F3ರೇಸ್‌ನಲ್ಲಿ ಭೀಕರ ಅಪಘಾತ; ಚಿಕಿತ್ಸೆಗೆ ನಡೆದುಕೊಂಡು ತೆರಳಿದ ಚಾಲಕ!

By Web Desk  |  First Published Sep 8, 2019, 4:17 PM IST

ಫಾರ್ಮುಲಾ 3 ರೇಸ್‌ನಲ್ಲಿ ನಡೆದ ಭೀಕರ ಅಪಘಾತವೊಂದು ಕ್ಯಾಮರದಲ್ಲಿ ಸೆರೆಯಾಗಿದೆ. ಅಪಘಾತವಾದ ಬಳಿಕ ಚಾಲಕ ನಡೆದುಕೊಂಡು ಬಂದು ಇತರ ಕಾರು ಹತ್ತಿ ಚಿಕಿತ್ಸೆಗೆ ತೆರಳಿದ ಘಟನೆ ಎಲ್ಲರನ್ನು ಬೆರಗುಗೊಳಿಸಿದೆ. ಭೀಕರ ಅಪಘಾತ ಹಾಗೂ ಚಾಲಕನ ದೃಶ್ಯ ಇದೀಗ ವೈರಲ್ ಆಗಿದೆ.


ಇಟೆಲಿ(ಸೆ.08): ಅತ್ಯಂತ ಅಪಾಯಕಾರಿ ಸ್ಪೋರ್ಟ್‌ಗಳಲ್ಲಿ ಮೋಟಾರ್ ಸ್ಪೋರ್ಟ್‌ ಅಗ್ರಸ್ಥಾನದಲ್ಲಿದೆ. ಅದರಲ್ಲೂ ಫಾರ್ಮುಲಾ 1 ರೇಸ್  ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಇಟಾಲಿಯನ್ ಗ್ರ್ಯಾಂಡ್‌ ಪ್ರಿಕ್ ಫ F3ರೇಸ್‌ನಲ್ಲಿ ಆಸ್ಟ್ರೇಲಿಯಾದ 19 ವರ್ಷದ ಅಲೆಕ್ಸ್ ಪೆರೋನಿ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇದನ್ನೂ ಓದಿ: 1.88 ಸೆಕೆಂಡ್‌ಗಳಲ್ಲಿ ಪಿಟ್‌ ಸ್ಟಾಪ್‌: F1ನಲ್ಲಿ ದಾಖಲೆ

Latest Videos

undefined

ಫಾರ್ಮುಲಾ 1 ರೇಸ್‌ನಲ್ಲಿ ಅಲೆಕ್ಸ್ ಪೆರೋನಿ ಅತ್ಯಂತ ವೇಗವಾಗಿ ಕಾರು ಚಲಾಯಿಸುತ್ತಿದ್ದರು. ಈ ವೇಳೆ ರೇಸ್ ಟ್ರ್ಯಾಕ್‌ನ ಸಾಸೇಜ್ ಕರ್ಬ್(ಟ್ರ್ಯಾಕ್ ತಿರುವಿನ ಅಂಚಿನಲ್ಲಿ ಅಳವಡಿಸಲಾಗಿರುವ  ಎಂಡಿಂಗ್ ಮಾರ್ಕ್) ಮೇಲೆ ಹತ್ತಿದ ಕಾರು ಮೇಲಕ್ಕೆ ಚಿಮ್ಮಿದೆ. ಬಳಿಕ 4 ರಿಂದ 5 ಬಾರಿ ಪಲ್ಟಿ ಹೊಡೆದ ಕಾರು ಗ್ಯಾಲರಿ ಬದಿಗೆ ಹಾಕಿದ ನೆಟ್‌ಗೆ ಬಡಿದು ಕೆಳಗೆ ಬಿದ್ದಿತ್ತು. ಭೀಕರ ಅಪಘಾತ ಕ್ಯಾಮರದಲ್ಲಿ ಸೆರೆಯಾಗಿದೆ.

 

We are all extremely relieved that Alex Peroni walked away from this crash during Race 1 in Monza.

He is currently under medical observation. 🇮🇹 pic.twitter.com/UdlcFSIqBH

— Formula 3 (@FIAFormula3)

ಇದನ್ನೂ ಓದಿ: ಫೋರ್ಸ್ ಇಂಡಿಯಾ ಮಾಲೀಕತ್ವದಿಂದಲೂ ವಿಜಯ್ ಮಲ್ಯಗೆ ಕೊಕ್

ಅಫಘಾತದ ಬಳಿಕ ಚಾಲಕ ಅಲೆಕ್ಸ್ ಪೆರೋನಿ ನಡೆದುಕೊಂಡು ಬಂದು ಸೆಕ್ಯೂರಿಟಿ ಗಾರ್ಡ್ ಕಾರು ಹತ್ತಿದ್ದಾರೆ. ಬಳಿಕ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರಾಮವಾಗಿ ನಡೆದುಕೊಂಡ ಬಂದ ಅಲೆಕ್ಸ್ ಪೆರೋನಿಯ ಕುತ್ತಿಗೆ ಹಾಗೂ ಬೆನ್ನು ಮೂಳೆಯಲ್ಲಿ ಸಣ್ಣ ಮುರಿತವಾಗಿದ್ದು, ಕನಿಷ್ಠ 4 ತಿಂಗಳು ವಿಶ್ರಾಂತಿ ಪಡೆಯಬೇಕಿದೆ.

click me!