ಫ್ರೆಂಚ್‌ ಓಪನ್‌: ಮೊದಲ ಸುತ್ತಲ್ಲಿ ಭಾರತದ ನಗಾಲ್‌ಗೆ ಕಚನೊವ್‌ ಸವಾಲು

By Naveen Kodase  |  First Published May 24, 2024, 10:46 AM IST

ವಿಶ್ವ ನಂ.97 ನಗಾಲ್‌ ಮೊದಲ ಬಾರಿ ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿನಲ್ಲಿ ಆಡಲಿದ್ದಾರೆ. ಕಚನೊವ್ 2 ಬಾರಿ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೇರಿದ್ದು, ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿದ್ದಾರೆ.


ಪ್ಯಾರಿಸ್‌: ಮೇ 26ರಂದು ಆರಂಭಗೊಳ್ಳಲಿರುವ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿಯ ಡ್ರಾ ಗುರುವಾರ ಬಿಡುಗಡೆಗೊಂಡಿದ್ದು, ಭಾರತದ ಅಗ್ರ ಟೆನಿಸಿಗ ಸುಮಿತ್‌ ಅವರು ಮೊದಲ ಸುತ್ತಿನಲ್ಲಿ ರಷ್ಯಾದ ಕರೆನ್‌ ಕಚನೊವ್‌ ವಿರುದ್ಧ ಸೆಣಸಾಡಲಿದ್ದಾರೆ. ಈ ಮೂಲಕ ಬರೋಬ್ಬರಿ 5 ವರ್ಷಗಳ ಬಳಿಕ ಪ್ರಧಾನ ಸುತ್ತಿಗೇರಿದ ಭಾರತದ ಮೊದಲ ಟೆನಿಸಿಗ ಎನ್ನುವ ಹಿರಿಮೆಗೆ ನಗಾಲ್ ಪಾತ್ರರಾಗಿದ್ದಾರೆ.

ವಿಶ್ವ ನಂ.97 ನಗಾಲ್‌ ಮೊದಲ ಬಾರಿ ಫ್ರೆಂಚ್‌ ಓಪನ್‌ ಪ್ರಧಾನ ಸುತ್ತಿನಲ್ಲಿ ಆಡಲಿದ್ದಾರೆ. ಕಚನೊವ್ 2 ಬಾರಿ ಫ್ರೆಂಚ್‌ ಓಪನ್‌ ಕ್ವಾರ್ಟರ್‌ ಫೈನಲ್‌ಗೇರಿದ್ದು, ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 18ನೇ ಸ್ಥಾನದಲ್ಲಿದ್ದಾರೆ.

Tap to resize

Latest Videos

undefined

IPL 2024 ಫೈನಲ್‌ಗೇರಲು ಸನ್‌ರೈಸರ್ಸ್‌ vs ರಾಯಲ್ಸ್‌ ಹಣಾಹಣಿ

ಇದೇ ವೇಳೆ 14 ಬಾರಿ ಚಾಂಪಿಯನ್‌ ರಾಫೆಲ್‌ ನಡಾಲ್‌ ಈ ಬಾರಿ ಸ್ಪರ್ಧಿಸುವುದು ಖಚಿತವಾಗಿದ್ದು, ಅವರು ಮೊದಲ ಸುತ್ತಿನಲ್ಲಿ ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಜ್ವೆರೆವ್ ಟೂರ್ನಿಯಲ್ಲಿ 3 ಬಾರಿ ಸೆಮಿಫೈನಲ್‌ ಪ್ರವೇಶಿಸಿದ್ದು, ಈ ಬಾರಿ ನಡಾಲ್‌ಗೆ ಮೊದಲ ಸುತ್ತಲ್ಲೇ ಪ್ರಬಲ ಪೈಪೋಟಿ ಎದುರಾಗಲಿದೆ. ಇದೇ ವೇಳೆ ಹಾಲಿ ಚಾಂಪಿಯನ್‌ ನೋವಾಕ್‌ ಜೋಕೋವಿಚ್‌ ಆರಂಭಿಕ ಸುತ್ತಿನಲ್ಲಿ ಫ್ರಾನ್ಸ್‌ನ ಹೆರ್ಬರ್ಟ್‌ ವಿರುದ್ಧ ಆಡಲಿದ್ದಾರೆ.

