ಮೇಲ್ವಿಚಾರಣಾ ಸಮಿತಿ ಬ್ರಿಜ್‌ಗೆ ಕ್ಲೀನ್‌ಚಿಟ್‌ ನೀಡಿಲ್ಲ: ಕೋರ್ಟ್‌ಗೆ ಮಾಹಿತಿ ನೀಡಿದ ಪೊಲೀಸರು

By Kannadaprabha NewsFirst Published Sep 17, 2023, 8:26 AM IST
Highlights

‘ಮೇಲ್ವಿಚಾರಣಾ ಸಮಿತಿಯು ಬ್ರಿಜ್‌ರನ್ನು ದೋಷಮುಕ್ತಗೊಳಿಸಿಲ್ಲ. ಸಮಿತಿಯು ಬ್ರಿಜ್‌ಗೆ ಕ್ಲೀನ್‌ ಚಿಟ್‌ ನೀಡಬಹುದೆಂದು ಶಿಫಾರಸು ಮಾಡಿದೆಯೇ ಹೊರತು, ಬ್ರಿಜ್‌ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿಲ್ಲ’ ಎಂದು ಸರ್ಕಾರಿ ವಕೀಲರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ನವದೆಹಲಿ(ಸೆ.17): ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಒಕ್ಕೂಟ(ಡಬ್ಲ್ಯುಎಫ್‌ಐ) ಮಾಜಿ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ಗೆ ಮೇಲ್ವಿಚಾರಣಾ ಸಮಿತಿಯು ಕ್ಲೀನ್‌ಚಿಟ್‌ ಕೊಟ್ಟಿಲ್ಲ ಎಂದು ಡೆಲ್ಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪ್ರಕರಣದ ಬಗ್ಗೆ ಮ್ಯಾಜಿಸ್ಟ್ರೇಟ್‌ ನ್ಯಾಯಾಯಲಕ್ಕೆ ಶನಿವಾರ ಪೊಲೀಸರು ವರದಿ ಸಲ್ಲಿಸಿದರು. 

ಈ ವೇಳೆ ಮಾತನಾಡಿದ ಸರ್ಕಾರಿ ವಕೀಲ ಅತುಲ್ ಶ್ರೀವಾತ್ಸವ, ‘ಮೇಲ್ವಿಚಾರಣಾ ಸಮಿತಿಯು ಬ್ರಿಜ್‌ರನ್ನು ದೋಷಮುಕ್ತಗೊಳಿಸಿಲ್ಲ. ಸಮಿತಿಯು ಬ್ರಿಜ್‌ಗೆ ಕ್ಲೀನ್‌ ಚಿಟ್‌ ನೀಡಬಹುದೆಂದು ಶಿಫಾರಸು ಮಾಡಿದೆಯೇ ಹೊರತು, ಬ್ರಿಜ್‌ ವಿರುದ್ಧದ ಆರೋಪಗಳು ಸುಳ್ಳು ಎಂದು ಹೇಳಿಲ್ಲ’ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಬ್ರಿಜ್‌ಭೂಷಣ್‌ ಕೂಡಾ ನ್ಯಾಯಾಲಯದಲ್ಲಿ ಹಾಜರಿದ್ದರು. ವಿಚಾರಣೆ ಸೆ.23ಕ್ಕೆ ಮುಂದೂಡಿಕೆಯಾಗಿದೆ.

Latest Videos

Davis Cup 2023: ಭಾರತದ ಕಮ್‌ಬ್ಯಾಕ್‌ಗೆ ನೆರವಾದ ಸುಮಿತ್ ನಗಾಲ್‌

ವಿಶ್ವ ಕುಸ್ತಿ: ಮೊದಲ ದಿನ ಭಾರತೀಯರಿಗೆ ನಿರಾಸೆ

ಬೆಲ್ಗ್ರೇಡ್‌(ಸರ್ಬಿಯಾ): ಇಲ್ಲಿ ಶನಿವಾರ ಆರಂಭಗೊಂಡ ವಿಶ್ವ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ ಭಾರತೀಯ ಕುಸ್ತಿಪಟುಗಳು ಮೊದಲ ದಿನ ನಿರಾಸೆ ಅನುಭವಿಸಿದ್ದಾರೆ. ಪುರುಷರ 70 ಕೆ.ಜಿ. ಫ್ರಿಸ್ಟೈಲ್‌ ವಿಭಾಗದ ಕ್ವಾರ್ಟರ್‌ ಫೈನಲ್‌ನಲ್ಲಿ ಅಭಿಮನ್ಯು 2022ರ ವಿಶ್ವ ಚಾಂಪಿಯನ್‌ಶಿಪ್‌ ರನ್ನರ್‌-ಅಪ್‌, ಅಮೆರಿಕದ ಆ್ಯಲೆನ್‌ ರೆಥೆರ್‌ಫೋರ್ಡ್‌ ವಿರುದ್ಧ 2-9 ಅಂತರದಲ್ಲಿ ಸೋಲನುಭವಿಸಿದರು. ಜೂನ್‌ನಲ್ಲಿ ಅಂಡರ್‌-23 ವಿಶ್ವ ಚಾಂಪಿಯನ್‌ಶಿಪ್‌ ಕಂಚು ಗೆದ್ದಿದ್ದ ಅಭಿಮನ್ಯು ಶನಿವಾರದ ಮೊದಲೆರಡು ಪಂದ್ಯಗಳಲ್ಲಿ ಕ್ರಮವಾಗಿ ವಿಶ್ವ ನಂ.7, ಉಕ್ರೆನ್‌ನ ಇಹೊರ್‌ ಹಾಗೂ ಮೊಲ್ಡೋವಾದ ಗ್ರಾಹ್ಮೆಜ್‌ ವಿರುದ್ಧ ಗೆದ್ದಿದ್ದರು.

