
ಬರ್ಮಿಂಗ್‌ಹ್ಯಾಮ್(ಜು.31): ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅನ್ ಫೀಲ್ಡ್ ಹಾಗೂ ಆಫ್ ದಿ ಫೀಲ್ಡ್‌ನಲ್ಲೂ ತುಂಬಾ ಆಕ್ಟೀವ್. ಸ್ಟೈಲೀಶ್ ಕ್ರಿಕೆಟರ್ ಪಾಂಡ್ಯಗೆ ಅಷ್ಟೇ ಫೀಮೇಲ್ ಫ್ಯಾನ್ ಫಾಲೋವರ್ಸ್ ಇದ್ದಾರೆ.
ಹಾರ್ದಿಕ್ ಪಾಂಡ್ಯ ಹೆಸರು ಕೂಡ ಹಲವು ಬಾಲಿವುಡ್ ಹಾಗೂ ಮಾಡೆಲ್‌ಗಳ ಜೊತೆ ಥಳುಕುಹಾಕಿಕೊಂಡಿದೆ. ಬಾಲಿವುಡ್ ನಟಿ ಎಲ್ಲಿ ಅವ್ರಾಮ್, ಇಷಾ ಗುಪ್ತಾ ಸೇರಿದಂತೆ ಹಲವು ನಟಿಯರ ಜೊತೆಗೆ ಪಾಂಡ್ಯ ಹೆಸರು ಕೇಳಿಬಂದಿತ್ತು. ಆದರೆ ಹಾರ್ದಿಕ್ ಪಾಂಡ್ಯ ಮಾತ್ರ ನಾವು ಬೆಸ್ಟ್ ಫ್ರೆಂಡ್ಸ್ ಎಂದಿದ್ದರು.
ಇದೇ ಮೊದಲ ಬಾರಿಗೆ ಹಾರ್ದಿಕ್ ಪಾಂಡ್ಯ ತಮ್ಮ ನಂ.1 ಲವ್ ಕುರಿತು ಮಾತನಾಡಿದ್ದಾರೆ. ಹಾರ್ದಿಕ್ ಪಾಂಡ್ಯ ನಂ.1 ಲವ್ ಬೇರೆ ಯಾರು ಅಲ್ಲ, ಅದು ಟೀಂ ಇಂಡಿಯಾ ಕ್ರಿಕೆಟಿಗ ದಿನೇಶ್ ಕಾರ್ತಿಕ್.
ದಿನೇಶ್ ಕಾರ್ತಿಕ್ ನನ್ನ ನಂ.1 ಲವ್ ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದಾರೆ. ಜೊತೆಗೆ ಕಾರ್ತಿಕ್ ಜೊತೆಗಿನ ಸೆಲ್ಫಿ ಫೋಟೋ ಕೂಡ ಅಪ್‌ಲೋಡ್ ಮಾಡಿದ್ದಾರೆ. ಕುತೂಹಲದಿಂದ ಕಾಯುತ್ತಿದ್ದ ಅಭಿಮಾನಿಗಳಿಗೆ ಹಾರ್ದಿಕ್ ಸರ್ಪ್ರೈಸ್ ನೀಡಿದ್ದಾರೆ.
ಇದನ್ನು ಓದಿ: ತವರಿಗೆ ಆಗಮಿಸೋ ಮುನ್ನ ಕೊಹ್ಲಿ ಜೊತೆ ಅನುಷ್ಕಾ ಶಾಂಪಿಂಗ್!
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.