ಅಯ್ಯೋ ದೇವ್ರೇ! ಅಮೆರಿಕದ ಈಜು ತಾರೆ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ 10 ಪದಕಗಳು ಕಾಡಿಚ್ಚಿನಲ್ಲಿ ಭಸ್ಮ!

Published : Jan 12, 2025, 11:00 AM ISTUpdated : Jan 12, 2025, 11:53 AM IST
ಅಯ್ಯೋ ದೇವ್ರೇ! ಅಮೆರಿಕದ ಈಜು ತಾರೆ ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ 10 ಪದಕಗಳು ಕಾಡಿಚ್ಚಿನಲ್ಲಿ ಭಸ್ಮ!

ಸಾರಾಂಶ

ಲಾಸ್ ಏಂಜಲೀಸ್ ಕಾಡಿಚ್ಚಿನಲ್ಲಿ ಒಲಿಂಪಿಕ್ ಈಜುಪಟು ಗ್ಯಾರಿ ಹಾಲ್‌ರ 10 ಪದಕಗಳು ಸುಟ್ಟುಹೋಗಿವೆ. ಹಾಲ್‌ರ ಮನೆ ಬೆಂಕಿಗೆ ಆಹುತಿಯಾಗಿದ್ದು, ಪದಕಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಅವರು 5 ಚಿನ್ನ, 3 ಬೆಳ್ಳಿ ಮತ್ತು 2 ಕಂಚಿನ ಪದಕಗಳನ್ನು ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದರು. ಈ ಕಾಡಿಚ್ಚಿನಲ್ಲಿ 11 ಸಾವಿರ ಕೋಟಿ ರೂ. ಮೌಲ್ಯದ ಬಂಗಲೆಯೊಂದು ನಾಶವಾಗಿದೆ.

ಲಾಸ್ ಏಂಜಲೀಸ್: ಅಮೆರಿಕದ ಮಾಜಿ ಈಜು ಪಟು ಗ್ಯಾರಿ ಹಾಲ್ ತಾವು ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ 10 ಪದಕಗಳನ್ನು ಕಾಡಿಚ್ಚಿನಿಂದಾಗಿ ಕಳೆದುಕೊಂಡಿದ್ದಾರೆ. ಲಾಸ್ ಏಂಜಲೀಸ್‌ನಲ್ಲಿ ಕೆಲ ದಿನಗಳಿಂದ ಭೀಕರ ಕಾಡಿಚ್ಚು ಹರಡುತ್ತಿದೆ. ಇದ ರಿಂದಾಗಿ ಪೆಸಿಫಿಕ್ ಪಾಲಿಸೇಡ್ ನಲ್ಲಿರುವ 50 ವರ್ಷದ ಗ್ಯಾರಿ ಹಾಲ್ ಅವರ ಮನೆಗೂ ಬೆಂಕಿ ಬಿದ್ದಿದೆ. ಈ ವೇಳೆ ಮನೆಯೆಲ್ಲಿದ್ದ ಬಹುತೇಕ ವಸ್ತುಗಳನ್ನು ಗ್ಯಾರಿ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದಿದ್ದಾರೆ. ಆದರೆ ತಾವು ಒಲಿಂಪಿಕ್ಸ್‌ನಲ್ಲಿ ಗೆದ್ದಿದ್ದ ಪದಕ ಅಲ್ಲಿಂದ ತೆರವುಗೊಳಿಸುವ ಮುನ್ನವೇ ಮನೆಗೆ ಬೆಂಕಿ ವ್ಯಾಪಿಸಿದೆ ಎಂದು ತಿಳಿದುಬಂದಿದೆ.

2004ರ ಅಥೆನ್ಸ್ ಒಲಿಂಪಿಕ್ಸ್‌ ವೇಳೆ ಗ್ಯಾರಿ ಗ್ಯಾರಿ 1996, 2000, 20040 ಒಲಿಂಪಿಕ್ಸ್‌ಗಳಲ್ಲಿ ಒಟ್ಟು 5 ಚಿನ್ನ, 3 ಬೆಳ್ಳಿ ಹಾಗೂ 2 ಕಂಚಿನ ಪದಕ ಗೆದ್ದಿದ್ದರು. ಅವರು 3 ಬಾರಿ ವಿಶ್ವ ಚಾಂಪಿಯನ್ ಕೂಡಾ ಆಗಿದ್ದಾರೆ.

ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಭಾರತ ತಂಡ ಪ್ರಕಟ; ಆರ್‌ಸಿಬಿ ಕ್ರಿಕೆಟಿಗನಿಗೆ ಮಹಾಮೋಸ!

ಅಮೆರಿಕ ಕಾಡ್ಗಿಚ್ಚಿಗೆ 11 ಸಾವಿರ ಕೋಟಿ ರು. ಬಂಗಲೆ ನಾಶ!

