ಭಾರತದ ವಿಶ್ವಕಪ್‌ ಸೋಲಿಗೆ ಸ್ಪೋಟಕ ಕಾರಣ ಬಿಚ್ಚಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ

Published : Jul 26, 2022, 01:32 PM IST
ಭಾರತದ ವಿಶ್ವಕಪ್‌ ಸೋಲಿಗೆ ಸ್ಪೋಟಕ ಕಾರಣ ಬಿಚ್ಚಿಟ್ಟ ಮಾಜಿ ಕೋಚ್ ರವಿಶಾಸ್ತ್ರಿ

ಸಾರಾಂಶ

ಟೀಂ ಇಂಡಿಯಾ ವಿಶ್ವಕಪ್ ಗೆಲ್ಲದೇ ಇರುವ ರಹಸ್ಯ ಹೊರಹಾಕಿದ ರವಿಶಾಸ್ತ್ರಿ 2013ರ ಬಳಿಕ ಐಸಿಸಿ ಟ್ರೋಫಿ ಗೆಲ್ಲಲು ಟೀಂ ಇಂಡಿಯಾ ವಿಫಲ ಟೀಂ ಇಂಡಿಯಾ ವೈಫಲ್ಯದ ಹಿಂದಿನ ಸೀಕ್ರೇಟ್ ಬಿಚ್ಚಿಟ್ಟ ಶಾಸ್ತ್ರಿ

ಬೆಂಗಳೂರು: 2019 ಮತ್ತು 2021ರ ವಿಶ್ವಕಪ್​​ ಸೋಲು ಭಾರತೀಯ ಕ್ರೀಡಾಭಿಮಾನಿಗಳ ಹೃದಯವನ್ನ ಛಿದ್ರ ಛಿದ್ರಗೊಳಿಸಿತ್ತು. ಟ್ರೋಫಿ ಗೆಲುವಿನ ಆಸೆ ನುಚ್ಚುನೂರಾಗಿತ್ತು. ಭಾವನೆಗಳೇ ಬತ್ತಿಹೋಗಿದ್ವು. ವಿಶ್ವವನ್ನೇ ಗೆದ್ದವರು ವಿಶ್ವದ ಮುಂದೆ ಬೆತ್ತಲಾಗಿದ್ವಿ. 2019ರ ಒನ್ಡೇ ವಿಶ್ವಕಪ್​ ಸೋತು 3 ವರ್ಷಗಳೇ ಉರುಳಿದಿವೆ. ಇನ್ನು ಟಿ20 ವಿಶ್ವಕಪ್​ನಲ್ಲಿ ಹೀನಾಯ ಮುಗ್ಗರಿಸಿ ವರ್ಷವೇ ಕಳೆದಿದೆ. ಈಗ ಎರಡು ಐಸಿಸಿ ಟ್ರೋಫಿಗಳ ಸೋಲಿಗೆ ಕಾರಣ ಏನು ಅನ್ನೋ ಸ್ಪೋಟಕ ಸಂಗತಿಯನ್ನ ಮಾಜಿ ಕೋಚ್​ ರವಿಶಾಸ್ತ್ರಿ ಬಹಿರಂಗಪಡಿಸಿದ್ದಾರೆ.

ಆಲ್​ರೌಂಡರ್ ಕೊರತೆನೇ ವಿಶ್ವಕಪ್ ಸೋಲಿಗೆ ಕಾರಣ: 

ಭಾರತ 2011ರ ಏಕದಿನ ವಿಶ್ವಕಪ್ ