ನೆರೆ ಪರಿಹಾರಕ್ಕೆ ಅರ್ಧ ಸಂಬಳ ಕೊಟ್ಟ ಹಿಮಾ ದಾಸ್!

Published : Jul 17, 2019, 10:50 AM IST
ನೆರೆ ಪರಿಹಾರಕ್ಕೆ ಅರ್ಧ ಸಂಬಳ ಕೊಟ್ಟ ಹಿಮಾ ದಾಸ್!

ಸಾರಾಂಶ

ಭೀಕರ ಪ್ರವಾಹಕ್ಕೆ ಅಸ್ಸಾಂ ನಲುಗಿದೆ. ಅಸ್ಸಾಂನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಇದೀಗ ಅಸ್ಸಾಂಗೆ ನೆರವಿನ ಅಗತ್ಯವಿದೆ. ಇದರ ಬೆನ್ನಲ್ಲೇ ಅಥ್ಲೀಟ್ ಹಿಮಾ ದಾಸ್ ಪರಿಹಾರ ನಿಧಿಗೆ ಅರ್ಧ ಸಂಬಳ ನೀಡಿದ್ದಾರೆ.

ಗುವಾಹಟಿ(ಜು.17): ಅಸ್ಸಾಂ ಭೀಕರ ಪ್ರವಾಹಕ್ಕೆ ತುತ್ತಾಗಿದ್ದು, ತಾರಾ ಅಥ್ಲೀಟ್‌ ಹಿಮಾ ದಾಸ್‌ ತಮ್ಮ ಅರ್ಧ ತಿಂಗಳ ಸಂಬಳವನ್ನು ಮುಖ್ಯಮಂತ್ರಿ ಪ್ರವಾಹ ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಿದ್ದಾರೆ. ಟ್ವೀಟರ್‌ನಲ್ಲಿ ಈ ವಿಷಯ ಹಂಚಿಕೊಂಡಿರುವ ಹಿಮಾ, ಕಾರ್ಪೋರೇಟ್‌ ಸಂಸ್ಥೆ ಹಾಗೂ ವೈಯಕ್ತಿಕವಾಗಿ ಪ್ರತಿಯೊಬ್ಬರೂ ನೆರವು ನೀಡುವಂತೆ ಕೋರಿದ್ದಾರೆ. ಹಿಮಾ, ಇಂಡಿಯನ್‌ ಆಯಿಲ್‌ ಕಾರ್ಪೋರೇಷನ್‌ ಸಂಸ್ಥೆಯಲ್ಲಿ ಮಾನವ ಸಂಪನ್ಮೂಲ ಅಧಿಕಾರಿಯಾಗಿದ್ದಾರೆ. ಯುವ ಅಥ್ಲೀಟ್‌ನ ಈ ನಡೆ ಮೆಚ್ಚುಗೆಗೆ ಪಾತ್ರವಾಗಿದೆ.

 

ಕಳೆದ ವಾರವಾರ ಪೋಜ್ನಾನ್‌ ಗ್ರ್ಯಾನ್‌ ಪ್ರಿ, ಕುಟ್ನೊ ಅಥ್ಲೆಟಿಕ್ಸ್‌ ಕೂಟ ಹಾಗೂ ಚೆಕ್‌ ಗಣರಾಜ್ಯದ ಕ್ಲಾಡ್ನೊ ಅಥ್ಲೆಟಿಕ್ಸ್‌  ಕೂಟದಲ್ಲಿ ಹಿಮಾ ದಾಸ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ 11 ದಿನಗಳಲ್ಲಿ 3 ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ. 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಸಿಬಿ ಮಾರಾಟದಲ್ಲಿ ಬಿಗ್ ಟ್ವಿಸ್ಟ್, ಐಪಿಎಲ್ 2026 ಆರಂಭಕ್ಕೂ ಮುನ್ನವೇ ಮಹತ್ವದ ಅಪ್‌ಡೇಟ್
ಕೆಕೆಆರ್‌ಗೆ ಮತ್ತೊಂದು ಶಾಕ್: ಹರ್ಷಿತ್ ರಾಣಾ ಬಳಿಕ ಮತ್ತೋರ್ವ ಪ್ರಮುಖ ವೇಗಿ ಐಪಿಎಲ್ ಸೀಸನ್‌ನಿಂದಲೇ ಔಟ್?