ಕನ್ನಡಿಗ ಅನಿಲ್ ಕುಂಬ್ಳೆಗೆ ಬಿಸಿಸಿಐನಿಂದ ಮತ್ತೆ ಅವಮಾನ: ಬರ್ತ್'ಡೇ ವಿಶ್ ಮಾಡೋದ್ರಲ್ಲೂ ಪಾಲಿಟಿಕ್ಸ್

Published : Oct 18, 2017, 01:56 PM ISTUpdated : Apr 11, 2018, 01:10 PM IST
ಕನ್ನಡಿಗ ಅನಿಲ್ ಕುಂಬ್ಳೆಗೆ ಬಿಸಿಸಿಐನಿಂದ ಮತ್ತೆ ಅವಮಾನ: ಬರ್ತ್'ಡೇ ವಿಶ್ ಮಾಡೋದ್ರಲ್ಲೂ ಪಾಲಿಟಿಕ್ಸ್

ಸಾರಾಂಶ

ನಿನ್ನೆ ಅನಿಲ್ ಕುಂಬ್ಳೆ ಹುಟ್ಟುಹಬ್ಬವನ್ನ ಆಚರಿಸಿಕೊಂಡರು. ಹಾಲಿ-ಮಾಜಿ ಆಟಗಾರರೆಲ್ಲಾ ವಿಶ್ ಮಾಡಿದ್ರು. ಆದರೆ ಕೆಲ ಹಾಲಿ ಆಟಗಾರರು ವಿಶ್ ಮಾಡುವ ಗೋಜಿಗೆ ಹೋಗಲಿಲ್ಲ. ಇನ್ನು ಬಿಸಿಸಿಐ ಬರ್ತ್​ಡೇ ದಿನವೇ ಜಂಬೋಗೆ ಅವಮಾನ ಮಾಡಿತು. ಆ ಎಲ್ಲದರ ವಿವರ ಲ್ಲಿದೆ ನೋಡಿ.

ದುಡ್ಡಿನ ಮದದಲ್ಲಿ ತೇಲುತ್ತಿರುವ ಬಿಸಿಸಿಐ ಬಿಗ್​ ಬಾಸ್'​ಗಳಿಗೆ ಲೆಜೆಂಡ್ ಕ್ರಿಕೆಟರ್ಸ್ ಕಣ್ಣಿಗೆ ಕಾಣ್ತಿಲ್ಲ. ಮಾಜಿ ಆಟಗಾರರನ್ನ ಪದೇಪದೇ ಅವಮಾನ ಮಾಡುತ್ತಲೇ ಇದ್ದಾರೆ. ಅದರಲ್ಲೂ ಕನ್ನಡಿಗ ಅನಿಲ್ ಕುಂಬ್ಳೆನಂತೂ ಇನ್ನಿಲ್ಲದಂತೆ ಅವಮಾನಿಸುತ್ತಿದ್ದಾರೆ. ಬರ್ತ್​ಡೇ ದಿನವೂ ಅನ್ನೋದೇ ಜಂಬೋಗೆ ಅವಮಾನ ಮಾಡಿದ್ದಾರೆ. ಆದ್ರೂ ಜಂಬೋ ಬಿಸಿಸಿಐ ಅವಮಾನ ಸಹಿಸಿಕೊಂಡು ಥ್ಯಾಂಕ್ಸ್ ಹೇಳಿದ್ದಾರೆ.

ನಿನ್ನೆ ಜಂಬೋಗೆ 47ನೇ ಹುಟ್ಟುಹಬ್ಬ

ಕನ್ನಡಿಗ ಅನಿಲ್ ಕುಂಬ್ಳೆ ನಿನ್ನೆ 47ನೇ ಹುಟ್ಟುಹಬ್ಬ. ಅವರ ಅಭಿಮಾನಿಗಳು ಬೆಳಗ್ಗೆಯಿಂದಲೇ ಜಂಬೋಗೆ ವಿಶ್ ಮಾಡಿದ್ರು. ಎಲ್ಲ ಭಾರತೀಯ ಕ್ರಿಕೆಟರ್ಸ್​ಗೆ ವಿಶ್ ಮಾಡುವ ಬಿಸಿಸಿಐ, ಕುಂಬ್ಳೆಗೂ ಟ್ವೀಟರ್​ನಲ್ಲಿ ವಿಶ್ ಮಾಡಿತ್ತು. ಆದ್ರೆ ಬಿಸಿಸಿಐ ಮಾಡಿದ ಟ್ವೀಟ್​ ಅನಿಲ್​ ಕುಂಬ್ಳೆಯವರನ್ನು ಅವಮಾನಿಸಿತು. ಟೀಂ ಇಂಡಿಯಾ ಮಾಜಿ ಬೌಲರ್​'ಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ಬಿಸಿಸಿಐ ಟ್ವೀಟ್​ ಮಾಡಿತು.