ಲಾಸ್ ಏಂಜಲೀಸ್: ಅಮೆರಿಕದ ಲಾಸ್‌ ಏಂಜಲೀಸ್‌ ಹಾಗೂ ಹಾಲಿವುಡ್‌ ಹಿಲ್ಸ್‌ ಸುತ್ತಮುತ್ತ ಹರಡಿರುವ ಕಾಡ್ಗಿಚ್ಚು ಯಾವ ಮಟ್ಟಿಗೆ ವ್ಯಾಪಿಸುತ್ತಿದೆ ಎಂದರೆ ಅನೇಕ ಊರುಗಳನ್ನೇ ಆಹುತಿ ಮಾಡಿಕೊಳ್ಳುತ್ತಿದೆ. ಅಂಥದ್ದರಲ್ಲಿ ಪೆಸಿಫಿಕ್ ಪಾಲಿಸೇಡ್ಸ್‌ ಎಂಬಲ್ಲಿನ $125 ದಶಲಕ್ಷ ಮೌಲ್ಯದ ಅತ್ಯಂತ ದುಬಾರಿ ಮನೆ (ಅಂದಾಜು ₹ 10,770 ಕೋಟಿ) ಕಾಡ್ಗಿಚ್ಚಿನಲ್ಲಿ ನಾಶವಾಗಿದೆ.

ಲುಮಿನಾರ್ ಟೆಕ್ನಾಲಜೀಸ್‌ ಕಂಪನಿ ಸಿಇಒ ಆಸ್ಟಿನ್ ರಸ್ಸೆಲ್ ಒಡೆತನದ, 18 ಬೆಡ್‌ರೂಂ ಇರುವ ಈ ಬಂಗಲೆ ಈಗ ಅಗ್ನಿಗೆ ಆಹುತಿಯಾಗಿ ಸಂಪೂರ್ಣ ಧರೆಗುರುಳಿದೆ, ಕೇವಲ ಹೊಗೆಯಾಡಿಸುವ ಅವಶೇಷಗಳನ್ನು ಮಾತ್ರ ಉಳಿಸಿದೆ ಎಂದು ಮಾಧ್ಯಮವೊಂದು ಫೋಟೋ ಸಮೇತ ವರದಿ ಮಾಡಿದೆ.

ತಿಂಗಳಿಗೆ $450,000 (ಅಂದಾಜು ₹ 3.74 ಕೋಟಿ) ಬಾಡಿಗೆಗೆ ಲಭ್ಯವಿದ್ದ ಈ ಬಂಗಲೆ 2023ರಲ್ಲಿ ಅಮೆರಿಕದ ಎಚ್‌ಬಿಒ ಟೀವಿ ಚಾನೆಲ್‌ನಲ್ಲಿ ನಡೆದ ಸಕ್ಸೆಶನ್ ಎಂಬ ಶೋನಲ್ಲಿ ಕಾಣಿಸಿಕೊಂಡು ಖ್ಯಾತಿ ಪಡೆದಿತ್ತು.

4ನೇ ಟೆಸ್ಟ್‌ ಬಳಿಕ ನಿವೃತ್ತಿಗೆ ನಿರ್ಧರಿಸಿದ್ದ ರೋಹಿತ್‌ ಶರ್ಮಾ; ಆದ್ರೆ ಈ ಕಾರಣಕ್ಕಾಗಿ ಯು-ಟರ್ನ್ ಹೊಡೆದ ಹಿಟ್‌ಮ್ಯಾನ್?

ಬಂಗಲೆಯಲ್ಲಿ ವಿಷ್ಟ ವಿನ್ಯಾಸದ ಅಡುಗೆ ಮನೆ, 20 ಆಸನಗಳ ಥಿಯೇಟರ್, ತಾಪಮಾನ-ನಿಯಂತ್ರಿತ ವೈನ್ ಸೆಲ್ಲಾರ್ ಮತ್ತು ನಕ್ಷತ್ರ ವೀಕ್ಷಣೆಗಾಗಿ ವಿಶೇಷ ಛಾವಣಿ, ಕಾರ್‌ ಗ್ಯಾಲರಿ ಸೇರಿದಂತೆ ಅತಿರಂಜಿತ ವೈಶಿಷ್ಟ್ಯಗಳಿದ್ದವು. ಇವೆಲ್ಲ ಬಹುತೇಕ ದಹಿಸಿ ಹೋಗಿವೆ.
 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಬೆಂಗಳೂರಿನಲ್ಲಿ ವರ್ಲ್ಡ್ ಟೆನಿಸ್ ಲೀಗ್; ಟೂರ್ನಿಯ ವೇಳಾಪಟ್ಟಿ ಪ್ರಕಟ, ಟಿಕೆಟ್ ಬುಕಿಂಗ್ ಆರಂಭ
ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?