ಬಿಸಿಸಿಐನಿಂದ 2018-19ರಲ್ಲಿ 2024 ಕ್ರಿಕೆಟ್‌ ಪಂದ್ಯ!

Published : Apr 06, 2019, 03:15 PM IST
ಬಿಸಿಸಿಐನಿಂದ 2018-19ರಲ್ಲಿ 2024 ಕ್ರಿಕೆಟ್‌ ಪಂದ್ಯ!

ಸಾರಾಂಶ

883 ಏಕದಿನ, 553 ಟಿ20, 469 (4 ದಿನಗಳ) ಪಂದ್ಯಗಳು, 9 (5 ದಿನಗಳ) ಪಂದ್ಯಗಳು ನಡೆದಿವೆ. ಭಾರತದ 155 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಋುತುವಿನಲ್ಲಿ 254 ದಿನಗಳ ಕಾಲ ಪಂದ್ಯಗಳು ನಡೆದಿದ್ದು, 4600ಕ್ಕೂ ಹೆಚ್ಚು ಆಟಗಾರರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿದೆ.

ನವದೆಹಲಿ[ಏ.06]: 2018-19ರ ಋುತುವಿನಲ್ಲಿ ಬರೋಬ್ಬರಿ 2024 ಪಂದ್ಯಗಳನ್ನು ಆಯೋಜಿಸಿ ಬಿಸಿಸಿಐ ದಾಖಲೆ ಬರೆದಿದೆ. 2017-18ರ ಋುತುವಿಗೆ ಹೋಲಿಸಿದರೆ (1108 ಪಂದ್ಯಗಳು), 916 ಅಧಿಕ ಪಂದ್ಯಗಳು ನಡೆದಿವೆ. 

ಈ ಅಂಕಿ-ಅಂಶಗಳನ್ನು ಬಿಸಿಸಿಐ ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಎಲ್ಲಾ ವಯೋಮಿತಿಯ ಪಂದ್ಯಗಳು ಪರಿಗಣಿಸಲಾಗಿದೆ. 883 ಏಕದಿನ, 553 ಟಿ20, 469 (4 ದಿನಗಳ) ಪಂದ್ಯಗಳು, 9 (5 ದಿನಗಳ) ಪಂದ್ಯಗಳು ನಡೆದಿವೆ. ಭಾರತದ 155 ನಗರಗಳು ಪಂದ್ಯಗಳಿಗೆ ಆತಿಥ್ಯ ವಹಿಸಿವೆ. ಋುತುವಿನಲ್ಲಿ 254 ದಿನಗಳ ಕಾಲ ಪಂದ್ಯಗಳು ನಡೆದಿದ್ದು, 4600ಕ್ಕೂ ಹೆಚ್ಚು ಆಟಗಾರರಿಗೆ ಆಡುವ ಹನ್ನೊಂದರಲ್ಲಿ ಸ್ಥಾನ ಸಿಕ್ಕಿದೆ.

2018-19ರ ಅವಧಿಯಲ್ಲಿ ಉತ್ತರಾಖಂಡ, ಪಾಂಡಿಚೆರಿ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಸಿಕ್ಕಿಂ, ಅರುಣಾಚಲ ಪ್ರದೇಶ ಹಾಗೂ ಮಿಜೋರಾಂ ತಂಡಗಳು ರಣಜಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದವು. ಇನ್ನು 18 ವರ್ಷಗಳ ಬಳಿಕ ಬಿಹಾರ ತಂಡ ಕೂಡಾ ಕಮ್’ಬ್ಯಾಕ್ ಮಾಡಿತ್ತು. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಪಿಎಲ್ ಹರಾಜಿನಲ್ಲಿ ₹25.20 ಕೋಟಿ ಪಡೆದ ಕ್ಯಾಮರೂನ್ ಗ್ರೀನ್‌ಗೆ ಕೊಡುವ ಮೊತ್ತ ₹18 ಕೋಟಿ ಮಾತ್ರ
ಕೇವಲ 30 ಲಕ್ಷ ಮೂಲ ಬೆಲೆ ಹೊಂದಿದ್ದ ಮಂಗೇಶ್ ಯಾದವ್ 5.2 ಕೋಟಿಗೆ ಆರ್‌ಸಿಬಿ ಪಾಲು? ಅಷ್ಟಕ್ಕೂ ಯಾರು ಈ ಎಡಗೈ ವೇಗಿ?