ಭಾರತೀಯ ಕ್ರಿಕೆಟ್ ಕಂಡ ಒಬ್ಬ ಲೆಜೆಂಡ್ ಬೌಲರ್ ಅನಿಲ್ ಕುಂಬ್ಳೆ. 17 ವರ್ಷಗಳ ಕಾಲ ಭಾರತಕ್ಕಾಗಿ ಆಡಿದ್ದಾರೆ. ಮಾಜಿ ನಾಯಕ ಮತ್ತು ಮಾಜಿ ಕೋಚ್. ಆದ್ರೂ ಬಿಸಿಸಿಐ ಮಾತ್ರ ಸಾಮಾನ್ಯ ಬೌಲರ್​​​​​​​​​​ ಅನ್ನೋ ಅರ್ಥದಲ್ಲಿ ಟ್ವೀಟ್ ಮಾಡಿ ಬರ್ತ್​ಡೇಗೆ ವಿಶ್ ಮಾಡಿತ್ತು. ಇದಕ್ಕೆ ಕ್ರಿಕೆಟ್ ಫ್ಯಾನ್ಸ್ ಗರಂ ಆದ್ರು. ಬಿಸಿಸಿಐ ಅನ್ನ ತರಾಟೆಗೆ ತೆಗೆದುಕೊಂಡ್ರು. ಕ್ಷಣ ಮಾತ್ರದಲ್ಲಿ ಬಿಸಿಸಿಐ ಟ್ವೀಟ್ ಟ್ರಾಲ್ ಆಯ್ತು. ಬೇಗ ಎಚ್ಚೆತ್ತುಕೊಂಡ ಬಿಸಿಸಿಐ, ಆ ಟ್ವೀಟ್​ ಡಿಲೀಟ್ ಮಾಡಿತು. ಬಳಿಕ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಹುಟ್ಟುಹಬ್ಬದ ಶುಭಾಶಯಗಳು ಅಂತ ರೀ ಟ್ವೀಟ್ ಮಾಡ್ತು.

ಐಸಿಸಿ ನೋಡಿ ಕಲಿಯಬೇಕು ಬಿಸಿಸಿಐ

ಲೆಜೆಂಡ್ ಕ್ರಿಕೆಟರ್​'ಗಳ ಬರ್ತ್​'ಡೇಗೆ ಹೇಗೆ ವಿಶ್ ಮಾಡ್ಬೇಕು ಅನ್ನೋದನ್ನ ಐಸಿಸಿ ನೋಡಿ ಕಲಿಯಬೇಕಿದೆ ಬಿಸಿಸಿಐ. ಜಂಬೋ ಬರ್ತ್ ಡೇ​ಗೆ ಐಸಿಸಿ ಸಹ ವಿಶ್ ಮಾಡಿದೆ. 956 ವಿಕೆಟ್ ಪಡೆದು ಅಂತಾರಾಷ್ಟ್ರೀಯ ಕ್ರಿಕೆಟ್'​ನಲ್ಲಿ ಗರಿಷ್ಠ ವಿಕೆಟ್ ಪಡೆದ 3ನೇ ಬೌಲರ್. ಲೆಜೆಂಡ್ ಲೆಗ್​ ಸ್ಪಿನ್ನರ್​ ಅನಿಲ್ ಕುಂಬ್ಳೆಗೆ ಜನ್ಮ ದಿನದ ಶುಭಾಶಯಗಳು ಅಂತ ಟ್ವೀಟ್ ಮಾಡಿದೆ. ಐಸಿಸಿಯೇ ಹೀಗೆ ವಿಶ್ ಮಾಡಿರಬೇಕಾದ್ರೆ ಭಾರತವನ್ನ ಪ್ರತಿನಿದಿಸಿರುವ ನಮ್ಮ ಆಟಗಾರನಿಗೆ ಬಿಸಿಸಿಐ ಹೀಗಾ ವಿಶ್ ಮಾಡೋದು. ಇದು ವಿಶ್ ಅಲ್ಲ, ಅವಮಾನ.

