ಇರಾನಿ ಕಪ್: ರೆಸ್ಟ್ ಆಫ್ ಇಂಡಿಯಾ ವಿರುದ್ಧ ಮುಂದುವರಿದ ಗುಜರಾತ್ ಪ್ರಾಬಲ್ಯ

By Suvarna Web DeskFirst Published Jan 22, 2017, 2:09 PM IST
Highlights

ಒಟ್ಟಾರೆ 359 ರನ್ ಮುನ್ನಡೆ ಪಡೆದುಕೊಂಡಿರುವ ಗುಜರಾತ್ ತಂಡ ಚಾಂಪಿಯನ್ ಆಗುವ ಎಲ್ಲಾ ಸಾಧ್ಯತೆ ತೋರುತ್ತಿದೆ.

ಮುಂಬೈ(ಜ. 22): ಹಾಲಿ ರಣಜಿ ಚಾಂಪಿಯನ್ ಗುಜರಾತ್ ತಂಡ ಇರಾನಿ ಕಪ್ ಟೂರ್ನಿಯನ್ನೂ ಜಯಿಸುವ ಹಾದಿಯಲ್ಲಿದೆ. ಇಲ್ಲಿಯ ಬ್ರಬೌರ್ನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದ ಮೂರನೇ ದಿನಾಂತ್ಯಕ್ಕೆ ಗುಜರಾತ್ ತಂಡ ತನ್ನ ಎರಡನೇ ಇನ್ನಿಂಗ್ಸಲ್ಲಿ 8 ವಿಕೆಟ್ ನಷ್ಟಕ್ಕೆ 227 ರನ್ ಗಳಿಸಿದೆ. ಇದರೊಂದಿಗೆ ಗುಜರಾತ್ ಒಟ್ಟಾರೆ 359 ರನ್ ಮುನ್ನಡೆ ಪಡೆದುಕೊಂಡಿದೆ.

ನಿನ್ನೆ 2ನೇ ದಿನಾಂತ್ಯಕ್ಕೆ 206 ರನ್'ಗೆ 9 ವಿಕೆಟ್ ಕಳೆದುಕೊಂಡಿದ್ದ ರೆಸ್ಟ್ ಆಫ್ ಇಂಡಿಯಾ ತಂಡದ ಸ್ಕೋರು ಮೊಹಮ್ಮದ್ ಸಿರಾಜ್ ಅವರ ಉಪಯುಕ್ತ ಬ್ಯಾಟಿಂಗ್ ಫಲವಾಗಿ 226 ರನ್'ಗೆ ಉಬ್ಬಿತು. ಆದರೆ, 136 ರನ್ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಗುಜರಾತ್ ತನ್ನ ಎರಡನೇ ಇನ್ನಿಂಗ್ಸ್'ನಲ್ಲಿ ಆರಂಭಿಕ ಆಘಾತಕ್ಕೊಳಗಾಯಿತು. ಆದರೆ, ಪ್ರಿಯಾಂಕ್ ಪಾಂಚಾಲ್, ಪಾರ್ಥಿವ್ ಪಟೇಲ್, ಚಿರಾಗ್ ಗಾಂಧಿ ಅವರ ಉತ್ತಮ ಬ್ಯಾಟಿಂಗ್ ಸಹಾಯದಿಂದ 3ನೇ ದಿನಾಂತ್ಯಕ್ಕೆ 8 ವಿಕೆಟ್ ನಷ್ಟಕ್ಕೆ 227 ರನ್ ಪೇರಿಸಿತು. ಮೊದಲ ಇನ್ನಿಂಗ್ಸಲ್ಲಿ ಸೆಂಚುರಿ ಭಾರಿಸಿದ್ದ ಚಿರಾಗ್ ಗಾಂಧಿ ಎರಡನೇ ಇನ್ನಿಂಗ್ಸಲ್ಲಿ ಅರ್ಧಶತಕ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ನಾಲ್ಕನೇ ದಿನದಾಟದಲ್ಲಿ ಚಿರಾಗ್ ಗಾಂಧಿ ಇನ್ನುಳಿದ ಇಬ್ಬರು ಬಾಲಂಗೋಚಿ ಬ್ಯಾಟುಗಾರರ ನೆರವಿನಿಂದ ಎಷ್ಟು ರನ್ ಸೇರಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ. ಒಟ್ಟಾರೆ 359 ರನ್ ಮುನ್ನಡೆ ಪಡೆದುಕೊಂಡಿರುವ ಗುಜರಾತ್ ತಂಡ ಚಾಂಪಿಯನ್ ಆಗುವ ಎಲ್ಲಾ ಸಾಧ್ಯತೆ ತೋರುತ್ತಿದೆ.

ಸ್ಕೋರು ವಿವರ:

ಗುಜರಾತ್ ಮೊದಲ ಇನ್ನಿಂಗ್ಸ್ 102.5 ಓವರ್ 358 ರನ್ ಆಲೌಟ್

ರೆಸ್ಟ್ ಆಫ್ ಇಂಡಿಯಾ ಮೊದಲ ಇನ್ನಿಂಗ್ಸ್ 75 ಓವರ್ 226 ರನ್ ಆಲೌಟ್

ಗುಜರಾತ್ ಎರಡನೇ ಇನ್ನಿಂಗ್ಸ್ 79 ಓವರ್ 227/8
(ಪ್ರಿಯಾಂಕ್ ಪಾಂಚಾಲ್ 73, ಚಿರಾಗ್ ಗಾಂಧಿ ಅಜೇಯ 55, ಪಾರ್ಥಿವ್ ಪಟೇಲ್ 32, ಧ್ರುವ್ ರಾವಲ್ 23 ರನ್ - ಶಹಬಾಜ್ ನದೀಮ್ 53/4, ಮೊಹಮ್ಮದ್ ಸಿರಾಜ್ 39/2)

click me!