24 ವರ್ಷಗಳ ಬಳಿಕ ಭಾರತ ತಂಡ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್!

Published : Jul 29, 2018, 04:32 PM ISTUpdated : Jul 30, 2018, 12:16 PM IST
24 ವರ್ಷಗಳ ಬಳಿಕ ಭಾರತ ತಂಡ ಪ್ರತಿನಿಧಿಸಲಿದ್ದಾರೆ ಕಪಿಲ್ ದೇವ್!

ಸಾರಾಂಶ

1983ರ ವಿಶ್ವಕಪ್ ವಿಜೇತ ಟೀಂ ಇಂಡಿಯಾ ನಾಯಕ ಕಪಿಲ್ ದೇವ್ ಇದೀಗ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾರೆ. ಕ್ರಿಕೆಟ್‌ಗೆ ವಿದಾಯ ಹೇಳಿ 24 ವರ್ಷಗಳ ಬಳಿಕ ಮತ್ತೆ ಟೀಂ ಇಂಡಿಯಾ ಜರ್ಸಿ ತೊಡಲು ಕಪಿಲ್ ರೆಡಿಯಾಗಿದ್ದಾರೆ. ಹಾಗಾದರೆ ಕಪಿಎಲ್ ಮತ್ತೆ ಬ್ಯಾಟ್ ಹಿಡಿದು ಕಣಕ್ಕಿಳೀಯುತ್ತಾರ? ಇಲ್ಲಿದೆ ವಿವರ.

ನವದೆಹಲಿ(ಜು.29): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಕಪಿಲ್ ದೇವ್, ಭಾರತಕ್ಕೆ ವಿಶ್ವಕಪ್ ತಂದುಕೊಟ್ಟ ಮೊದಲ ನಾಯಕ. ಆಲ್ರೌಂಡರ್ ಆಗಿ, ನಾಯಕನಾಗಿ ಮಿಂಚಿನ ಪ್ರದರ್ಶನ ನೀಡಿರುವ ಕಪಿಲ್ ದೇವ್ ಕ್ರಿಕೆಟ್‌ಗೆ ವಿದಾಯ ಹೇಳಿ 24 ವರ್ಷಗಳೇ ಉರುಳಿವೆ. ಇದೀಗ ಕಪಿಲ್ ದೇವ್ ಮತ್ತೆ ಭಾರತ ತಂಡವನ್ನ ಪ್ರತಿನಿಧಿಸಲು ಸಜ್ಜಾಗಿದ್ದಾರೆ.

59 ವರ್ಷದ ಕಪಿಲ್ ದೇವ್ ಮತ್ತೆ ಭಾರತ ತಂಡದ ಜರ್ಸಿ ತೊಡಲು ರೆಡಿಯಾಗಿದ್ದಾರೆ. ಆದರೆ ಈ ಬಾರಿ ಕಪಿಲ್ ಪ್ರತಿನಿಧಿಸುತ್ತಿರುವುದು ಕ್ರಿಕೆಟ್ ತಂಡದಲ್ಲಲ್ಲ, ಬದಲಾಗಿ ಭಾರತ ಗಾಲ್ಫ್ ತಂಡದಲ್ಲಿ. ಭಾರತದ ಹಿರಿಯ ಗಾಲ್ಫ್ ತಂಡಕ್ಕೆ ಕಪಿಲ್ ದೇವ್ ಆಯ್ಕಯಾಗಿದ್ದಾರೆ.

 

 

ಜುಲೈನಲ್ಲಿ ನಡೆದ ಆಲ್ ಇಂಡಿಯಾ ಸೀನಿಯರ್ ಟೂರ್ನೆಂಟ್‌ನಲ್ಲಿ ಕಪಿಲ್ ದೇವ್ ಉತ್ತಮ ಪ್ರದರ್ಶನ ನೀಡಿದ್ದರು. ಹೀಗಾಗಿ 2018ರ ಏಷ್ಯಾ ಪೆಸಿಫಿಕ್ ಸೀನಿಯರ್ಸ್ ಗಾಲ್ಫ್ ಟೂರ್ನಿಯಲ್ಲಿ ಕಪಿಲ್ ದೇವ್ ಭಾರತ ತಂಡವನ್ನ ಪ್ರತಿನಿಧಿಸಲಿದ್ದಾರೆ.

ಏಷ್ಯಾ ಪೆಸಿಫಿಕ್ ಸೀನಿಯರ್ಸ್ ಗಾಲ್ಫ್ ಟೂರ್ನಿ ಅಕ್ಟೋಬರ್ 17 ರಿಂದ 19ವರೆಗೆ ನಡೆಯಲಿದೆ. ಜಪಾನ್‌ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟೂರ್ನಿಯಲ್ಲಿ ಕ್ರಿಕೆಟ್ ದಿಗ್ಗಜ ಕಪಿಲ್ ಕಣಕ್ಕಿಳಿಯುತ್ತಿರುವುದು ಕ್ರಿಕೆಟ್ ಅಭಿಮಾನಿಗಳ ಸಂತಸವನ್ನ ಇಮ್ಮಡಿಗೊಳಿಸಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

29 ವರ್ಷದಲ್ಲಿ ಇದೇ ಮೊದಲ ಬಾರಿಗೆ ಸ್ಕ್ವಾಷ್‌ ವಿಶ್ವಕಪ್‌ ಗೆದ್ದ ಭಾರತ!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!