
ನವದೆಹಲಿ(ಮಾ.07): ತವರು ತಂಡಕ್ಕೆ ವಾಪಾಸಾಗಿರುವ ಗೌತಮ್ ಗಂಭೀರ್ ನಿರೀಕ್ಷೆಯಂತೆಯೇ ಡೆಲ್ಲಿ ಡೇರ್'ಡೆವಿಲ್ಸ್ ತಂಡದ ನಾಯಕರಾಗಿ ಅಧಿಕೃತವಾಗಿ ಆಯ್ಕೆಯಾಗಿದ್ದಾರೆ.
'ಡೆಲ್ಲಿ ತಂಡಕ್ಕೆ ಮತ್ತೊಮ್ಮೆ ನಾಯಕರಾಗುತ್ತಿರುವ ಗೌರವದ ಸಂಗತಿಯಾಗಿದೆ' ಎಂದು ಗೌತಮ್ ಗಂಭೀರ್ ಪ್ರತಿಕ್ರಿಯೆ ನೀಡಿದೆ. ಇದೇ ಜನವರಿಯಲ್ಲಿ ನಡೆದ ಆಟಗಾರರ ಹರಾಜು ಪ್ರಕ್ರಿಯೆಯಲ್ಲಿ ಡೆಲ್ಲಿ ಪ್ರಾಂಚೈಸಿಯು ಗಂಭೀರ್ ಅವರನ್ನು 2.8 ಕೋಟಿ ನೀಡಿ ಖರೀದಿಸಿತ್ತು. ಈ ಬಾರಿ ನಮ್ಮ ತಂಡ ಸಮತೋಲನದಿಂದ ಕೂಡಿದ್ದು, ರಿಕಿ ಪಾಂಟಿಂಗ್ ಅವರಂತಹ ಚಾಂಪಿಯನ್ ಮಾರ್ಗದರ್ಶನದಲ್ಲಿ ತಂಡವನ್ನು ಮುನ್ನಡೆಸಲು ಎದುರು ನೋಡುತತ್ತಿದ್ದೇನೆ ಎಂದು ಹೇಳಿದ್ದಾರೆ.
2010ರ ಬಳಿಕ ಡೆಲ್ಲಿ ಡೇರ್'ಡೆವಿಲ್ಸ್ ತಂಡವನ್ನು ತೊರೆದ ಗೌತಿ, ಆ ಬಳಿಕ ಕೋಲ್ಕತಾ ನೈಟ್'ರೈಡರ್ಸ್ ತಂಡವನ್ನು ಮುನ್ನಡಿಸಿದ್ದರು. 7 ವರ್ಷಗಳ ಕಾಲ ಕೆಕೆಆರ್ ತಂಡವನ್ನು ಮುನ್ನಡೆಸಿದ್ದ ಗೌತಿ ಎರಡು ಬಾರಿ ತಂಡವನ್ನು ಚಾಂಪಿಯನ್ ಆಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಕಳೆದ ಐಪಿಎಲ್ ವೇಳೆ, ನನ್ನ ಹೃದಯದಲ್ಲಿ ಡೆಲ್ಲಿ ಈಗಲೂ ತುಡಿಯುತ್ತಿದೆ. ನಾನು ಮೂರು ವರ್ಷಗಳ ಕಾಲ ಡೆಲ್ಲಿ ಪರವಾಗಿ ಐಪಿಎಲ್'ನಲ್ಲಿ ಆಡಿದ್ದೇನೆ ಎಂದು ಎಡಗೈ ಬ್ಯಾಟ್ಸ್'ಮನ್ ಹೇಳಿದ್ದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.