GS Caltex ರಾಯಭಾರಿಯಾಗಿ ಶಿಖರ್ ಧವನ್ ನೇಮಕ!

Published : Apr 24, 2019, 10:06 PM IST
GS Caltex ರಾಯಭಾರಿಯಾಗಿ ಶಿಖರ್ ಧವನ್ ನೇಮಕ!

ಸಾರಾಂಶ

ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಬೆನ್ನಲ್ಲೇ ಹಲವು  ಕಂಪನಿಗಳು ಶಿಖರ್ ಧವನ್ ಹುಡುಕಿಕೊಂಡು ಬರುತ್ತಿದೆ. ಇದೀಗ ದಕ್ಷಿಣ ಕೊರಿಯಾದ ಲ್ಯೂಬ್ರಿಕೆಂಟ್ ಕಂಪನಿಗೆ ಧವನ್ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ.

ಬೆಂಗಳೂರು(ಏ.24): ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶಿಖರ್ ಧವನ್ ಇದೀಗ GS Caltex ಕಂಪನಿ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.  ಇದೀಗ ಭಾರತದಲ್ಲಿ ದಕ್ಷಿಣ ಕೊರಿಯಾ ಮೂಲದ ಈ ಕಂಪನಿಯ ಪ್ರೀಮಿಯಂ ಲ್ಯೂಬ್ರಿಕೆಂಟ್ ಉತ್ಪನ್ನಗಳ ಪ್ರಚಾರದಲ್ಲಿ ಧವನ್ ಕಾಣಿಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ: ಅಶ್ವಿನ್‌ಗೆ ಡ್ಯಾನ್ಸ್ ಮೂಲಕ ತಿರುಗೇಟು ನೀಡಿದ ಧವನ್- ವಿಡಿಯೋ ವೈರಲ್!

ಲ್ಯೂಬ್ರಿಕೆಂಟ್ ಕಂಪನಿಯ ರಾಯಭಾರಿಯಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಧವನ್, ಸಂತಸ ವ್ಯಕ್ತಪಡಿಸಿದ್ದಾರೆ. ಈ ಕಂಪನಿಯ ಸದಸ್ಯನಾಗಿರುವುದು ಹೆಮ್ಮೆ ಎನಿಸಿದೆ. ಮುಂದಿನ ದಿನಗಳಲ್ಲಿ ಜಿಎಸ್ ಕಾಲ್‌ಟೆಕ್ಸ್ ಜೊತೆ ಎಕ್ಸೈಟಿಂಗ್ ಇನ್ನಿಂಗ್ಸ್ ಆಟವಾಡುವ ವಿಶ್ವಾಸ ನನಗಿದೆ ಎಂದು ಧವನ್ ಹೇಳಿದರು. 

ಇದನ್ನೂ ಓದಿ: ಧವನ್ ಹೋರಾಟದ ಮುಂದೆ ಮಂಕಾಯ್ತು ರಸೆಲ್ ಅಬ್ಬರ- ಡೆಲ್ಲಿಗೆ 7 ವಿಕೆಟ್ ಗೆಲುವು!

ಸದ್ಯ ನಡೆಯುತ್ತಿರುವ ಐಪಿಎಲ್ ಟೂರ್ನಿಯಲ್ಲಿ  ಅಬ್ಬರಿಸುತ್ತಿರುವ ಧವನ್, 11 ಪಂದ್ಯಗಳಿಂದ 401 ರನ್ ಸಿಡಿಸಿದ್ದಾರೆ. ಮುಂಬರುವ ವಿಶ್ವಕಪ್ ಟೂರ್ನಿಯಲ್ಲಿ ಆರಂಭಿಕನಾಗಿ ಕಣಕ್ಕಿಳಿಯಲಿರುವ ಧವನ್ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಂಬೈಗೆ ಬಂದಿಳಿದ ವಿರುಷ್ಕಾ ದಂಪತಿ; ಮೆಸ್ಸಿಯನ್ನು ಭೇಟಿಯಾಗ್ತಾರಾ ವಿರಾಟ್ ಕೊಹ್ಲಿ?
ಟೀಂ ಇಂಡಿಯಾ ಕ್ರಿಕೆಟಿಗರಿಗೆ ದುಶ್ಚಟವಿದೆ, ಆದರೆ ನನ್ನ ಪತಿಗಿಲ್ಲ! ಈ ಕ್ರಿಕೆಟರ್ ಪತ್ನಿಯಿಂದ ವಿವಾದಾತ್ಮಕ ಹೇಳಿಕೆ