ಸೈನಾ ನೆಹ್ವಾಲ್ ಮುಡಿಗೆ ಮಲೇಷ್ಯಾ ಮಾಸ್ಟರ್ಸ್ ಟೂರ್ನಿ ಮುಕುಟ

Published : Jan 22, 2017, 10:48 AM ISTUpdated : Apr 11, 2018, 12:57 PM IST
ಸೈನಾ ನೆಹ್ವಾಲ್ ಮುಡಿಗೆ ಮಲೇಷ್ಯಾ ಮಾಸ್ಟರ್ಸ್ ಟೂರ್ನಿ ಮುಕುಟ

ಸಾರಾಂಶ

ವಿಶ್ವದ ನಂಬರ್ 10 ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಬಳಿಕ ಗಳಿಸಿದ ಮೊದಲ ಟೂರ್ನಿ ಗೆಲುವಾಗಿದೆ. ಅಲ್ಲದೇ, ತಮ್ಮ ವೃತ್ತಿಯಲ್ಲಿ ಇದು ಸೈನಾಗೆ 23ನೇ ಪ್ರಶಸ್ತಿಯಾಗಿದೆ.

ಸಾರವಾಕ್, ಮಲೇಷ್ಯಾ(ಜ. 22): ಗಾಯಾಳುವಾಗಿ ಹಲವು ದಿನಗಳಿಂದ ಆಟದಿಂದ ದೂರ ಉಳಿದಿದ್ದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಮಲೇಷ್ಯಾ ಮಾಸ್ಟರ್ಸ್ ಗ್ರ್ಯಾನ್ ಪ್ರೀ ಗೋಲ್ಡ್ ಪ್ರಶಸ್ತಿ ಸೈನಾ ಮುಡಿಗೇರಿದೆ. ಇಂದು ನಡೆದ ಫೈನಲ್'ನಲ್ಲಿ ಥಾಯ್ಲೆಂಡ್ ಪೋರ್ನಪವೀ ಚೋಚುವೋಂಗ್ ವಿರುದ್ಧ ಸೈನಾ ನೆಹ್ವಾಲ್ 22-20, 22-20ರಿಂದ ರೋಚಕ ಗೆಲುವು ಸಾಧಿಸಿದ್ದಾರೆ. 46 ನಿಮಿಷಗಳ ಕಾಲ ನಡೆದ ಈ ಹಣಾಹಣಿಯಲ್ಲಿ 18 ವರ್ಷದ ಥಾಯ್ಲೆಂಡ್ ಎದುರಾಳಿಯನ್ನು ಮಣಿಸುವ ಮುನ್ನ ಸೈನಾ ಸಾಕಷ್ಟು ಬೆವರು ಹರಿಸಬೇಕಾಯಿತು. 18 ವರ್ಷದ ಆಟಗಾರ್ತಿಯನ್ನು ಸೋಲಿಸಲು ಸೈನಾ ತಮ್ಮೆಲ್ಲಾ ಅನುಭವವನ್ನೂ ಬಳಸಿಕೊಳ್ಳಬೇಕಾಯಿತು.

ವಿಶ್ವದ ನಂಬರ್ 10 ಆಟಗಾರ್ತಿಯಾಗಿರುವ ಸೈನಾ ನೆಹ್ವಾಲ್ ಕಳೆದ ವರ್ಷ ಆಸ್ಟ್ರೇಲಿಯನ್ ಓಪನ್ ಬಳಿಕ ಗಳಿಸಿದ ಮೊದಲ ಟೂರ್ನಿ ಗೆಲುವಾಗಿದೆ. ಅಲ್ಲದೇ, ತಮ್ಮ ವೃತ್ತಿಯಲ್ಲಿ ಇದು ಸೈನಾಗೆ 23ನೇ ಪ್ರಶಸ್ತಿಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೂರನೇ ಮಗುವಿಗೆ ತಂದೆಯಾದ ದಿನೇಶ್ ಕಾರ್ತಿಕ್! ಯುಗಾದಿ ದಿನ ಮಗಳಿಗೆ ಬ್ಯೂಟಿಫುಲ್ ಹೆಸರಿಟ್ಟ ಆರ್‌ಸಿಬಿ ಬ್ಯಾಟಿಂಗ್ ಕೋಚ್
IPL 2026: ಹರ್ಷಿತ್ ರಾಣಾ ಬದಲಿಗೆ ಈ ಚೆನ್ನೈ ಸೂಪರ್ ಕಿಂಗ್ಸ್‌ ಮಾಜಿ ವೇಗಿಗಳ ಮೇಲೆ ಕಣ್ಣಿಟ್ಟ ಕೆಕೆಆರ್!