
ಬೆಂಗಳೂರು(ಜ.16): ಕರ್ನಾಟಕದಲ್ಲಿ ತಳಮಟ್ಟದಿಂದ ಕ್ರಿಕೆಟ್ ಅಭಿವೃದ್ಧಿಪಡಿಸಲು ಟೀಂ ಇಂಡಿಯಾದ ದಿಗ್ಗಜ ಕ್ರಿಕೆಟಿಗರಾದ ಬಿ.ಎಸ್ ಚಂದ್ರಶೇಖರ್ ಹಾಗೂ ಜಿ.ಆರ್ ವಿಶ್ವನಾಥ್ ಪಣ ತೊಟ್ಟಿದ್ದಾರೆ.ಇದಕ್ಕಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಸಹಯೋಗದಲ್ಲಿ ವಿನೂತನ ಗೂಗ್ಲಿ ಸ್ವಿಂಗ್ ಸರ್ಚ್ ಮಹತ್ವಾಂಕ್ಷಿ ಯೋಜನೆ ಜಾರಿಗೊಳ್ಳುತ್ತಿದೆ.
ಇದನ್ನೂ ಓದಿ: ಚೇಸಿಂಗ್‌ನಲ್ಲಿ ಧೋನಿ ಈಗಲೂ ನಂ.1- ಕೊಹ್ಲಿಗೆ ಎಷ್ಟನೇ ಸ್ಥಾನ?
ಗೂಗ್ಲಿ ಸ್ವಿಂಗ್ ಸರ್ಚ್ ಯೋಜನೆಯಡಿ ಪ್ರತಿಭಾನ್ವಿತ ಶಾಲ ಮಕ್ಕಳನ್ನ ಹುಡುಕಿ ಅವರಿಗೆ ಅತ್ಯತ್ತಮ ದರ್ಜೆಯ ತರಬೇತಿ ನೀಡಲಾಗುತ್ತೆ. ಆರ್ಥಿಕವಾಗಿ ಸಶಕ್ತರಲ್ಲದ ಶಾಲಾ ಮಕ್ಕಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು. ಮೊದಲ ಬಾರಿಗೆ ಬೆಂಗಳೂರಿನ 4 ಸರ್ಕಾರಿ ಶಾಲಾಗೆ ಅವಕಾಶ ನೀಡಲಾಗಿದೆ. ಬಳಿಕ ರಾಜ್ಯದ ಇತರ ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ.
ಇದನ್ನೂ ಓದಿ: ಒಂದೇ ಪಂದ್ಯದಲ್ಲಿ ತೆಂಡುಲ್ಕರ್ 2 ದಾಖಲೆ ಅಳಿಸಿಹಾಕಿದ ಕಿಂಗ್ ಕೊಹ್ಲಿ..!
ಗೂಗ್ಲಿ ಸ್ವಿಂಗ್ ಸರ್ಚ್ ಕುರಿತು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. "ಕಳೆದ ವಾರ ಬಿಎಸ್ ಚಂದ್ರಶೇಖರ್ ಈ ಕುರಿತು ಫೋನ್ ಮೂಲಕ ಚರ್ಚೆ ನಡೆಸಿ ಯೋಜನೆ ಸಿದ್ದಪಡಿಸಿದರು. ಇದೀಗ ಕಾರ್ಯರೂಪಕ್ಕೆ ಬಂದಿದೆ" ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ತೆಯ ಹಂಗಾಮಿ ಅಧ್ಯಕ್ಷ ಸಂಜಯ್ ದೇಸಾಯಿ ಹೇಳಿದರು.
ಇದನ್ನೂ ಓದಿ: ರಾಮನ್‌ರಿಂದ ಬದಲಾವಣೆ ನಿರೀಕ್ಷೆ: ಮಿಥಾಲಿ ರಾಜ್
ಶೀಘ್ರದಲ್ಲೇ ಟ್ರಯಲ್ಸ್ ನಡೆಸಲಾಗುವುದು. ಈ ಮೂಲಕ ಆಯ್ಕೆಯಾಗೋ 16 ವರ್ಷದ ಒಳಗಿನ ಬಾಲಕ-ಬಾಲಕಿಯರಿಗೆ ತರಬೇತಿ ಆರಂಭಿಸಲಾಗುವುದು. ಸರ್ಕಾರಿ ಶಾಲೆಯಲ್ಲಿ ಅತ್ಯುತ್ತಮ ಪ್ರತಿಭಾನ್ವಿತ ಮಕ್ಕಳಿದ್ದಾರೆ. ಆದರೆ ಆರ್ಥಿಕ ಸಮಸ್ಯೆಯಿಂದ ಕ್ರಿಕೆಟ್ ಆಡಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಪರಿಹಾರ ಹುಡುಕಲ ಗೂಗ್ಲಿ ಸ್ವಿಂಗ್ ಪ್ರಾಜೆಕ್ಟ್ ಆರಂಭಿಸಿದ್ದೇವೆ ಎಂದು ಬಿ.ಎಸ್.ಚಂದ್ರಶೇಖರ್ ಹೇಳಿದ್ದಾರೆ.
ಈ ಸುದ್ದಿಯನ್ನ ಇಂಗ್ಲೀಷ್‌ನಲ್ಲಿ ಓದಲು ಇಲ್ಲಿ ಕ್ಲಿಕ್ ಮಾಡಿ:
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.