ಮುಂದಿನ ವರ್ಷ ಕಮ್'ಬ್ಯಾಕ್ ಮಾಡ್ತೇನೆ; ಗೌಡ ವಿಶ್ವಾಸ

By Suvarna Web DeskFirst Published Jul 7, 2017, 4:19 PM IST
Highlights

"ಮುಂದಿನ ವರ್ಷ ಕಾಮನ್'ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ನಡೆಯಲಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದು ವಿಕಾಸ್ ಹೇಳಿದ್ದಾರೆ.

ಭುವನೇಶ್ವರ್(ಜು.07): ಕಳೆದ ಕೆಲ ವರ್ಷಗಳಿಂದ ಗಾಯದ ಸಮಸ್ಯೆಯಿಂದ ಫಾರ್ಮ್'ಗೆ ಮರಳಲು ವಿಫಲವಾಗುತ್ತಿರುವ ಭಾರತದ ಅಗ್ರ ಡಿಸ್ಕಸ್ ಥ್ರೋ ಪಟು ಕನ್ನಡಿಗ ವಿಕಾಸ್ ಗೌಡ ಮುಂದಿನ ವರ್ಷ ಉತ್ತಮ ಪ್ರದರ್ಶನ ತೋರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುರುವಾರ ನಡೆದ ಏಷ್ಯನ್ ಚಾಂಪಿಯನ್'ಶಿಪ್'ನಲ್ಲಿ 60.81 ಮೀಟರ್ ದೂರ ಎಸೆಯುವ ಮೂಲಕ ಕಂಚಿನ ಪದಕಕ್ಕೆ ತೃಪ್ತರಾಗಿದ್ದರು. ವಿಕಾಸ್ ಗೌಡ 2004ರಲ್ಲಿ 64 ಮೀಟರ್ ಎಸೆದಿರುವುದು ಇಲ್ಲಿಯವರೆಗೆ ವೈಯುಕ್ತಿಕ ದಾಖಲೆಯಾಗಿದೆ. ಆದರೆ ಕಳೆದ ವರ್ಷ ವಿಕಾಸ್ 60 ಮೀಟರ್ ದೂರ ಎಸೆಯಲು ಹೆಣಗಾಡಿದ್ದರು.

"ನಾನು ಕಳೆದ ಮೂರು ವರ್ಷಗಳಲ್ಲಿ ಪದೇಪದೇ ಗಾಯಕ್ಕೆ ಒಳಗಾಗುತ್ತಿದ್ದೇನೆ. ನಿರಂತರ ಐದಾರು ತಿಂಗಳು ಫಿಟ್'ನೆಸ್ ಕಾಪಾಡಿಕೊಂಡರೆ ನಾನು ಮೊದಲಿನ ರೀತಿಯ ಪ್ರದರ್ಶನ ತೋರಬಲ್ಲೆ" ಎಂದಿದ್ದಾರೆ.

"ಮುಂದಿನ ವರ್ಷ ಕಾಮನ್'ವೆಲ್ತ್ ಗೇಮ್ಸ್ ಹಾಗೂ ಏಷ್ಯನ್ ಗೇಮ್ಸ್ ನಡೆಯಲಿದ್ದು, ಅಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ" ಎಂದು ವಿಕಾಸ್ ಹೇಳಿದ್ದಾರೆ.

ರಿಯೊ ಒಲಿಂಪಿಕ್ಸ್'ಗೂ ಮುನ್ನ ಮೊಣಕಾಲು ಗಾಯಕ್ಕೆ ಒಳಗಾಗಿದ್ದ ವಿಕಾಸ್ ಗೌಡ, 58.99ಮೀಟರ್ ದೂರ ಎಸೆಯುವ ಮೂಲಕ ಕ್ವಾಲಿಫೈಯರ್ ಹಂತದಲ್ಲೇ ಹೊರಬೀಳುವ ಮೂಲಕ ನಿರಾಸೆ ಅನುಭವಿಸಿದ್ದರು.       

click me!