French Open: 17ನೇ ಫ್ರೆಂಚ್‌ ಕ್ವಾರ್ಟ​ರ್‌ಗೆ ಜೋಕೋವಿಚ್ ಲಗ್ಗೆ!

By Kannadaprabha News  |  First Published Jun 5, 2023, 9:25 AM IST

23ನೇ ಟೆನಿಸ್ ಗ್ರ್ಯಾನ್‌ ಸ್ಲಾಂಗೆ ಮತ್ತಷ್ಟು ಹತ್ತಿರವಾದ ನೋವಾಕ್ ಜೋಕೋವಿಚ್
17ನೇ ಬಾರಿಗೆ ಕ್ವಾರ್ಟರ್‌ ಫೈನಲ್ ಪ್ರವೇಶಿಸಿ ದಾಖಲೆ ಬರೆದ ಜೋಕೋ
55ನೇ ಗ್ರ್ಯಾನ್‌ಸ್ಲಾಂ ಕ್ವಾರ್ಟ​ರ್‌ಗೆ ಜೋಕೋ ಲಗ್ಗೆ


ಪ್ಯಾರಿ​ಸ್‌(ಜೂ.05): 22 ಗ್ರ್ಯಾನ್‌ಸ್ಲಾಂ ಪ್ರಶ​ಸ್ತಿ​ಗಳ ಒಡೆಯ, ಸರ್ಬಿ​ಯಾದ ನೋವಾಕ್‌ ಜೋಕೋ​ವಿಚ್‌ ಫ್ರೆಂಚ್‌ ಓಪನ್‌ ಗ್ರ್ಯಾನ್‌ಸ್ಲಾಂ ಟೆನಿಸ್‌ ಟೂರ್ನಿ​ಯಲ್ಲಿ ದಾಖ​ಲೆಯ 17ನೇ ಬಾರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದ್ದು, 3ನೇ ಬಾರಿ ಚಾಂಪಿ​ಯನ್‌ ಎನಿ​ಸಿ​ಕೊ​ಳ್ಳು​ವ ಹಾದಿ​ಯಲ್ಲಿ ಮತ್ತೊಂದು ಹೆಜ್ಜೆ ಮುಂದೆ ಇಟ್ಟಿ​ದ್ದಾ​ರೆ.

ಟೂರ್ನಿಯ 2 ಬಾರಿ ಚಾಂಪಿ​ಯನ್‌ ಜೋಕೋ ಭಾನು​ವಾರ ಪುರು​ಷರ ಸಿಂಗಲ್ಸ್‌ ಪ್ರಿ ಕ್ವಾರ್ಟರ್‌ ಫೈನ​ಲ್‌​ನಲ್ಲಿ ಪೆರು ದೇಶದ ಜ್ವಾನ್‌ ಪ್ಯಾಬ್ಲೋ ವಾರಿ​ಲ್ಲಸ್‌ ವಿರುದ್ಧ 6-3, 6-2, 6-2 ನೇರ ಸೆಟ್‌​ಗ​ಳಲ್ಲಿ ಗೆಲುವು ಸಾಧಿ​ಸಿ​ದರು. ಇದರೊಂದಿ​ಗೆ ಗ್ರ್ಯಾನ್‌​ಸ್ಲಾಂನ​ಲ್ಲಿ 55ನೇ ಬಾರಿ ಕ್ವಾರ್ಟ​ರ್‌​ಗೇ​ರಿದ ಸಾಧನೆ ಮಾಡಿ​ದರು. ಅತಿ​ಹೆಚ್ಚು ಬಾರಿ ಕ್ವಾರ್ಟ​ರ್‌​ಗೇ​ರಿದ ದಾಖಲೆ ರೋಜರ್‌ ಫೆಡ​ರ​ರ್‌​(58) ಹೆಸ​ರ​ಲ್ಲಿದೆ. ಕ್ವಾರ್ಟರ್‌ನಲ್ಲಿ 3ನೇ ಶ್ರೇಯಾಂಕಿತ ಜೋಕೋಗೆ ರಷ್ಯಾದ ಕರೇನ್‌ ಕಚ​ನೋವ್‌ ಸವಾಲು ಎದು​ರಾ​ಗ​ಲಿದೆ. 11ನೇ ಶ್ರೇಯಾಂಕಿತ ಕಚ​ನೋವ್‌ ಭಾನು​ವಾರ 4ನೇ ಸುತ್ತಿನ ಪಂದ್ಯ​ದಲ್ಲಿ ಇಟ​ಲಿಯ ಲೊರೆಂಜೊ ಸೊನೆಗೊ ವಿರುದ್ಧ ಗೆಲುವು ಸಾಧಿ​ಸಿ​ದರು. ಇನ್ನು, 22ನೇ ಶ್ರೇಯಾಂಕಿತ ಜರ್ಮ​ನಿಯ ಅಲೆ​ಕ್ಸಾಂಡರ್‌ ಜ್ವೆರೆವ್‌, ಡೇನಿಲ್‌ ಡಿಮಿ​ಟ್ರೋವ್‌ ಪುರು​ಷರ ಸಿಂಗ​ಲ್ಸ್‌​ನಲ್ಲಿ 4ನೇ ಸುತ್ತು ಪ್ರವೇ​ಶಿಸಿ​ದ​ರು.