ಕುಂಬ್ಳೆಗೆ ಮಾಜಿ ಆಟಗಾರರು ವಿಶ್..!: ಕೊಹ್ಲಿಗೆ ಹೆದರಿ ವಿಶ್ ಮಾಡಲಿಲ್ಲ ಹಾಲಿ ಪ್ಲೇಯರ್ಸ್​

ಭಾರತೀಯ ಮಾಜಿ ಆಟಗಾರರು ಜಂಬೋಗೆ ವಿಶ್ ಮಾಡಿದ್ದಾರೆ. ಸದ್ಯ ಟೀಂ ಇಂಡಿಯಾ ಪರ ಆಡುತ್ತಿರುವ ಕೆಲ ಆಟಗಾರರು ಮಾತ್ರ ವಿಶ್ ಮಾಡಿದ್ರು. ಕೆಲ ಆಟಗಾರರು ವಿಶ್ ಮಾಡೇ ಇಲ್ಲ. ಮೊದ್ಲೇ ನಾಯಕ ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆಗೆ ಆಗೋದಿಲ್ಲ. ಅತದ್ರಲ್ಲಿ ವಿಶ್ ಮಾಡಿ ಯಾಕೆ ಟೀಮ್​ನಲ್ಲಿ ಸ್ಥಾನ ಕಳೆದುಕೊಳ್ಳಬೇಕು ಅನ್ನೋ ಭೀತಿಯಲ್ಲಿ ಕೆಲ ಆಟಗಾರರು ವಿಶ್ ಮಾಡೋ ಗೋಜಿಗೆ ಹೋಗೇ ಇಲ್ಲ.

ಟೆಸ್ಟ್​ ಕ್ರಿಕೆಟ್​ನಲ್ಲಿ 3ನೇ ಗರಿಷ್ಠ ವಿಕೆಟ್ ಟೇಕರ್. ಟೀಂ ಇಂಡಿಯಾ ಪರ ಗರಿಷ್ಠ ವಿಕೆಟ್ ಸರದಾರ. ಆಟಗಾರನಾಗಿ ಸಾಕಷ್ಟು ಸಕ್ಸಸ್ ಕಂಡಿದ್ದಾರೆ. ನಾಯಕನಾಗಿಯೂ ಯಶಸ್ವಿಯಾಗಿದ್ದಾರೆ. ಕೋಚ್ ಆಗಿಯೂ ಯಶಸ್ಸು ಸಾಧಿಸಿದ್ದಾರೆ. ಆದ್ರೆ ವಿರಾಟ್ ಕೊಹ್ಲಿ ಜೊತೆ ಹೊಂದಾಣಿಕೆ ಆಗಲಿಲ್ಲ ಅನ್ನೋ ಒಂದೇ ಕಾರಣಕ್ಕೆ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಅಷ್ಟಕ್ಕೆ ಬಿಸಿಸಿಐ ಹೀಗಾ ಅವಮಾನ ಮಾಡೋದು. ಆದ್ರೂ ಬಿಸಿಸಿಐಗೆ ಕುಂಬ್ಲೆ ಥ್ಯಾಂಕ್ಸ್ ಹೇಳಿದ್ದಾರೆ. ಜಂಬೋ ಎಂದಿದ್ದರೂ ಜಂಬೋನೇ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವರುಣ್ ಗೂಗ್ಲಿಗೆ ಸೌತ್ ಆಫ್ರಿಕಾ ಪಂಚರ್, ಟಿ20 ಸರಣಿ ವಶಪಡಿಸಿಕೊಂಡ ಟೀಂ ಇಂಡಿಯಾ
ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ಹಾರ್ದಿಕ್ ದಾಖಲೆ, ಸೌತ್ ಆಫ್ರಿಕಾಗೆ 232 ರನ್ ಟಾರ್ಗೆಟ್