಕೋಟ್ಯಾಂತರ ರೂ. ಆರ್‌ಸಿಬಿ ಅಭಿಮಾನಿಗಳು ಈ ಚೊಚ್ಚಲ ಗೆಲುವನ್ನು ಹಿಂದೆಂದು ಕಂಡು ಕೇಳರಿಯದಂತೆ ಸಂಭ್ರಮಿಸುತ್ತಿದ್ದಾರೆ. ಇತ್ತ ಗೆಲುವು ಆರ್‌ಸಿಬಿಗೆ ಹಾಗೂ ಅದರ ಕೋಟ್ಯಾಂತರ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರೆ ಅತ್ತ ಪಂಜಾಬ್ ಕಿಂಗ್ಸ್‌ಗೆ ಸೋಲು ಭಾರಿ ನೋವನ್ನುಂಟು ಮಾಡಿರುವುದು ಕೂಡ ಸಹಜವೇ. ಈ ಪಂದ್ಯದಲ್ಲಿ ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್ ಸೋತಿರುವುದರಿಂದ ತಂಡದ ಆಟಗಾರರಂತೆ ಪ್ರೀತಿ ಮುಖದಲ್ಲೂ ಸೋಲಿನ ನೋವು ಎದ್ದು ಕಾಣುತ್ತಿತ್ತು. ಸೋಲು ಮಾತ್ರವಲ್ಲ, ಈ ಸೋಲಿನಿಂದ ಪ್ರೀತಿ ಕೋಟಿಗಟ್ಟಲೇ ಹಣ ಕಳೆದುಕೊಂಡಿದ್ದಾರೆ.
ಹೌದು ನಿನ್ನೆ ಮಂಗಳವಾರ ನಡೆದ 18ನೇ ಐಪಿಎಲ್ ಫೈನಲ್ ಪಂದ್ಯ ಇತಿಹಾಸ ಬರೆದಿದೆ. ಈ ಪಂದ್ಯವನ್ನು ಯಾರೂ ಮರೆಯುವುದಕ್ಕೆ ಸಾಧ್ಯವಿಲ್ಲ, ಅಷ್ಟೊಂದು ರೋಚಕವಾಗಿತ್ತು ಈ ಪಂದ್ಯಾವಳಿ, ಕೊನೆಯ ಕೆಲ ಓವರ್‌ಗಳವರೆಗೂ ವಿಜಯಲಕ್ಷ್ಮಿ ಅವನ ಅವಳ ಅಂತ ಅತ್ತಿತ್ತ ವಾಲುತ್ತಾಳೆ ಇದ್ದಳು. ಆದರೂ ಕೊನೆಯಲ್ಲಿ ಆರ್‌ಸಿಬಿ ಪ್ರೀತಿ ಜಿಂಟಾರ ಪಂಜಾಬ್ ತಂಡವನ್ನು 6 ರನ್‌ಗಳಿಂದ ಸೋಲಿಸಿ 18 ವರ್ಷಗಳ ನಂತರ IPL ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. ಪ್ರೀತಿ ಜಿಂಟಾ ಅವರ ಪಂಜಾಬ್ ಕಿಂಗ್ಸ್ ತಂಡವು ಎರಡನೇ ಬಾರಿಗೆ ಸೋಲನ್ನು ಎದುರಿಸಬೇಕಾಯಿತು. ಪಂಜಾಬ್ ಕಿಂಗ್ಸ್ ಸೋಲಿನ ನಂತರ ಪ್ರೀತಿ ಜಿಂಟಾ ತುಂಬಾ ದುಃಖಿತರಾಗಿದ್ದರು. ಒಂದೆಡೆ, ಗೆಲುವಿನ ನಂತರ ಆರ್‌ಸಿಬಿ ಕೋಟ್ಯಂತರ ರೂಪಾಯಿ ಗೆದ್ದರೆ, ಪ್ರೀತಿ ಜಿಂಟಾ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಂಡಿದ್ದಾರೆ.
ಐಪಿಎಲ್ ಫೈನಲ್ ಪಂದ್ಯದಲ್ಲಿ ಸೋತ ನಂತರ ಪ್ರತಿಯೊಂದು ತಂಡವೂ ಕೋಟ್ಯಂತರ ರೂಪಾಯಿಗಳನ್ನು ಕಳೆದುಕೊಳ್ಳುತ್ತದೆ. ಇತ್ತ ಗೆದ್ದ ಆರ್‌ಸಿಬಿ ಮೇಲೆ ಹಣದ ಮಳೆ ಸುರಿದಿದೆ. ನಿನ್ನೆಯ ಗೆಲುವಿನ ನಂತರ, ವಿರಾಟ್ ಕೊಹ್ಲಿ ಸೇರಿದಂತೆ ತಂಡದ ಪ್ರತಿಯೊಬ್ಬ ಆರ್‌ಸಿಬಿ ಆಟಗಾರನೂ ಸಂತೋಷದಿಂದ ನೃತ್ಯ ಮಾಡಿದ್ದರು. ಆದರೆ ಪಂಜಾಬ್ ಕಿಂಗ್ಸ್ ಆಟಗಾರರು ಸೋಲಿನಿಂದ ತುಂಬಾ ದುಃಖಿತರಾಗಿದ್ದರು ಮತ್ತು ನಿರಾಶೆಗೊಂಡಿದ್ದರು.