Tap to resize

Latest Videos

Wrestlers Protest: ಕುಸ್ತಿಪಟುಗಳಿಗೆ ನ್ಯಾಯ ಸಿಗಲಿ, ಶೀಘ್ರ ಚಾರ್ಜ್​ಶೀ​ಟ್‌ ಸಲ್ಲಿ​ಕೆ: ಅನುರಾಗ್ ಠಾಕೂರ್

ಪಾವ್ಲುಚೆಂಕೋ​ವಾ, ಮುಚೋವಾ ಕ್ವಾರ್ಟ​ರ್‌​ಗೆ: ಇದೇ ವೇಳೆ ಮಹಿಳಾ ಸಿಂಗ​ಲ್ಸ್‌​ನಲ್ಲಿ ಶ್ರೇಯಾಂಕ ರಹಿತ ಆಟ​ಗಾ​ರ್ತಿ​ಯ​ರಿ​ಬ್ಬರು ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದರು. ರಷ್ಯಾದ ಅನಾ​ಸ್ತೇ​ಸಿಯಾ ಪಾವ್ಲುಚೆಂಕೋ​ವಾ ಹಾಗೂ ಚೆಕ್‌ ಗಣ​ರಾ​ಜ್ಯದ ಕರೋ​ಲಿನಾ ಮುಚೋವಾ ಅಂತಿಮ 8ರ ಘಟ್ಟಪ್ರವೇ​ಶಿ​ಸಿ​ದರು. ಇವ​ರಿ​ಬ್ಬರು ಮುಂದಿನ ಸುತ್ತಿ​ನಲ್ಲಿ ಮುಖಾ​ಮುಖಿ​ಯಾ​ಗ​ಲಿ​ದ್ದಾರೆ. ಕಳೆದ ಬಾರಿ ರನ್ನ​ರ್‌-ಅಪ್‌ ಅಮೆ​ರಿ​ಕದ ಕೊಕೊ ಗಾಫ್‌, ಕಳೆದ ಬಾರಿ ವಿಂಬ​ಲ್ಡನ್‌ ಹಾಗೂ ಯುಎಸ್‌ ಓಪನ್‌ನಲ್ಲಿ ಫೈನ​ಲ್‌​ನಲ್ಲಿ ಸೋತು ಪ್ರಶ​ಸ್ತಿ​ಯಿಂದ ವಂಚಿ​ತ​ರಾ​ಗಿದ್ದ ಟ್ಯುನೀ​ಶಿ​ಯಾ​ದ ಒನ್ಸ್‌ ಜಬುರ್‌ 4ನೇ ಸುತ್ತು ಪ್ರವೇ​ಶಿ​ಸಿ​ದರು. ಜಬುರ್‌ ಸರ್ಬಿ​ಯಾ​ದ ಒಲ್ಗಾ ಡೆನಿ​ಲೋ​ವಿಚ್‌ ವಿರುದ್ಧ ಗೆದ್ದರೆ, ಗಾಫ್‌ ರಷ್ಯಾದ ಮಿರ್ರಾ ಆ್ಯಂಡ್ರೀವಾ ವಿರುದ್ಧ ಜಯ​ಗ​ಳಿಸಿ ಪ್ರಿ ಕ್ವಾರ್ಟ​ರ್‌ಗೆ ಲಗ್ಗೆ ಇಟ್ಟರು.

ನಡಾ​ಲ್‌ ದಾಖಲೆ ಮುರಿದ ಜೋಕೋ!

ಫ್ರೆಂಚ್‌ ಓಪ​ನ್‌​ನಲ್ಲಿ ಹೆಚ್ಚು ಬಾರಿ ಕ್ವಾರ್ಟರ್‌ ಪ್ರವೇ​ಶಿ​ಸಿದ ದಾಖ​ಲೆ​ಯನ್ನು ಜೋಕೋ​ವಿಚ್‌ ತಮ್ಮ ಹೆಸ​ರಿಗೆ ಬರೆ​ದು​ಕೊಂಡರು. ಜೋಕೋಗೆ ಇದು 17ನೆ ಕ್ವಾರ್ಟರ್‌ ಆಗಿದ್ದು, ನಡಾ​ಲ್‌​(16) ದಾಖಲೆ ಮುರಿ​ದರು. 20 ಗ್ರ್ಯಾನ್‌​ಸ್ಲಾಂಗಳ ಒಡೆಯ ರೋಜರ್‌ ಫೆಡ​ರರ್‌ 12 ಬಾರಿ ಫ್ರೆಂಚ್‌ ಓಪ​ನ್‌​ನಲ್ಲಿ ಕ್ವಾರ್ಟರ್‌ ಫೈನ​ಲ್‌​ಗೇ​ರಿ​ದ್ದರು.

𝙐𝙣 𝙧𝙚𝙘𝙤𝙧𝙙 𝙖𝙗𝙨𝙤𝙡𝙪.

Les chiffres du jour 👉 https://t.co/UzbxNre5IT pic.twitter.com/COfzBAxPfZ

— Roland-Garros (@rolandgarros)
click me!