ಕೀವಿಸ್ ಭಾರತಕ್ಕೆ ಸುಲಭದ ತುತ್ತಲ್ಲ: ಯಾವ್ಯಾವ ಬೌಲರ್ ಭಾರತಕ್ಕೆ ಕಂಟಕರಾಗಿದ್ದಾರೆ ಗೊತ್ತಾ..?

Published : Oct 18, 2017, 02:24 PM ISTUpdated : Apr 11, 2018, 12:50 PM IST
ಕೀವಿಸ್ ಭಾರತಕ್ಕೆ ಸುಲಭದ ತುತ್ತಲ್ಲ: ಯಾವ್ಯಾವ ಬೌಲರ್ ಭಾರತಕ್ಕೆ ಕಂಟಕರಾಗಿದ್ದಾರೆ ಗೊತ್ತಾ..?

ಸಾರಾಂಶ

ನಂಬರ್​​​ 1 ತಂಡಕ್ಕೆ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಬಿಗ್​​ ಚಾಲೆಂಜ್​ ಎದುರಾಗುತ್ತಿದೆ. ನ್ಯೂಜಿಲೆಂಡ್'​​​​ನಿಂದ ಬಂದಿರುವ ಸುನಾಮಿ ಕೊಹ್ಲಿ ಹುಡುಗರನ್ನು ಕೊಚ್ಚಿಕೊಂಡು ಹೋಗಲು ಎದುರು ನೋಡುತ್ತಿದೆ. ಆ ಸುನಾಮಿಯನ್ನ ತಡೆಯಲು ಈಗ ಕೊಹ್ಲಿ ಹುಡುಗರು ದೊಡ್ಡ ತಪಸ್ಸೇ ನಡೆಸಬೇಕಾಗಿದೆ. ಅಷ್ಟಕ್ಕೂ ಟೀಂ ಇಂಡಿಯಾದ ನಾಶಕ್ಕೆ ಕಾದು ಕುಳಿತಿರುವ ಆ ಸುನಾಮಿ ಯಾವುದು..? ಇಲ್ಲಿದೆ ವಿವರ.  

ದೂರದ ನ್ಯೂಜಿಲೆಂಡ್'​​ನಿಂದ ಸುನಾಮಿಯೊಂದು ಬಂದಿದೆ. ಈಗಾಗಲೇ ಭಾರತಕ್ಕೆ ಆಗಮಿಸಿರುವ ಆ ಕಂಟಕ ಪ್ರಾಯ ಸುನಾಮಿ ಭಾನುವಾರ ಟೀಂ ಇಂಡಿಯಾವನ್ನ ಅಪ್ಪಳಿಸಲಿದೆ. ಕೊಂಚ ಆಯತಪ್ಪಿದ್ರೂ ಕೊಹ್ಲಿ ಹುಡುಗರು ಸುನಾಮಿಯ ಹೊಡೆತಕ್ಕೆ ಕೊಚ್ಚಿ ಹೋಗಲಿದ್ದಾರೆ. ಅಯ್ಯೋ ಯಾವುದಪ್ಪ ಆ ಸುನಾಮಿ ಅಂತ ಯೋಚನೆ ಮಾಡ್ತಿದ್ದೀರಾ. ಅದು ಬೇಱರು ಅಲ್ಲ ನ್ಯೂಜಿಲೆಂಡ್​​​​'ನ ಎಡಗೈ ವೇಗಿ, ಸದ್ಯ ವಿಶ್ವ ಕ್ರಿಕೆಟ್'​ನ ಮೋಸ್ಟ್​​​ ಡೇಂಜರಸ್​​​ ಬೌಲರ್​​​ ಟ್ರೆಂಟ್​​​ ಬೋಲ್ಟ್​​​.

ಕೊಹ್ಲಿ ಹುಡುಗರ ಮೇಲೆ ಬೋಲ್ಟ್​​​​ ಸವಾರಿ ಗ್ಯಾರಂಟಿ

ಎಂಥಂಥ ಮಾರಕ ಬೌಲರ್​​ಗಳನ್ನೇ ನುಂಗಿ ನೀರು ಕುಡಿದಿರುವ ಕೊಹ್ಲಿ ಹುಡುಗರಿಗೆ ಟ್ರೆಂಟ್​​​ ಬೋಲ್ಟ್​​​ ಯಾವ ಲೆಕ್ಕ. ಇದೇ ಭಾನುವಾರದಿಂದ ನಡೆಯೋ ಏಕದಿನ ಸರಣಿಯಲ್ಲಿ ಗ್ಯಾರೆಂಟಿ ಬೋಲ್ಟ್​​​​ನ ನೆಟ್​​ ಮತ್ತು ಬೋಲ್ಟ್​​ಗಳು ಲೂಸ್​​ ಆಗಲಿವೆ ಅಂತ ನೀವೇನಾದ್ರೂ ಅಂದುಕೊಂಡರೆ ಅದು ತಪ್ಪಾಗುತ್ತದೆ. ಕಾರಣ ಟೀಂ ಇಂಡಿಯಾ ಎಡಗೈ ವೇಗಿಗಳಂದ್ರೆ ಗಢಗಢ ಅಂತ ನಡಗುತ್ತಾರೆ.