ಪ್ರೀತಿ ಜಿಂಟಾಗೆ ಕೋಟಿ ಕೋಟಿ ನಷ್ಟ
ಐಪಿಎಲ್ ಫೈನಲ್ ಗೆದ್ದ ತಂಡಕ್ಕೆ 20 ಕೋಟಿ ರೂ. ಬಹುಮಾನದ ಹಣ ಸಿಕ್ಕರೆ. ರನ್ನರ್ ಅಪ್ ತಂಡಕ್ಕೆ 13 ಕೋಟಿ ರೂ. ಸಿಗುತ್ತದೆ. ಆರ್‌ಸಿಬಿಗೆ 20 ಕೋಟಿ ರೂ. ಸಿಕ್ಕರೆ ಪ್ರೀತಿ ತಂಡಕ್ಕೆ ಕೇವಲ 13 ಕೋಟಿ ರೂ. ಸಿಕ್ಕಿದೆ. ಪಂಜಾಬ್ ಕಿಂಗ್ಸ್ ಫೈನಲ್ ಪಂದ್ಯ ಗೆದ್ದಿದ್ದರೆ, ಅವರಿಗೆ 20 ಕೋಟಿ ರೂ. ಬಹುಮಾನದ ಹಣ ಸಿಗುತ್ತಿತ್ತು. ಇದರಿಂದ ಪ್ರೀತಿ ಜಿಂಟಾಗೆ ಕೋಟಿಗಟ್ಟಲೆ ಲಾಭವಾಗುತ್ತಿತ್ತು. ಆದರೆ ಈಗ ಪಂದ್ಯ ಸೋತ ನಂತರ ಅವರು ಕೋಟಿಗಟ್ಟಲೆ ಕಳೆದುಕೊಂಡಿದ್ದಾರೆ. ಐಪಿಎಲ್ ಫೈನಲ್‌ಗೆ ಅರ್ಹತೆ ಪಡೆದ ತಂಡಕ್ಕೂ ಬಹುಮಾನ ಸಿಗುತ್ತದೆ. ಈ ಬಾರಿ ಮುಂಬೈ ಇಂಡಿಯನ್ಸ್ 7 ಕೋಟಿ ಪಡೆದರೆ, ನಾಲ್ಕನೇ ಸ್ಥಾನ ಪಡೆದ ಗುಜರಾತ್ ಟೈಟಾನ್ಸ್ 6.5 ಕೋಟಿ ಹಣ ಪಡೆದಿದೆ.
ಪ್ರೀತಿ ಅವರ ಪ್ರತಿಕ್ರಿಯೆ ವೈರಲ್
ಈ ಹಿಂದೆ 2014ರಲ್ಲೂ ಪ್ರೀತಿ ಜಿಂಟಾ ಅವರ ಪಿಬಿಕೆ ತಂಡ ಫೈನಲ್‌ಗೆ ಬಂದು ಅಲ್ಲಿ ಸೋತಿದ್ದರು. ಶಾರುಖ್ ಖಾನ್ ಮಾಲೀಕತ್ವದ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಅವರ ತಂಡ ಸೋಲು ಕಂಡಿತ್ತು. ಈ ವೇಳೆ ಪ್ರೀತಿ ಮೈದಾನದಲ್ಲೇ ಬಿಕ್ಕಿ ಬಿಕ್ಕಿ ಅತ್ತಿದ್ದರು. ಈ ವೇಳೆ ಕೆಕೆಆರ್ ತಂಡದ ಮಾಲೀಕ ಶಾರುಖ್ ಖಾನ್ ಬಂದು ತಮ್ಮ ಸಹನಟಿಯೂ ಆಗಿದ್ದ ಪ್ರೀತಿ ಅವರನ್ನು ಸಮಾಧಾನಿಸಿದ್ದರು. ಆದರೆ ಈ ಬಾರಿ ಪ್ರೀತಿಗೆ ಸೋಲಿನಿಂದ ವಿಷಾದ ಎನಿಸಿದರು. ಅವರು ಅಳಲಿಲ್ಲ, ಅವರು ತಮ್ಮ ತಂಡವನ್ನು ಸಮಾಧಾನಪಡಿಸಲು ಮೈದಾನಕ್ಕೆ ಬಂದರು. ಅಲ್ಲದೇ ನಾಯಕ ಶ್ರೇಯಸ್ ಅಯ್ಯರ್ ಅವರ ಬೆನ್ನು ತಟ್ಟಿ ಸಮಾಧಾನಿಸಿದರು. ಪ್ರೀತಿ ಅವರ ಈ ಪ್ರತಿಕ್ರಿಯೆಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೇ ನಂತರ ಅವರು ವಿರಾಟ್ ಕೊಹ್ಲಿಗೂ ಅಭಿನಂದನೆ ತಿಳಿಸಿ ಶುಭಹಾರೈಸುತ್ತಿರುವ ವೀಡಿಯೋ ವೈರಲ್ ಆಗಿದೆ. ವೀಡಿಯೋ ನೋಡಿದ ಅಭಿಮಾನಿಗಳು ನಾನು ಐಪಿಎಲ್ ನೋಡುವುದಿಲ್ಲ, ಆದರೆ ಪ್ರೀತಿ ಅವರ ನಗು ನೋಡಲು ನಾನು ಪಂಜಾಬ್ ಕಿಂಗ್ಸ್ ಗೆಲ್ಲಬೇಕೆಂದು ನಾನು ಬಯಸಿದ್ದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಆಟದಲ್ಲಿ ಸೋಲು ಗೆಲುವು ಸಾಮಾನ್ಯ, ಗೆದ್ದಿದ್ದರೆ ಪಂಜಾಬ್ ಕಿಂಗ್ಸ್‌ಗೂ ಇದು ಚೊಚ್ಚಲ ಗೆಲುವಾಗುತ್ತಿತ್ತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.