
ಲಂಡನ್(ಸೆ.09): ಇಂಗ್ಲೆಂಡ್ ತಂಡದ ಅನುಭವಿ ವೇಗದ ಬೌಲರ್ ಜೇಮ್ಸ್ ಆ್ಯಂಡರ್'ಸನ್ ಟೆಸ್ಟ್ ಕ್ರಿಕೆಟ್ ಮಹತ್ತರ ಮೈಲಿಗಲ್ಲನ್ನೊಂದು ನೆಟ್ಟಿದ್ದಾರೆ.
ವೆಸ್ಟ್‌ಇಂಡೀಸ್'ನ ಕ್ರೇಗ್ ಬ್ರಾಥ್'ವೇಟ್'ರನ್ನು ಔಟ್ ಮಾಡುವ ಮೂಲಕ ಜಿಮ್ಮಿ, ಟೆಸ್ಟ್ ಕ್ರಿಕೆಟ್'ನಲ್ಲಿ 500 ವಿಕೆಟ್ ಕಬಳಿಸಿದ ಇಂಗ್ಲೆಂಡ್'ನ ಮೊದಲ ಹಾಗೂ ವಿಶ್ವದ 6ನೇ ಬೌಲರ್ ಎಂಬ ಗೌರವಕ್ಕೆ ಪಾತ್ರರಾದರು.
2003ರಲ್ಲಿ ಜಿಂಬಾಬ್ವೆ ವಿರುದ್ಧ ಟೆಸ್ಟ್‌ಗೆ ಪಾರ್ದಾಪಣೆ ಮಾಡಿದ್ದ ಆ್ಯಂಡರ್'ಸನ್, ವಿಂಡೀಸ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್'ನಲ್ಲಿ ಈ ಸಾಧನೆ ಮಾಡಿದರು. ಆ್ಯಂಡರ್‌ಸನ್ ಟೆಸ್ಟ್'ನಲ್ಲಿ 500 ವಿಕೆಟ್ ಪಡೆದ ವಿಶ್ವದ 3ನೇ ವೇಗದ ಬೌಲರ್ ಎನಿಸಿದ್ದಾರೆ.
ಆ್ಯಂಡರ್'ಸನ್'ಗೂ ಮುನ್ನಾ ವೇಗಿಗಳಾದ ಆಸ್ಟ್ರೇಲಿಯಾದ ಗ್ಲೆನ್ ಮೆಗ್ರಾತ್ (563 ವಿಕೆಟ್), ವಿಂಡೀಸ್'ನ ಕರ್ಟ್ನಿ ವಾಲ್ಶ್ (519) ಈ ಸಾಧನೆ ಮಾಡಿದ್ದರು.
ಇನ್ನು ಸ್ಪಿನ್ನರ್'ಗಳಾದ ಲಂಕಾದ ಮುತ್ತಯ್ಯ ಮುರಳಿಧರನ್ 800 ವಿಕೆಟ್ ಕಬಳಿಸಿದ್ದರೆ, ಆಸ್ಟ್ರೇಲಿಯಾದ ಶೇನ್‌ವಾರ್ನ್ 708, ಭಾರತದ ಅನಿಲ್ ಕುಂಬ್ಳೆ 619 ವಿಕೆಟ್ ಕಬಳಿಸುವ ಮೂಲಕ ಅಗ್ರ ಮೂರು ಸ್ಥಾನಗಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.