ಎಡಗೈ ವೇಗಿಗಳಿಗೆ ವಿಶ್ವಶ್ರೇಷ್ಠ  ಬ್ಯಾಟ್ಸ್​​ಮನ್​ಗಳು ಗಢಗಢ

ಟ್ರೆಂಟ್​​​​ ಬೋಲ್ಟ್​​ ಅನ್ನೋ ಎಡಗೈ ವೇಗಿ ಅಬ್ಬರಿಸಲಿದ್ದಾನೆ ಅನ್ನೋದಕ್ಕೂ ಕಾರಣವಿದೆ. ಅದೇನಂದ್ರೆ ಕ್ರಿಕೆಟ್​​ ಹಿಸ್ಟರಿಯಲ್ಲಿ ಎಡಗೈ ಬೌಲರ್​​​ಗಳೆದುರು ಎಂದೂ ನಮ್ಮವರ ಆಟ ನಡೆದೇ ಇಲ್ಲ. ಅದಕ್ಕೆ ರೀಸೆಂಟ್​​ ಎಕ್ಸಾಂಪಲ್​ ಅಂದ್ರೆ ಈ ಬಾರಿ ಚಾಂಪಿಯನ್ಸ್​​​ ಟ್ರೋಫಿ ಮಿಸ್​​​​ ಆಗಲು ಕಾರಣ ಪಾಕ್'​ನ ಎಡಗೈ ವೇಗಿ ಮೊಹಮ್ಮದ್​​ ಆಮೀರ್​​. ಅಂದು ಆಮೀರ್​​ನ ಆರ್ಭಟಕ್ಕೆ ಕೊಹ್ಲಿ ಹುಡುಗರು ಧೂಳೀಪಟವಾಗಿದ್ರು.

ಅಮೀರ್​​ ಮಾತ್ರ ಟೀಂ ಇಂಡಿಯವನ್ನ ಕಾಡಿಲ್ಲ: ಇಂಡಿಯನ್​​ ಕ್ರಿಕೆಟ್​​ ಹಿಸ್ಟರಿಯಲ್ಲಿದ್ದಾರೆ ಮಾರಕ ಎಡಗೈ ಬೌಲರ್ಸ್​​

ಕೇವಲ ಪಾಕ್​​​ ಬೌಲರ್​​ ಮಾತ್ರ ಇದುವರೆಗೂ ಟೀಂ ಇಂಡಿಯಾವನ್ನ ಕಾಡಿಲ್ಲ. ಅರಿಯಾಗಿ ನಮ್ಮ ಇಂಡಿಯನ್​ ಕ್ರಿಕೆಟ್​​ ಹಿಸ್ಟರಿಯನ್ನ ತೆಗೆದುಬಿಟ್ರೆ ನಿಮ್ಮನ್ನ ಬೆಚ್ಚಿ ಬೀಳಿಸೋ ಸಂಗತಿಗಳು ಎದುರಾಗ್ತಾವೆ. ಅದೇನಂದ್ರೆ ಬ್ಲೂ ಬಾಯ್ಸ್​​​ ಇದುವರೆಗೂ ಯಾವುದೇ ಎಡಗೈ ವೇಗಿಗಳೆದುರು ಅಬ್ಬರಿಸಿಯೇ ಇಲ್ಲ. ಬದಲಾಗಿ ಟೀಂ ಇಂಡಿಯಾವನ್ನೆ ಲೆಫ್ಟಿಗಳು ಹೆಚ್ಚು ಕಾಡಿಬಿಟ್ಟಿದ್ದಾರೆ.

ಅಕ್ರಂ ದಾಳಿಗೆ ಧೂಳಿಪಟವಾಗ್ತಿದ್ದ ಟೀಂ ಇಂಡಿಯಾ

ಈಗ ಹೇಗೆ ಮೊಹಮ್ಮದ್​​ ಆಮೀರ್​​​ ಕೊಹ್ಲಿ ಹುಡುಗರನ್ನ ಕಾಡ್ತಿದ್ದಾರೋ ಹಾಗೇ 90ರ ದಶಕದಲ್ಲಿ ಮತ್ತೊಬ್ಬ ಪಾಕ್​ ಎಡಗೈ ವೇಗಿ ವಾಸಿಂ ಅಕ್ರಂ ಗೋಳು ಹೊಯ್ದುಕೊಂಡಿದ್ದಾರೆ. ಅಕ್ರಂರ ಭಯಂಕರ ಯಾರ್ಕರ್​​ಗಳಿಗೆ ಅಂದಿನ ಬ್ಲೂಬಾಯ್ಸ್​​​ ನಲುಗಿ ಹೋಗಿದ್ರು.

