ಗಂಭೀರ್‌ಗೆ ಅಭದ್ರತೆ ಕಾಡುತ್ತಿತ್ತು- ಟೀಂ ಇಂಡಿಯಾ ಮಾಜಿ ಕೋಚ್ ಬಿಚ್ಚಿಟ್ರು ಸೀಕ್ರೆಟ್!

By Web Desk  |  First Published May 1, 2019, 9:56 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸದ್ಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಗೌತಮ್ ಗಂಭೀರ್‌ಗೆ ಮಾನಸಿಕ ಸೀಕ್ರೆಟ್ ಬಹಿರಂಗವಾಗಿದೆ. ಟೀಂ ಇಂಡಿಯಾ ಮಾಜಿ ಕೋಚ್ ರಹಸ್ಯ ಬಯಲು ಮಾಡಿದ್ದಾರೆ. 


ನವದೆಹಲಿ(ಮೇ.01): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಅತ್ಯುತ್ತಮ ಕ್ರಿಕೆಟಿಗ. ಆದರೆ ಮಾನಸಿಕವಾಗಿ ಗಂಭೀರ್‌ಗೆ ಅಭದ್ರತೆ ಕಾಡುತ್ತಿತ್ತು ಎಂದು ಟೀಂ ಇಂಡಿಯಾ ಮಾಜಿ ಮಾನಸಿಕ ತರಬೇತುದಾರ ಪ್ಯಾಡಿ ಅಪ್ಟಾನ್ ಬಹಿರಂಗ ಪಡಿಸಿದ್ದಾರೆ. ಪ್ಯಾಡಿ ಅಪ್ಟಾನ್ ಬರೆದಿರುವದಿ ಬೇರ್‌ಫೂಟ್ ಕೋಚ್  ಆತ್ಮಚರಿತ್ರೆಯಲ್ಲಿ ಈ ವಿಚಾರ ಬಹಿರಂಗ ಪಡಿಸಿದ್ದಾರೆ.

ಇದನ್ನೂ ಓದಿ: ಬಿಜೆಪಿ ಅಭ್ಯರ್ಥಿ ಗೌತಮ್ ಗಂಭೀರ್ ಗೆ ಸಂಕಷ್ಟ, FIR ದಾಖಲು!

Latest Videos

ಪ್ಯಾಡಿ ಅಪ್ಟನ್ ಆತ್ಮಚರಿತ್ರೆಯಲ್ಲಿ ಕ್ರೀಡಾಪಟುವಿನ ಮಾನಸಿಕ ಸ್ಥಿತಿಗತಿ ಎಷ್ಟು ಮುಖ್ಯ ಅನ್ನೋದನ್ನು ವಿವರಿಸಿದ್ದಾರೆ. ಈ ವಿಚಾರದಲ್ಲಿ ಗಂಭೀರ್ ಮಾನಸಿಕ ಸ್ಥಿತಿಗತಿ ಕುರಿತು ವಿವರವಾಗಿ ತಿಳಿಸಿದ್ದಾರೆ. 2009ರಲ್ಲಿ ನಾನು ಗೌತಮ್ ಗಂಭೀರ್ ಜೊತೆ ಕೆಲಸ ಮಾಡಿದ್ದೇನೆ. ಗಂಭೀರ್‌ಗೆ ಪ್ರತಿ ವಿಚಾರದಲ್ಲೂ ಅಭದ್ರತೆ ಕಾಡುತ್ತಿತ್ತು. ಅದು ಟೀಂ ಇಂಡಿಯಾ ಸ್ಥಾನ ಇರಬಹುದು, ಅಥವಾ ಬ್ಯಾಟಿಂಗ್ ಪ್ರದರ್ಶನ ಇರಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಸಂಕಷ್ಟದಲ್ಲಿದ್ದ ಮಾಜಿ ಯೋಧನಿಗೆ ನೆರವಾದ ಗಂಭೀರ್..!

ಗಂಭೀರ್ ಸೆಂಚುರಿ ಸಿಡಿಸಿದರೂ ಬ್ಯಾಟಿಂಗ್‌ನಲ್ಲಿ ಮಾಡಿದ ತಪ್ಪುಗಳನ್ನೇ ನೆನೆದು ಚಿಂತೆ ಹೆಚ್ಚಿಸುತ್ತಿದ್ದರು ಎಂದು ಬರೆದಿದ್ದಾರೆ. ಸದ್ಯ ಗೌತಮ್ ಗಂಭೀರ್ ಲೋಕಸಭಾ ಚುನಾವಣಾ ಕಣಕ್ಕೆ ಧುಮುಕಿದ್ದಾರೆ. ಈಸ್ಟ್ ಡೆಲ್ಲಿ ಕ್ಷೇತ್ರದಿಂದ ಗಂಭೀರ್ ಬಿಜೆಪಿ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ.
 

click me!