ನಿವೃತ್ತಿಯಿಂದ ಹೊರಬಂದ ಮರ್ರೆಗೆ ಮೊದಲ ಪ್ರಶಸ್ತಿ

By Web DeskFirst Published Jun 25, 2019, 1:04 PM IST
Highlights

ಸೊಂಟ ನೋವಿನ ಶಸ್ತ್ರ ಚಿಕಿತ್ಸೆ ಬಳಿಕ ಟೆನಿಸ್‌ಗೆ ಗುಡ್‌ಬೈ ಹೇಳಿದ್ದ ಇಂಗ್ಲೆಂಡ್ ಟೆನಿಸಿಗ ಆ್ಯಂಡಿ ಮರ್ರೆ ಇದೀಗ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಜಯಿಸಿ ಮಿಂಚಿದ್ದಾರೆ. ಈ ಕುರಿತಾದ ಒಂದು ವರದಿ ಇಲ್ಲಿದೆ ನೋಡಿ.. 

ಲಂಡನ್‌(ಜೂ.25): ಮಾಜಿ ವಿಶ್ವ ನಂ.1 ಟೆನಿಸಿಗ ಆ್ಯಂಡಿ ಮರ್ರೆ ನಿವೃತ್ತಿಯಿಂದ ಹೊರಬಂದು ಮೊದಲ ಪ್ರಶಸ್ತಿ ಗೆದ್ದಿದ್ದಾರೆ. ಮೂರು ಗ್ರ್ಯಾಂಡ್‌ಸ್ಲಾಂ ವಿಜೇತ ಮರ್ರೆ ಇದೀಗ ಕಮಾಲ್ ಮಾಡಿದ್ದಾರೆ. 

ಶಸ್ತ್ರ ಚಿಕಿತ್ಸೆಗೆ ಒಳಗಾದ ಟೆನಿಸ್ ಪಟು ಆ್ಯಂಡಿ ಮರ್ರೆ

ಇಲ್ಲಿ ನಡೆದ ಕ್ವೀನ್ಸ್‌ ಕ್ಲಬ್‌ ಟೂರ್ನಿಯ ಪುರುಷರ ಡಬಲ್ಸ್‌ನಲ್ಲಿ ಸ್ಪೇನ್‌ನ ಫೆಲಿಸಿಯಾನೋ ಲೊಪೆಜ್‌ ಜತೆಗೂಡಿ ಪ್ರಶಸ್ತಿ ಎತ್ತಿಹಿಡಿದಿದ್ದಾರೆ. ತೀವ್ರ ಸೊಂಟ ನೋವಿನ ಕಾರಣ, ಈ ವರ್ಷ ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಬಳಿಕ ಟೆನಿಸ್‌ಗೆ ನಿವೃತ್ತಿ ಘೋಷಿಸಿದ್ದರು. ಆದರೆ ಶಸ್ತ್ರಚಿಕಿತ್ಸೆಗೆ ಒಳಗಾದ ಬಳಿಕ ಚೇತರಿಸಿಕೊಂಡಿರುವ ಮರ್ರೆ, ಟೆನಿಸ್‌ಗೆ ಮರಳಿದ್ದಾರೆ. 

ಮರ್ರೆ ವಿದಾಯ: ಕಣ್ಣೀರಿಡುತ್ತಾ ನಿವೃತ್ತಿ ಪ್ರಕಟಿಸಿದ ಮಾಜಿ ನಂ.1 ಟೆನಿಸಿಗ

5 ತಿಂಗಳುಗಳ ಕಾಲ ಟೆನಿಸ್‌ನಿಂದ ದೂರ ಉಳಿದಿದ್ದ ಮರ್ರೆ ಇದೀಗ ಈ ವರ್ಷ ಯುಎಸ್‌ ಓಪನ್‌ ಗ್ರ್ಯಾಂಡ್‌ಸ್ಲಾಂನ ಸಿಂಗಲ್ಸ್‌ನಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದಾರೆ.
 

click me!