ಮುಂಬೈ-ಸನ್’ರೈಸರ್ಸ್ ನಡುವೆ ಹೈವೋಲ್ಟೇಜ್ ಪಂದ್ಯ

Published : Apr 06, 2019, 04:06 PM IST
ಮುಂಬೈ-ಸನ್’ರೈಸರ್ಸ್ ನಡುವೆ ಹೈವೋಲ್ಟೇಜ್ ಪಂದ್ಯ

ಸಾರಾಂಶ

ಹೈವೋಲ್ಟೇಜ್ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡದ ಸವಾಲು. ನಂ.1 ವೇಗದ ಬೌಲರ್‌ ಜಸ್ಪ್ರೀತ್‌ ಬುಮ್ರಾ ಎದುರು ವಾರ್ನರ್‌ ಹಾಗೂ ಬೇರ್‌ಸ್ಟೋ ಯಶಸ್ಸು ಕಾಣುತ್ತಾರಾ ಎನ್ನುವ ಕುತೂಹಲವಿದೆ.

ಹೈದರಾಬಾದ್[ಏ.06]: ಪ್ರಚಂಡ ಲಯದಲ್ಲಿರುವ ಜಾನಿ ಬೇರ್‌ಸ್ಟೋ ಹಾಗೂ ಡೇವಿಡ್‌ ವಾರ್ನರ್‌, ಸನ್‌ರೈಸ​ರ್ಸ್ ಹೈದರಾಬಾದ್‌ಗೆ ಸತತ 4ನೇ ಗೆಲುವು ತಂದುಕೊಡಲು ಕಾತರಿಸುತ್ತಿದ್ದಾರೆ. 
ಆದರೆ ಶನಿವಾರ ಎದುರಾಗುತ್ತಿರುವುದು ಬಲಿಷ್ಠ ಮುಂಬೈ ಇಂಡಿಯನ್ಸ್‌ ತಂಡದ ಸವಾಲು. ನಂ.1 ವೇಗದ ಬೌಲರ್‌ ಜಸ್ಪ್ರೀತ್‌ ಬುಮ್ರಾ ಎದುರು ವಾರ್ನರ್‌ ಹಾಗೂ ಬೇರ್‌ಸ್ಟೋ ಯಶಸ್ಸು ಕಾಣುತ್ತಾರಾ ಎನ್ನುವ ಕುತೂಹಲವಿದೆ. ಸನ್‌ರೈಸ​ರ್ಸ್ ಮಧ್ಯಮ ಕ್ರಮಾಂಕ ಅಸ್ಥಿರ ಪ್ರದರ್ಶನ ತೋರುತ್ತಿದ್ದು, ಆರಂಭಿಕರ ವಿಕೆಟ್‌ಗಳನ್ನು ಬೇಗನೆ ಕಬಳಿಸಿದರೆ ಪಂದ್ಯದ ಮೇಲೆ ಹಿಡಿತ ಸಾಧಿಸಬಹುದು ಎನ್ನುವ ಲೆಕ್ಕಾಚಾರವನ್ನು ಮುಂಬೈ ನಾಯಕ ರೋಹಿತ್‌ ಹಾಕಿದ್ದಾರೆ. 

ಆಲ್ರೌಂಡರ್‌ಗಳಿಂದಲೇ ಕೂಡಿರುವ ಮುಂಬೈ, ಗೆಲುವಿನ ಹಳಿಗೆ ಮರಳಿದ್ದು ಲಯ ಕಾಪಾಡಿಕೊಳ್ಳುವ ವಿಶ್ವಾಸವಿದೆ. ಮುಂಬೈ ಬ್ಯಾಟಿಂಗ್‌ ತಾರೆಯರನ್ನು ಕಟ್ಟಿಹಾಕಲು ಸನ್‌ರೈಸ​ರ್ಸ್ ನಾಯಕ ಭುವನೇಶ್ವರ್‌ ತಮ್ಮ ಸ್ವಂತ ಪ್ರಯತ್ನದ ಜತೆ ಆಫ್ಘನ್‌ನ ಸ್ಪಿನ್‌ ಜೋಡಿಯಾದ ರಶೀದ್‌ ಹಾಗೂ ನಬಿ ಮೇಲೂ ಅವಲಂಬಿತರಾಗಲಿದ್ದಾರೆ.

