ಸಚಿನ್ ತೆಂಡುಲ್ಕರ್ ನಿರ್ಮಿಸಿದ್ದ ಈ ಅಪೂರ್ವ ದಾಖಲೆ ಮುರಿದ ಕೊಹ್ಲಿ!

By Suvarna Web DeskFirst Published Jul 7, 2017, 12:21 PM IST
Highlights

ಟೀಂ ಇಂಡಿಯಾದ ನಾಯಕ ಕೊಹ್ಲಿ ತನ್ನೆಡೆಗೆ ಬಂದ ಬಾಲ್'ಗಳ'ನ್ನು ನಿರಾಸೆಗೊಳಿಸುವುದು ಅತಿ ವಿರಳ. ಇದೇ ಕಾರಣದಿಂದ ಅವರನ್ನು ರನ್ ಮಷೀನ್ ಅಂತ ಕರೆಯುತ್ತಾರೆ. ಇನ್ನು ಎದುರಾಳಿ ತಂಡ ನೀಡಿದ ರನ್'ಗಳ ಗುರಿ ಬೆನ್ನಟ್ಟುವಲ್ಲಿ ಕೊಹ್ಲಿಯಷ್ಟು ಯಶಸ್ಸು ಗಳಿಸಿದವರು ಯಾರೂ ಇಲ್ಲ.

ಟೀಂ ಇಂಡಿಯಾದ ನಾಯಕ ಕೊಹ್ಲಿ ತನ್ನೆಡೆಗೆ ಬಂದ ಬಾಲ್'ಗಳ'ನ್ನು ನಿರಾಸೆಗೊಳಿಸುವುದು ಅತಿ ವಿರಳ. ಇದೇ ಕಾರಣದಿಂದ ಅವರನ್ನು ರನ್ ಮಷೀನ್ ಅಂತ ಕರೆಯುತ್ತಾರೆ. ಇನ್ನು ಎದುರಾಳಿ ತಂಡ ನೀಡಿದ ರನ್'ಗಳ ಗುರಿ ಬೆನ್ನಟ್ಟುವಲ್ಲಿ ಕೊಹ್ಲಿಯಷ್ಟು ಯಶಸ್ಸು ಗಳಿಸಿದವರು ಯಾರೂ ಇಲ್ಲ.

ಟೀಂ ಇಂಡಿಯಾದ ಕ್ಯಾಪ್ಟನ್ ಪ್ರಸಕ್ತ ವರ್ಷದ ಜನವರಿಯಲ್ಲೇ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಶತಕ ಬಾರಿಸುವುದರಲ್ಲಿ ಸಚಿನ್ ತೆಂಡುಲ್ಕರ್ ಹಂತಕ್ಕೆ ತಲುಪಿದ್ದರು. ಆದರೆ ಗುರುವಾರದಂದು ಕಿಂಗ್ಸ್ಟನ್'ನ ಸಬೀನಾ ಪಾರ್ಕ್'ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಕರ್ಷಕ ಬ್ಯಾಟಿಂಗ್ ಮಾಡುವ ಮೂಲಕ ಏಕದಿನ ಪಂದ್ಯದಲ್ಲಿ ತನ್ನ 28ನೆಯ ಸೆಂಚುರಿ ಬಾರಿಸಿ ಕ್ರಿಕೆಟ್ ದೇವರು ಎಂದೇ ಕರೆಯಲ್ಪಡುವ ಸಚಿನ್ ತೆಂಡುಲ್ಕರ್'ರವರ ದಾಖಲೆ ಮುರಿದಿದ್ದಾಋಎ. ಈ ಮೊದಲು ಗುರಿಯ ಬೆನ್ನಟ್ಟಿ ಸಚಿನ್ ತೆಂಡುಲ್ಕರ್ 17 ಶತಕಗಳನ್ನು ಬಾರಿಸಿದ್ದರು.

ಕ್ರಿಕೆಟ್ ಲೋಕದ ಈ ಇಬ್ಬರು ದಿಗ್ಗಜರ ನಡುವೆ ಗುರಿ ತಲುಪುವ ಆತುರದಲ್ಲಿ ನಿರ್ಮಾಣವಾದ ಶತಕಗಳನ್ನು ನೋಡಿದರೆ ನಿಜಕ್ಕೂ ಅಚ್ಚರಿ ಮೂಡುತ್ತದೆ. ಈ ಸಂಖ್ಯೆಗಳ ನಡುವಿನ ಅಂತರ ಇದಕ್ಕೆ ಕಾರಣ. ಕೊಹ್ಲಿ 102 ಇನ್ನಿಂಗ್ಸ್'ಗಳಲ್ಲಿ 18 ಶತಕ ಬಾರಿಸಿದ್ದರೆ ಇತ್ತ ತೆಂಡುಲ್ಕರ್'ಗೆ 17 ಸೆಂಚುರಿ ಬಾರಿಸಲು 232 ಇನ್ನಿಂಗ್ಸ್'ಗಳನ್ನಾಡಬೇಕಾಯಿತು. ಇಂತಹ ರೆಕಾರ್ಡ್'ಗಳನ್ನು ನಿರ್ಮಿಸಿರುವವರ ಪಟ್ಟಿಯಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ ಮೂರನೇ ಸ್ಥಾನದಲ್ಲಿದ್ದಾರೆ. 116 ಇನ್ನಿಂಗ್ಸ್'ಗಳನ್ನಾಡಿರುವ ದಿಲ್ಶಾನ್ ಒಟ್ಟು 11 ಶತಕಗಳನ್ನು ಬಾರಿಸಿದ್ದಾಋಎ.

ಇದನ್ನು ಹೊರತುಪಡಿಸಿ ಕೆರೆಬಿಯನ್'ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಎರಡು ಶತಕಗಳನ್ನು ಬಾರಿಸಿದ ಟೀಂ ಇಂಡಿಯಾದ ಮೊದಲ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಮೊದಲು ರಾಹುಲ್ ದ್ರಾವಿಡ್ ವೆಸ್ಟ್ ಇಂಡೀಸ್ ವಿರುದ್ಧ ನಾಯಕನಬಾಗಿ ಒಂದು ಶತಕ ಬಾರಿಸಿದ್ದರು. ಇನ್ನು ಒಟ್ಟಾರೆಯಾಗಿ ಹೇಳಬೇಕೆಂದರೆ ಇದು ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಗಳಿಸಿದ ನಾಲ್ಕನೇ ಶತಕವಾಗಿದೆ.

click me!