ಲಂಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಆಯ್ಕೆ ಮಾಡಿದ ಭಜ್ಜಿ

Published : Jun 07, 2017, 05:48 PM ISTUpdated : Apr 11, 2018, 01:07 PM IST
ಲಂಕಾ ವಿರುದ್ಧದ ಪಂದ್ಯಕ್ಕೆ ಟೀಂ ಇಂಡಿಯಾ ತಂಡ ಆಯ್ಕೆ ಮಾಡಿದ ಭಜ್ಜಿ

ಸಾರಾಂಶ

ಭಾರತ ತಂಡದ ಅನುಭವಿ ಬೌಲರ್ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಆಡುವ 11 ಆಟಗಾರರನ್ನು ಪಟ್ಟಿ. ಆ ಪಟ್ಟಿ ಈಗ ನಿಮ್ಮ ಮುಂದೆ...

ನವದೆಹಲಿ(ಜೂ.07): ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಪಾಕಿಸ್ತಾನ ಭರ್ಜರಿಯಾಗಿಯೇ ತನ್ನ ಅಭಿಯಾನವನ್ನು ಆರಂಭಿಸಿದೆ. ಇದೀಗ ನಾಳೆ(ಜೂ.08) ಓವಲ್ ಮೈದಾನದಲ್ಲಿ ಶ್ರೀಲಂಕಾ ಪಡೆಯನ್ನು ಎದುರಿಸಲು ಸಜ್ಜಾಗಿದೆ.

ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಬ್ಯಾಟಿಂಗ್ ಹಾಗೂ ಬೌಲಿಂಗ್'ನಲ್ಲಿ ಬಲಿಷ್ಟವಾಗಿದ್ದು ಶ್ರೀಲಂಕಾ ಮೇಲೆ ಸವಾರಿ ನಡೆಸಲು ಎದುರು ನೋಡುತ್ತಿದೆ. ಅದರಲ್ಲೂ ಆರಂಭಿಕರಾದ ರೋಹಿತ್ ಶರ್ಮಾ, ಶಿಖರ್ ಧವನ್, ಮಧ್ಯಮ ಕ್ರಮಾಂಕದಲ್ಲಿ ಯುವರಾಜ್ ಸಿಂಗ್ ಫಾರ್ಮ್'ಗೆ ಮರಳಿದ್ದು ಕೊಹ್ಲಿ ಪಡೆಗೆ ಆನೆಬಲ ಬಂದಂತಾಗಿದೆ.

ಇನ್ನು ಬೌಲಿಂಗ್'ನಲ್ಲೂ ಭುವಿ, ಬುಮ್ರಾ ಮ್ಯಾಜಿಕ್ ಮಾಡುತ್ತಿರುವುದರಿಂದ ಟೀಂ ಇಂಡಿಯಾ ಗೆಲ್ಲುವ ಕುದುರೆಯೆನಿಸಿದೆ. ಲಂಕಾ ಮಣಿಸಿದರೆ ಟೀಂ ಇಂಡಿಯಾ ಅನಾಯಾಸವಾಗಿ ಸೆಮಿಫೈನಲ್ ತಲುಪಲಿದೆ.

ಭಾರತ ತಂಡದ ಅನುಭವಿ ಬೌಲರ್ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಆಡುವ 11 ಆಟಗಾರರನ್ನು ಪಟ್ಟಿ. ಆ ಪಟ್ಟಿ ಈಗ ನಿಮ್ಮ ಮುಂದೆ...

ರೋಹಿತ್ ಶರ್ಮಾ

ಶಿಖರ್ ಧವನ್

ವಿರಾಟ್ ಕೊಹ್ಲಿ(ನಾಯಕ)

ಯುವರಾಜ್ ಸಿಂಗ್

ಕೇದಾರ್ ಜಾಧವ್

ಎಂ.ಎಸ್ ಧೋನಿ(ವಿಕೆಟ್ ಕೀಪರ್)

ಹಾರ್ದಿಕ್ ಪಾಂಡ್ಯ

ರವೀಂದ್ರ ಜಡೇಜಾ

ಉಮೇಶ್ ಯಾದವ್

ಜಸ್ಪ್ರೀತ್ ಬುಮ್ರಾ

ಮೊಹಮ್ಮದ್ ಶಮಿ

ಹರ್ಭಜನ್ ಸಿಂಗ್ ಆಯ್ಕೆ ಮಾಡಿದ ತಂಡದಲ್ಲಿ ಅನುಭವಿ ಆಫ್'ಸ್ಪಿನ್ನರ್ ಆರ್. ಅಶ್ವಿನ್ ಹಾಗೂ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರನ್ನು ಕೈಬಿಟ್ಟಿದ್ದು ಸಾಕಷ್ಟು ಅಚ್ಚರಿಗೆ ಕಾರಣವಾಗಿದೆ. ಲಂಕಾ ವಿರುದ್ದ ಯಾರ್ಯಾರು ಕಾಣಿಸಿಕೊಳ್ಳಲ್ಲಿದ್ದಾರೆ ಎನ್ನುವುದು ನಾಳಿನ ಪಂದ್ಯದಲ್ಲಿ ಸ್ಪಷ್ಟವಾಗಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ತಂಡ ಪ್ರತಿನಿಧಿಸಿದ ಪಾಕಿಸ್ತಾನ ಕಬಡ್ಡಿ ಪಟು, ಇಸ್ಲಾಮಾಬಾದ್‌ನಲ್ಲಿ ಕೋಲಾಹಲ
ಐಪಿಎಲ್ ಹರಾಜಿನ ಬಳಿಕ 4 ಬಲಿಷ್ಠ ತಂಡ ಆಯ್ಕೆ ಮಾಡಿದ ಆರ್. ಅಶ್ವಿನ್; ಚೆನ್ನೈ ಸೂಪರ್ ಕಿಂಗ್ಸ್‌ ತಂಡಕ್ಕಿಲ್ಲ ಸ್ಥಾನ!