ರೈಲ್ವೆ ಇಲಾಖೆಯಲ್ಲಿ ಬಡ್ತಿ ಪಡೆದ ಹರ್ಮನ್ ಪ್ರೀತ್

Published : Sep 09, 2017, 10:17 PM ISTUpdated : Apr 11, 2018, 01:03 PM IST
ರೈಲ್ವೆ ಇಲಾಖೆಯಲ್ಲಿ ಬಡ್ತಿ ಪಡೆದ ಹರ್ಮನ್ ಪ್ರೀತ್

ಸಾರಾಂಶ

ಭಾರತ ತಂಡಕ್ಕೆ 2009ರಲ್ಲಿ ಹರ್ಮನ್‌'ಪ್ರೀತ್ ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ್ದಾರೆ.

ಮುಂಬೈ(ಸೆ.09): ಇತ್ತೀಚೆಗಷ್ಟೆ ಮುಕ್ತಾಯಗೊಂಡ ಮಹಿಳಾ ಏಕದಿನ ವಿಶ್ವಕಪ್‌'ನಲ್ಲಿ ಮಿಂಚಿದ್ದ ಭಾರತ ಆಟಗಾರ್ತಿ ಹರ್ಮನ್‌'ಪ್ರೀತ್ ಕೌರ್‌'ಗೆ ಪಶ್ಚಿಮ ರೈಲ್ವೆ ಇಲಾಖೆ ‘ಕ್ರೀಡಾ- ವಿಶೇಷ ಕರ್ತವ್ಯ ಅಧಿಕಾರಿ’ಯಾಗಿ ಬಡ್ತಿ ನೀಡಿದೆ.

2014ರಿಂದ ಹರ್ಮನ್‌'ಪ್ರೀತ್ ರೈಲ್ವೆ ಇಲಾಖೆಯಲ್ಲಿ ಮುಖ್ಯ ಕಚೇರಿಯ ಸೂಪರಿಂಟೆಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.  ಸೆ.7ರಂದು ಅವರಿಗೆ ವಿಶೇಷ ಕರ್ತವ್ಯ ಅಧಿಕಾರಿಯಾಗಿ ಬಡ್ತಿ ನೀಡಲಾಗಿದೆ.

‘ಹರ್ಮನ್‌'ಪ್ರೀತ್ ಸಾಧನೆ ಗುರುತಿಸಿ ಅವರಿಗೆ ಬಡ್ತಿ ನೀಡಲಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಪ್ರದರ್ಶನ ನೀಡುವ ರೈಲ್ವೆಯ ಪ್ರತಿ ಕ್ರೀಡಾಪಟುವಿಗೂ ಬಡ್ತಿ ನೀಡಿ, ಸನ್ಮಾನಿಸಲಾಗುವುದು’ ಎಂದು ಪಶ್ಚಿಮ ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ತಂಡಕ್ಕೆ 2009ರಲ್ಲಿ ಹರ್ಮನ್‌'ಪ್ರೀತ್  ಪಾಕಿಸ್ತಾನದ ವಿರುದ್ಧ ಪದಾರ್ಪಣೆ ಮಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್‌ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್‌ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?
ಐಪಿಎಲ್‌ನಲ್ಲಿ ಈ 10 ಆಟಗಾರರ ಮೇಲೆ ಕಣ್ಣಿಡಿ; ಈ ಪಟ್ಟಿಯಲ್ಲಿದ್ದಾರೆ ಕನ್ನಡಿಗ!