1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯದ ಸ್ಯಾಲರಿ; ಇಲ್ಲಿದೆ ಸಂಪೂರ್ಣ ವಿವರ!

By Web Desk  |  First Published Jul 16, 2019, 9:29 PM IST

2019ರ ಸೆಮಿಫೈನಲ್‍‌ನಿಂದ ನಿರ್ಗಮಿಸಿದ ಟೀಂ ಇಂಡಿಯಾ 7  ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ. 2011ರಲ್ಲಿ ಪ್ರಶಸ್ತಿ ಗೆದ್ದ ಟೀಂ ಇಂಡಿಯಾದ ಪ್ರತಿಯೊಬ್ಬ ಕ್ರಿಕೆಟಿಗ ತಲಾ 2 ಕೋಟಿ ರೂಪಾಯಿ ಬಹುಮಾನ ಪಡೆದಿದ್ದಾರೆ. ಆದರೆ 1983ರ ವಿಶ್ವಕಪ್ ಗೆದ್ದ ಕಪಿಲ್ ಸೈನ್ಯ ಪಡೆದ ಸಂಭಾವನೆ ಮೊತ್ತ ಎಷ್ಟು? ಇಲ್ಲಿದೆ ವಿವರ.


ಮುಂಬೈ(ಜು.16): ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಮಂಡಳಿ ಅನ್ನೋ ಹಿರಿಗೆ ಬಿಸಿಸಿಐಗಿದೆ. ಟೀಂ ಇಂಡಿಯಾ ಕ್ರಿಕೆಟಿಗರೂ ಕೂಡ ಶ್ರೀಮಂತ ಕ್ರೀಡಾಪಟುಗಳ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಟೆಸ್ಟ್ ಪಂದ್ಯ ಸಂಭಾವನೆ 15 ಲಕ್ಷ ರೂಪಾಯಿ, ಏಕದಿನ 7 ಲಕ್ಷ ಹಾಗೂ ಟಿ20 ಪಂದ್ಯದ ಸಂಭಾವನೆ 5 ಲಕ್ಷ ರೂಪಾಯಿ. ಇದರ ಜೊತೆಗೆ ದಿನ ಭತ್ಯೆ ಹಾಗೂ ಇತರ ಖರ್ಚು ಲಕ್ಷ ದಾಟುತ್ತೆ. ಆದರೆ 1983ರ ವಿಶ್ವಕಪ್ ಗೆದ್ದ ಕಪಿಲ್ ದೇವ್ ನೇತೃತ್ವದ ಟೀಂ ಇಂಡಿಯಾ ಸಂಭಾವನೆ ಎಷ್ಟಿತ್ತು ಅನ್ನೋ ಕುತೂಹಲಕ್ಕೆ ಉತ್ತರ ಸಿಕ್ಕಿದೆ.

ಇದನ್ನೂ ಓದಿ: ಕೋಚ್ ರವಿ ಶಾಸ್ತ್ರಿ ಹಾಗೂ ದ್ರಾವಿಡ್ ಸ್ಯಾಲರಿ !

Tap to resize

Latest Videos

1983ರ ವಿಶ್ವಕಪ್ ಗೆದ್ದ ಬಳಿಕ ಟೀಂ ಇಂಡಿಯಾ ಕ್ರಿಕೆಟಿಗರಿಗೆ ಪ್ರತಿ ಪಂದ್ಯದ ಸಂಭಾವನೆ 1,500 ರೂಪಾಯಿ ನೀಡಲಾಗಿದೆ . ದಿನ  ಭತ್ಯೆ 200 ರೂಪಾಯಿ.  ಒಟ್ಟು ಒಬ್ಬ ಆಟಗಾರನಿಗೆ ಪಂದ್ಯದ ದಿನ 1700 ರೂಪಾಯಿ ಕೈಸೇರುತ್ತಿತ್ತು. ಪ್ರವಾಸದಲ್ಲಿ ಪಂದ್ಯ ಇಲ್ಲದಿದ್ದಾಗ 200 ರೂಪಾಯಿ ಕೈಸೇರುತ್ತಿತ್ತು.  

ಇದನ್ನೂ ಓದಿ: ಐಪಿಎಲ್ ಟೂರ್ನಿಯಿಂದ 100 ಕೋಟಿ ಸಂಪಾದಿಸಿದ ಕ್ರಿಕೆಟಿಗರು ಯಾರು?

2011ರ ವಿಶ್ವಕಪ್ ಗೆದ್ದ ಬಳಿಕ ತಂಡದ  ಪ್ರತಿಯೊಬ್ಬ ಆಟಗಾರನಿಗೆ ಬಿಸಿಸಿಐ 2 ಕೋಟಿ ರೂಪಾಯಿ ನೀಡಿದೆ. ಇಷ್ಟೇ ಅಲ್ಲ ಆಯಾ ರಾಜ್ಯ ಸರ್ಕಾರ ಹಾಗೂ ಇತರ ಸಂಘ ಸಂಸ್ಥೆಗಳು ಹಲವು ಬಹುಮಾನ ನೀಡಿದೆ. 2019ರ ಸೆಮಿಫೈನಲ್ ಪಂದ್ಯದಿಂದ ಹೊರಬಿದ್ದ ಟೀಂ ಇಂಡಿಯಾ 7 ಕೋಟಿ ರೂಪಾಯಿ ಬಹುಮಾನ ಮೊತ್ತ ಪಡೆದಿದೆ. ಸದ್ಯ  ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸೇರಿದಂತೆ ಎ ಗ್ರೇಡ್ ಕ್ರಿಕೆಟಿಗರು ಕೋಟಿಗೂ ಅಧಿಕ ಮೊತ್ತ ವಾರ್ಷಿಕ ಸಂಭಾವನೆ ಪಡೆಯುತ್ತಿದ್ದಾರೆ. 

click me!