ಚಮಿಂದಾ ವಾಸ್​​​​ ಸ್ವಿಂಗ್​ಗೆ ಬೆದರಿದ್ದ ಭಾರತ

ಅಕ್ರಂ ನಂತರ, ಭಾರತದ ಕ್ರಿಕೆಟ್​​​ ಅನ್ನ ಅಕ್ಷರಶಹ ಕಾಡಿದ್ದು ಅಂದ್ರೆ ಅದು ಶ್ರೀಲಂಕಾದ ಎಡಗೈ ವೇಗಿ ಚಮಿಂಡಾ ವಾಸ್​​, 2000ರಲ್ಲಿ ಕೊಕೊ ಕೋಲಾ ಟೂರ್ನಿಯ ಫೈನಲ್​ನಲ್ಲಿ ವಾಸ್​​​ ಮಾಡಿದ ಮೋಡಿ ಇಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಂದು ಟೀಂ ಇಂಡಿಯಾವನ್ನ ಹಣ್ಣುಗಾಯಿ ನೀರ್​ಗಾಯಿ ಮಾಡಿಬಿಟ್ಟಿದ್ರು.

ಮಿಚೆಲ್​​ ಜಾನ್ಸನ್​​ ಅಂದ್ರೆ ಈಗಲೂ ಟೀಂ ಇಂಡಿಯಾಗೆ ದಿಗಿಲು

ಕಾಂಗರೂ ನಾಡಿನ ಮಿಚೆಲ್​ ಜಾನ್ಸನ್​​ ಟೀಂ ಇಂಡಿಯಾವನ್ನ ಹೇಗೆಲ್ಲಾ ಗೋಳು ಹೊಯ್ದುಕೊಂಡಿದ್ದಾರೆ ಗೊತ್ತಾ. ಯಾವಾಗಲೇ ಟೀಂ ಇಂಡಿಯಾ ಆಸ್ಟ್ರೇಲಿಯಾಗೆ ಹೋಗಲಿ. ಅಥವಾ ಆಸ್ಟ್ರೇಲಿಯಾ ಭಾರತಕ್ಕೆ ಬರಲಿ, ಹೆಚ್ಚು ಕಾಡುತ್ತಿದ್ದಿದ್ದು ಎಡಗೈ ವೇಗಿ ಮಿಚೆಲ್​ ಜಾನ್ಸನ್​​.

ಕ್ರಿಕೆಟ್​​​ ಶಿಶು ಬಾಂಗ್ಲಾದ ವೇಗಿಗೂ ತಲೆಬಾಗಿತ್ತು ಭಾರತ

ನಿಮಗೆ ನೆನಪಿರಬಹುದು, ಸರಿಯಾಗಿ 2 ವರ್ಷಗಳ ಹಿಂದೆ ಅಂದ್ರೆ 2015ರಲ್ಲಿ ಟೀಂ ಇಂಡಿಯಾ ಬಾಂಗ್ಲಾದೇಶಕ್ಕೆ ತೆರಳಿತ್ತು. ಆಗ ಬಾಂಗ್ಲಾದ ಮುಸ್ತಾಫಿಜುರ್​​​ ರೆಹಮಾನ್​ ಎಲ್ಲರನ್ನ ದಂಗು ಬಡಿಸಿದ್ರು. ಟೀಂ ಇಂಡಿಯಾವನ್ನ ರೆಹಮಾನ್​ ಧ್ವಂಸಗೊಳಿಸಿದ್ರು. ಧೋನಿ ಬಾಯ್ಸ್​​ ಸರಣಿ ಸೋತು ಭಾರಿ ಮುಖಭಂಗ ಅನುಭವಿಸಿದ್ರು.

ಇದೇ ಕಾರಣಕ್ಕೆ ನಾವು ಮೊದಲೇ ಹೇಳಿದ್ದು ಕೊಹ್ಲಿ ಹುಡುಗರು ಕೊಂಚ ಯಾಮಾರಿದ್ರೂ ನ್ಯೂಜಿಲೆಂಡ್​​​ ವಿರುದ್ಧದ ಸರಣಿ ಕೈ ತಪ್ಪಲಿದೆ ಅಂತ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್