ಕೊನೆಯ ನಿಮಿಷದಲ್ಲಿ ಗೋಲ್ ಹೊಡೆದ ಗುರ್'ಜಂತ್: ರೋಚಕ ಡ್ರಾ ಸಾಧಿಸಿದ ಭಾರತ

Published : Oct 18, 2017, 08:18 PM ISTUpdated : Apr 11, 2018, 12:53 PM IST
ಕೊನೆಯ ನಿಮಿಷದಲ್ಲಿ ಗೋಲ್ ಹೊಡೆದ ಗುರ್'ಜಂತ್: ರೋಚಕ ಡ್ರಾ ಸಾಧಿಸಿದ ಭಾರತ

ಸಾರಾಂಶ

.ಜಪಾನ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ  ಸತತ ಮೂರು ಪಂದ್ಯಗಳನ್ನು ಜಯಿಸಿದ್ದ ಭಾರತ ತಂಡಕ್ಕೆ ಎದುರಾಳಿ ಆಟಗಾರರು ಪ್ರಬಲ ಪೈಪೋಟಿ ನೀಡಿದರು.

ಢಾಕಾ(ಅ.18): ಇನ್ನೇನು ಪಂದ್ಯ ಸೋಲುತ್ತದೆ ಎಂದುಕೊಂಡಿದ್ದವರಿಗೆ ಕೊನೆಯ ನಿಮಿಷದಲ್ಲಿ ಸ್ಟ್ರೈಕರ್ ಗುರುಜಂತ್ ಸಿಂಗ್ ಗೋಲು ಹೊಡೆದ ಪರಿಣಾಮ ಭಾರತ ತಂಡ ದಕ್ಷಿಣ ಕೊರಿಯಾ ವಿರುದ್ಧ 1-1 ಗೋಲುಗಳ ಅಂತರದಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡಿತು.

ಢಾಕಾದಲ್ಲಿ ನಡೆಯುತ್ತಿರುವ ಏಷ್ಯಾಕಪ್ ಹಾಕಿ ಟೂರ್ನಿಯ ದಕ್ಷಿಣ ಕೊರಿಯಾ ವಿರುದ್ಧದ ಸೂಪರ್ 4'ನ ಮೊದಲ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.ಜಪಾನ್, ಬಾಂಗ್ಲಾದೇಶ ಹಾಗೂ ಪಾಕಿಸ್ತಾನ ವಿರುದ್ಧ  ಸತತ ಮೂರು ಪಂದ್ಯಗಳನ್ನು ಜಯಿಸಿದ್ದ ಭಾರತ ತಂಡಕ್ಕೆ ಎದುರಾಳಿ ಆಟಗಾರರು ಪ್ರಬಲ ಪೈಪೋಟಿ ನೀಡಿದರು. ದ್ವೀತೀಯ ಹಂತದವರೆಗೂ ಎರಡೂ ತಂಡಗಳು ಯಾವುದೇ ಗೋಲು ಗಳಿಸಿರಲಿಲ್ಲ.

ತೃತೀಯಾರ್ದದ 41ನೇ ನಿಮಿಷದಲ್ಲಿ ಎದುರಾಳಿ ತಂಡದ ಜುಂಗ್'ಜುನ್  ಗೋಲು ಹೊಡೆದ ಪರಿಣಾಮ ದಕ್ಷಿಣ ಕೊರಿಯಾ ತಂಡ 1-0 ಮುನ್ನಡೆ ಸಾಧಿಸಿದರು. ಆದರೆ ಭಾರತ ತಂಡದ ಆಟಗಾರರು ಎಷ್ಟೇ ಪ್ರಯತ್ನ ಪಟ್ಟರೂ ಕೊನೆಯ ಒಂದು ನಿಮಿಷದ ವರೆಗೂ ಗೋಲು ಗಳಿಸಲು ಸಾಧ್ಯವಾಗಲಿಲ್ಲ. ಇನ್ನೇನು ಪಂದ್ಯ ಮುಗಿದು ಭಾರತ ಸೋಲೊಪ್ಪಿಕೊಳ್ಳಬೇಕು ಎನ್ನುವಷ್ಟರಲ್ಲಿ ಕಡೆಯ ಒಂದು ನಿಮಿಷದಲ್ಲಿ ಪೆನಾಲ್ಟಿ ಕಾರ್ನಾರ್ ಅವಕಾಶ ದೊರಕಿತು.

ಈ ಅವಕಾಶವನ್ನು ಬಳಸಿಕೊಂಡ ಗುರ್'ಜಂತ್ ಗೋಲು ಗಳಿಸುವಲ್ಲಿ ಸಫಲರಾದರು. ನಾಳೆ ಮಲೇಷ್ಯಾ ತಂಡದ ವಿರುದ್ಧ ಸೂಪರ್ 4 ಹಂತದ 2ನೇ ಪಂದ್ಯವನ್ನು ಎದುರಿಸಲಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್