ಪಿಚ್‌ ರಿಪೋರ್ಟ್‌

ಹೈದರಾಬಾದ್‌ ಪಿಚ್‌ ಬ್ಯಾಟಿಂಗ್‌ ಸ್ನೇಹಿಯಾಗಿದ್ದು, ಇಲ್ಲಿ ನಡೆದಿರುವ ಎರಡೂ ಪಂದ್ಯಗಳಲ್ಲೂ ಸನ್‌ರೈಸ​ರ್‍ಸ್ 200ಕ್ಕೂ ಹೆಚ್ಚು ಮೊತ್ತ ದಾಖಲಿಸಿ ಗೆದ್ದಿದೆ. ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ಸಿಗಲಿದ್ದು, ಎರಡೂ ಪಂದ್ಯಗಳಲ್ಲೂ ಸ್ಪಿನ್ನರ್‌ಗಳಿಗೇ ಹೆಚ್ಚು ವಿಕೆಟ್‌ ಸಿಕ್ಕಿದೆ.

ಸಂಭವನೀಯ ಆಟಗಾರರ ಪಟ್ಟಿ

ಸನ್‌ರೈಸ​ರ್ಸ್: ಡೇವಿಡ್‌ ವಾರ್ನರ್‌, ಜಾನಿ ಬೇರ್‌ಸ್ಟೋವ್‌, ವಿಜಯ್‌ ಶಂಕರ್‌, ಮನೀಶ್‌ ಪಾಂಡೆ, ದೀಪಕ್‌ ಹೂಡಾ, ಯೂಸುಫ್‌ ಪಠಾಣ್‌, ಮೊಹಮದ್‌ ನಬಿ, ರಶೀದ್‌ ಖಾನ್‌, ಭುವನೇಶ್ವರ್‌ ಕುಮಾರ್‌(ನಾಯಕ), ಸಂದೀಪ್‌ ಶರ್ಮಾ, ಸಿದ್ಧಾರ್ಥ್ ಕೌಲ್‌.

ಮುಂಬೈ: ಕ್ವಿಂಟನ್‌ ಡಿ ಕಾಕ್‌, ರೋಹಿತ್‌ ಶರ್ಮಾ (ನಾಯಕ), ಸೂರ್ಯಕುಮಾರ್‌, ಯುವರಾಜ್‌ ಸಿಂಗ್‌, ಕೃನಾಲ್‌, ಹಾರ್ದಿಕ್‌ ಪಾಂಡ್ಯ, ಕಿರೊನ್‌ ಪೊಲ್ಲಾರ್ಡ್‌, ಜೇಸನ್‌ ಬೆಹ್ರೆನ್‌ಡೊಫ್‌ರ್‍, ರಾಹುಲ್‌ ಚಾಹರ್‌, ಮಿಚೆಲ್‌ ಮೆಕ್ಲನಾಘನ್‌, ಜಸ್ಪ್ರೀತ್‌ ಬುಮ್ರಾ.

ಸ್ಥಳ: ಹೈದರಾಬಾದ್‌ 
ಪಂದ್ಯ ಆರಂಭ: ರಾತ್ರಿ 8ಕ್ಕೆ 
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ 1

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗ್ರೀನ್‌ನಿಂದ ಮೊರಿಸ್‌ವರೆಗೆ, ಐಪಿಎಲ್‌ ಮಿನಿ ಹರಾಜಿನ ಅತ್ಯಂತ ದುಬಾರಿ ಪ್ಲೇಯರ್ಸ್‌!
ಕಡಿಮೆ ಮೊತ್ತಕ್ಕೆ ಆರ್‌ಸಿಬಿ ತೆಕ್ಕೆಗೆ ಜಾರಿದ ಸ್ಟಾರ್ ಆಲ್ರೌಂಡರ್! ಹಾಲಿ ಚಾಂಪಿಯನ್ ಬೆಂಗಳೂರು ತಂಡಕ್ಕೆ ಜಾಕ್‌ಪಾಟ್