ಸಿಂಧು ಜರ್ಮನಿ, ಸೇನ್‌ ಫ್ರಾನ್ಸ್‌ನಲ್ಲಿ ಅಭ್ಯಾಸ

ನವದೆಹಲಿ: ಭಾರತದ ತಾರಾ ಶಟ್ಲರ್‌ಗಳಾದ ಲಕ್ಷ್ಯ ಸೇನ್‌ ಹಾಗೂ ಪಿ.ವಿ.ಸಿಂಧು ಪ್ಯಾರಿಸ್‌ ಒಲಿಂಪಿಕ್ಸ್‌ಗಾಗಿ ಕ್ರಮವಾಗಿ ಫ್ರಾನ್ಸ್‌ ಹಾಗೂ ಜರ್ಮನಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ. ಇಬ್ಬರ ತರಬೇತಿಯನ್ನೂ ಕೇಂದ್ರ ಕ್ರೀಡಾ ಸಚಿವಾಲಯದ ಮಿಷನ್‌ ಒಲಿಂಪಿಕ್‌ ಸೆಲ್‌ ಅನುಮೋದಿಸಿದ್ದು, ಹಣಕಾಸಿನ ನೆರವನ್ನೂ ಒದಗಿಸಲಿದೆ. ಸೇನ್‌ ಜು.8ರಿಂದ 21ರ ವರೆಗೆ ಮಾರ್ಸೆ ನಗರದಲ್ಲಿ ತರಬೇತಿಯಲ್ಲಿ ತೊಡಗಿಸಿಕೊಳ್ಳಲಿದ್ದು, ಸಿಂಧು ಒಂದು ತಿಂಗಳ ಕಾಲ ಜರ್ಮನಿಯಲ್ಲಿ ಅಭ್ಯಾಸ ನಡೆಸಲಿದ್ದಾರೆ.

'ಆರ್‌ಸಿಬಿ ಹಾಗೂ ವಿರಾಟ್ ಕೊಹ್ಲಿಗೆ ಬಿಡ್ ಮಾಡಿದಾಗ...': ತಮ್ಮ ಒಳ ಮನಸ್ಸಿನ ಮಾತು ಬಿಚ್ಚಿಟ್ಟ ವಿಜಯ್ ಮಲ್ಯ
 
ಮಲೇಷ್ಯಾ ಮಾಸ್ಟರ್ಸ್‌ನಲ್ಲಿ ಸಿಂಧು, ಅಶ್ಮಿತಾ ಕ್ವಾರ್ಟರ್‌ಗೆ

ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಮಾಸ್ಟರ್ಸ್‌ ಸೂಪರ್‌ 500 ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಪಿ.ವಿ.ಸಿಂಧು ಹಾಗೂ ಅಶ್ಮಿತಾ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ.

ವಿಶ್ವ ನಂ.15 ಸಿಂಧು, ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ 2ನೇ ಸುತ್ತಿನ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಸಿಮ್‌ ಯು ಜಿನ್‌ ವಿರುದ್ಧ 21-13, 12-21, 21-14ರಲ್ಲಿ ಗೆಲುವು ಸಾಧಿಸಿದರು. ಅಶ್ಮಿತಾ ಅಮೆರಿಕದ ಬೀವೆನ್‌ ಝಾಂಗ್‌ರನ್ನು 21-19, 16-21, 21-12ರಲ್ಲಿ ಸೋಲಿಸಿದರು. ಇದೇ ವೇಳೆ ಮಹಿಳಾ ಡಬಲ್ಸ್‌ನಲ್ಲಿ ತ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್‌, ಸಿಮ್ರಾನ್‌-ರಿತಿಕಾ, ಮಿಶ್ರ ಡಬಲ್ಸ್‌ನಲ್ಲಿ ಸಿಕ್ಕಿ ರೆಡ್ಡಿ-ಸುಮೀತ್‌ ರೆಡ್ಡಿ ಸೋತು ಹೊರಬಿದ್ದರು. ಪುರುಷರ ಸಿಂಗಲ್ಸ್‌ನಲ್ಲಿ ಕಿರಣ್‌ ಜಾರ್ಜ್ ಕೂಡಾ 2ನೇ ಸುತ್ತಿನಲ್ಲೇ ಅಭಿಯಾನ ಕೊನೆಗೊಳಿಸಿದರು.
 

click me!