ಯುವರಾಜ್‌ಗಾಗಿ ಜರ್ಸಿ ನ.12ಕ್ಕೆ ವಿದಾಯ ಹೇಳಿ; BCCIಗೆ ಗಂಭೀರ್ ನುಡಿ!

By Web Desk  |  First Published Sep 23, 2019, 6:29 PM IST

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಭಾರತಕ್ಕೆ 2 ವಿಶ್ವಕಪ್ ಗೆಲ್ಲಿಸಿಕೊಟ್ಟ ಆಲ್ರೌಂಡರ್ ಯುವರಾಜ್ ಸಿಂಗ್‌ಗೆ ಗೌರವ ಸಲ್ಲಿಸಲು ಸಂಸದ, ಮಾಜಿ ಕ್ರಿಕೆಟಿಗ ಗೌತಮ್ ಗಂಬೀರ್ ಆಗ್ರಹಿಸಿದ್ದಾರೆ. 


ನವದೆಹಲಿ(ಸೆ.23): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್‌ ಜೀವಮಾನದ ಶ್ರೇಷ್ಠ ಕ್ರಿಕೆಟಿಗ. ಭಾರತಕ್ಕಾಗಿ ಟಿ20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ಟೂರ್ನಿ ಗೆಲ್ಲಿಸಿಕೊಟ್ಟ ಯುವಿ ವಿಶ್ವಕಂಡ ಅತ್ಯುತ್ತಮ ಕ್ರಿಕೆಟಿಗ. ಯುವಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಜರ್ಸಿ ನಂ.12ಕ್ಕೆ ವಿದಾಯ ಹೇಳಬೇಕು ಎಂದು  ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್  ಬಿಸಿಸಿಐಗೆ ಮನವಿ ಮಾಡಿದ್ದಾರೆ.  

ಇದನ್ನೂ ಓದಿ: ಯುವರಾಜ್ ಸಿಂಗ್ 6,6,6,6,6,6 ಬಾರಿಸಿ ಇಂದಿಗೆ 12 ವರ್ಷ..!

Latest Videos

undefined

ಭಾರತದ ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೆ ಇದೀಗ 12 ವರ್ಷ ಸಂದಿದೆ. ಈ ಸಂಭ್ರಮದಲ್ಲಿ ಗೌತಮ್ ಗಂಭೀರ್, ಯುವರಾಜ್ ಸಿಂಗ್ ಕೊಡುಗೆಯನ್ನು ಸ್ಮರಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ 6 ಎಸೆತದಲ್ಲಿ 6 ಸಿಕ್ಸರ್ ಸಿಡಿಸಿ ದಾಖಲೆ ಬರೆದಿದ್ದಾರೆ. ಸ್ಫೋಟಕ ಬ್ಯಾಟಿಂಗ್ ಮೂಲಕ ಭಾರತದ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಬಿಸಿಸಿಐ ಯುವಿಗೆ ಗೌರವ ಸಲ್ಲಿಸಬೇಕಿದೆ. ಯುವಿಯ ಜರ್ಸಿ 12 ನಂಬರಿಗೆ ವಿದಾಯ ಹೇಳಬೇಕು ಎಂದಿದ್ದಾರೆ.

ಇದನ್ನೂ ಓದಿ: ಕೆನಡಾ ಟಿ20 ಲೀಗ್; ಯುವಿ ಘರ್ಜನೆಗೆ ಅಭಿಮಾನಿಗಳ ಶ್ಲಾಘನೆ!

ಫಿಟ್ನೆಸ್ ಹಾಗೂ ಫಾರ್ಮ್ ಸಮಸ್ಯೆ ಎದುರಿಸಿದ ಯುವರಾಜ್ ಸಿಂಗ್ ಈ ವರ್ಷ ಎಲ್ಲಾ ಮಾದರಿ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಇತ್ತ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್, 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ದೆಹಲಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ.

click me!