ಕೈಗೆ ಸಿಗುತ್ತಿಲ್ಲ ಧೋನಿ; ಜಾರ್ಖಂಡ್ ತಂಡಕ್ಕೆ ಹೊಸ ನಾಯಕ

By Web Desk  |  First Published Sep 23, 2019, 3:10 PM IST

ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಟೀಂ ಇಂಡಿಯಾದಿಂದ ದೂರ ಉಳಿದಿದ್ದಾರೆ. ಇದೀಗ ವಿಜಯ್ ಹಜಾರೆ ಟೂರ್ನಿಗೂ ಧೋನಿ ಅಲಭ್ಯರಾಗಿದ್ದಾರೆ. ಹೀಗಾಗಿ ಜಾರ್ಖಂಡ್ ಹೊಸ ನಾಯಕನನ್ನು ಆಯ್ಕೆ ಮಾಡಿದೆ.


ರಾಂಚಿ(ಸೆ.23): ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ತಮ್ಮ ವಿಶ್ರಾಂತಿ ಸಮಯವನ್ನು ವಿಸ್ತರಿಸಿದ್ದಾರೆ. ವಿಶ್ವಕಪ್ ಟೂರ್ನಿ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿರುವ ಧೋನಿ, ಇದೀಗ ವಿಜಯ್ ಹಜಾರೆ ಟೂರ್ನಿಗೂ ಅಲಭ್ಯರಾಗಿದ್ದಾರೆ. ಹೀಗಾಗಿ ಜಾರ್ಖಂಡ್ ಕ್ರಿಕೆಟ್ ಸಂಸ್ಛೆ ಹೊಸ ನಾಯಕನನ್ನು ಆಯ್ಕೆ ಮಾಡಿದೆ.

ಇದನ್ನೂ ಓದಿ: ನವೆಂಬರ್‌ವರೆಗೆ ಧೋನಿಗೆ ವಿಶ್ರಾಂತಿ; ಬಾಂಗ್ಲಾ ಸರಣಿಗೂ ಅಲಭ್ಯ?

Tap to resize

Latest Videos

undefined

ವೆಸ್ಟ್ ಇಂಡೀಸ್ ಪ್ರವಾಸದಿಂದ ಹಿಂದೆ ಸರಿದು ದೇಶ ಸೇವೆಗಾಗಿ ಭಾರತೀಯ ಸೇನೆ ಸೇರಿದ ಧೋನಿ, ಕಾಶ್ಮೀರ ಗಡಿ ಕಾದಿದ್ದರು. ಬಳಿಕ ಸೌತ್ ಆಫ್ರಿಕಾ ವಿರುದ್ಧದ ಟೂರ್ನಿಗೂ ಧೋನಿ ಲಭ್ಯರಿಲ್ಲ ಎಂದು ಘೋಷಿಸಿದ್ದರು. ಇತ್ತೀಚೆಗಷ್ಟೇ ಮುಂಬರುವ ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಗೂ ಧೋನಿ ಟೀಂ ಇಂಡಿಯಾ ಸೇರಿಕೊಳ್ಳುವುದಿಲ್ಲ ಅನ್ನೋ ವರದಿ ಬಂದಿತ್ತು. ನವೆಂಬರ್ ವರೆಗೆ ಧೋನಿ ವಿಶ್ರಾಂತಿ ಪಡಯಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿತ್ತು.

ಇದನ್ನೂ ಓದಿ: ಧೋನಿ ನಿವೃತ್ತಿಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಗಂಗೂಲಿ..!

ಜಾರ್ಖಂಡ್ ಕ್ರಿಕೆಟ್ ಸಂಸ್ಥೆ ಧೋನಿಯನ್ನು ಸಂಪರ್ಕಿಸಿ, ವಿಜಯ್ ಹಜಾರೆ ಟೂರ್ನಿ ಲಭ್ಯತೆ ಕುರಿತು ಕೇಳಿದ್ದಾರೆ. ಈ ವೇಳೆ ಧೋನಿ ಅಲಭ್ಯತೆಯನ್ನು ತಿಳಿಸಿದ್ದಾರೆ. ಹೀಗಾಗಿ ಜಾರ್ಖಂಡ್ ತಂಡಕ್ಕೆ ವೇಗಿ ವರುಣ್ ಆ್ಯರೋನ್ ನಾಯಕನಾಗಿ ಆಯ್ಕೆಯಾಗಿದ್ದಾರೆ. ಸೆ.24 ರಿಂದ ಆಕ್ಟೋಬರ್ 25ರ ವರೆಗೆ ವಿಜಯ್ ಹಜಾರೆ ಟೂರ್ನಿ ನಡೆಯಲಿದೆ.

click me!