ರಣ್ವೀರ್-ದೀಪಿಕಾ ನಟಿಸಿದ ನೂರಾರು ಕೋಟಿ ಸಿನಿಮಾದಲ್ಲಿ ಈ ಸ್ಟಾರ್ ಕ್ರಿಕೆಟಿಗನ ಮಗಳಿದ್ದಾಳೆ!

ಇದೇ ವೇಳೆ ಇತರ ಮೂವರು ಭಾರತೀಯರು 2ನೇ ಸುತ್ತಿನಲ್ಲಿ ಸೋಲನುಭವಿಸಿದರು. 61 ಕೆ.ಜಿ. ವಿಭಾಗದಲ್ಲಿ ಆಕಾಶ್‌ ದಹಿಯಾ ಉಜ್ಬೇಕಿಸ್ತಾನದ ತುರೊಬೊವ್‌ ವಿರುದ್ಧ ಸೋತರೆ, 86 ಕೆ.ಜಿ. ವಿಭಾಗದಲ್ಲಿ ಸಂದೀಪ್‌ ಮಾನ್‌ ಚೀನಾದ ಲಿನ್‌ ಜುಶೆನ್‌ ವಿರುದ್ಧ, 125 ಕೆ.ಜಿ. ಸ್ಪರ್ಧೆಯಲ್ಲಿ ಸುಮಿತ್‌ ಮಲಿಕ್‌ ಪೋಲೆಂಡ್‌ನ ರಾಬರ್ಟ್‌ ಬರನ್‌ ವಿರುದ್ಧ ಪರಾಭವಗೊಂಡರು.

ಭಾರತೀಯ ಶೈಲಿ ಕುಸ್ತಿಯ ಕರ್ನಾಟಕ ಸಂಘ ಅಸ್ತಿತ್ವಕ್ಕೆ

ಬೆಂಗಳೂರು: ಸಾಂಪ್ರದಾಯಿಕ ಕುಸ್ತಿಯನ್ನು ಉತ್ತೇಜಿಸಲು ರಾಜ್ಯದಲ್ಲಿ "ಭಾರತೀಯ ಶೈಲಿ ಕರ್ನಾಟಕ ಕುಸ್ತಿ ಸಂಘ" ಅಸ್ತಿತ್ವಕ್ಕೆ ಬಂದಿದೆ. ಶನಿವಾರ ಇಲ್ಲಿನ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾರತೀಯ ಶೈಲಿ ಕುಸ್ತಿ ಮಹಾ ಸಂಘದ ಸಂಚಾಲಕ ಗೌರವ್‌ ರೋಷನ್ ಲಾಲ್‌ ಅವರು ರಾಜ್ಯ ಸಂಘಕ್ಕೆ ಮಾನ್ಯತೆ ನೀಡಿದರು. ಈ ಹಿಂದೆ ಸಂಘಕ್ಕೆ ನೀಡಿದ್ದ ಮಾನ್ಯತೆಯನ್ನು ಭಾರತೀಯ ಸಂಘ ರದ್ದುಗೊಳಿಸಿತ್ತು. ಇದೀಗ ಸರ್ವ ಸದಸ್ಯರ ಸಭೆಯಲ್ಲಿ ರಾಜ್ಯದ ನೂತನ ಕುಸ್ತಿ ಸಂಘಕ್ಕೆ ಮಾನ್ಯತೆ ನೀಡಲಾಗಿದೆ. ಅಧ್ಯಕ್ಷರಾಗಿ ದಾವಣಗೆರೆಯ ಬಿ.ವೀರಣ್ಣ, ಗೌರವ ಅಧ್ಯಕ್ಷರಾಗಿ ಬೆಂಗಳೂರಿನ ಎಂ.ರುದ್ರೇಶ್‌, ಹಿರಿಯ ಉಪಾಧ್ಯಕ್ಷರಾಗಿ ಮಂಗಳೂರಿನ ಸುರೇಶ್‌ ಚಂದ್ರ ಶೆಟ್ಟಿ ನೇಮಕವಾಗಿದ್ದಾರೆ.

click me!