
ಸಿಡ್ನಿ(ಜ. 22): ಪಾಕಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿದೆ. ಇಂದು ನಡೆದ ಸರಣಿಯ ನಾಲ್ಕನೇ ಪಂದ್ಯದಲ್ಲಿ ಪಾಕ್ ವಿರುದ್ಧ ಕಾಂಗರೂಗಳು 86 ರನ್'ಗಳಿಂದ ಭರ್ಜರಿ ಜಯ ಸಾಧಿಸಿದ್ದಾರೆ. ಗೆಲ್ಲಲು 354 ರನ್'ಗಳ ಬೃಹತ್ ಗುರಿ ಬೆನ್ನತ್ತಿದ್ದ ಪಾಕಿಸ್ತಾನೀಯರು ಕೇವಲ 267 ರನ್'ಗೆ ಆಲೌಟ್ ಆದರು. ಶಾರ್ಜಿನ್ ಖಾನ್, ಮೊಹಮ್ಮದ್ ಹಫೀಜ್ ಮತ್ತು ಶೋಯಬ್ ಮಲಿಕ್ ಹೊರತುಪಡಿಸಿ ಉಳಿದ ಪಾಕ್ ಬ್ಯಾಟುಗಾರರು ಸರಿಯಾದ ಹೋರಾಟ ತೋರುವಲ್ಲಿ ವಿಫಲರಾದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿತು. ಡೇವಿಡ್ ವಾರ್ನರ್ ಅಮೋಘ ಶತಕ ಭಾರಿಸಿದರೆ, ಗ್ಲೆನ್ ಮ್ಯಾಕ್ಸ್'ವೆಲ್ ಸಿಡಿಲಬ್ಬರದ ಇನ್ನಿಂಗ್ಸ್ ಮೂಲಕ ತಂಡದ ಸ್ಕೋರು 350 ರನ್ ಗಡಿ ದಾಟುವಂತೆ ನೋಡಿಕೊಂಡರು. ನಾಯಕ ಸ್ಟೀವ್ ಸ್ಮಿತ್ ಮತ್ತು ಟ್ರಾವಿಸ್ ಹೆಡ್ ಕೂಡ ಉಪಯುಕ್ತ ರನ್ ಕಲೆಹಾಕಿದರು. 130 ರನ್ ಗಳಿಸಿದ ಡೇವಿಡ್ ವಾರ್ನರ್ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಈ ಗೆಲುವಿನ ಮೂಲಕ ಆಸ್ಟ್ರೇಲಿಯಾ ತಂಡವು ಸರಣಿಯನ್ನು 3-1ರಿಂದ ವಶಪಡಿಸಿಕೊಂಡಿದೆ. ಜ.26ರಂದು ಸರಣಿಯ ಕೊನೆಯ ಪಂದ್ಯ ನಡೆಯಲಿದೆ.
ಆಸ್ಟ್ರೇಲಿಯಾ 50 ಓವರ್ 353/6
(ಡೇವಿಡ್ ವಾರ್ನರ್ 130, ಗ್ಲೆನ್ ಮ್ಯಾಕ್ಸ್'ವೆಲ್ 78, ಟ್ರಾವಿಸ್ ಹೆಡ್ 51, ಸ್ಟೀವ್ ಸ್ಮಿತ್ 49, ಉಸ್ಮಾನ್ ಖವಾಜ 30 ರನ್ - ಹಸನ್ ಅಲಿ 52/5)
ಪಾಕಿಸ್ತಾನ 43.5 ಓವರ್ 267 ರನ್ ಆಲೌಟ್
(ಶಾರ್ಜೀಲ್ ಖಾನ್ 74, ಶೋಯಬ್ ಮಲಿಕ್ 47, ಮೊಹಮ್ಮದ್ ಹಫೀಜ್ 40, ಬಾಬರ್ ಅಜಮ್ 31, ಇಮದ್ ವಾಸಿಮ್ 25 ರನ್ - ಜೋಷ್ ಹೇಜಲ್ವುಡ್ 54/3, ಅಡಮ್ ಝಂಪಾ 55/3, ಟ್ರವಿಸ್ ಹೆಡ್ 66/2)
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.