‘ಪ್ರತಿಯೊಬ್ಬ ವೃತ್ತಿಪರ ಕ್ರಿಕೆಟಿಗರು ತಿಳಿದಿರಬೇಕಾದ 100 ಸಂಗತಿಗಳು’ ಎಂಬ ಶೀರ್ಷಿಕೆಯನ್ನು ಕೈಪಿಡಿಗೆ ಇರಿಸಲಾಗಿದೆ.
ನವದೆಹಲಿ(ಸೆ.10): ಕ್ರಿಕೆಟ್ ಆಟಗಾರರಿಗಾಗಿ ಬಿಸಿಸಿಐ, ಇದೇ ಮೊದಲ ಬಾರಿಗೆ ಕೈಪಿಡಿಯೊಂದನ್ನು ಬಿಡುಗಡೆ ಮಾಡಿದೆ.
‘ಪ್ರತಿಯೊಬ್ಬ ವೃತ್ತಿಪರ ಕ್ರಿಕೆಟಿಗರು ತಿಳಿದಿರಬೇಕಾದ 100 ಸಂಗತಿಗಳು’ ಎಂಬ ಶೀರ್ಷಿಕೆಯನ್ನು ಕೈಪಿಡಿಗೆ ಇರಿಸಲಾಗಿದೆ. ಕ್ರಿಕೆಟ್'ಗೆ ಪದಾರ್ಪಣೆ ಮಾಡುವುದರಿಂದ ಹಿಡಿದು ಗಾಯದ ಸಮಸ್ಯೆ ಎದುರಾದಾಗ ಅದನ್ನು ಯಾವ ರೀತಿ ನಿರ್ವಹಣೆ ಮಾಡಬೇಕು, ಹಣದಿಂದ ಹಿಡಿದು ಭಾವನೆಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಈ ಕೈಪಿಡಿ ಮಾಹಿತಿ ಒಳಗೊಂಡಿದೆ.
ಈ ಕೈಪಿಡಿಗೆ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮುನ್ನುಡಿ ಬರೆದಿದ್ದು, ಯುವ ಕ್ರಿಕೆಟಿಗರಿಗೂ ಇದು ಸಾಕಷ್ಟು ಸಹಕಾರಿಯಾಗಲಿದೆ ಎಂದಿದ್ದಾರೆ.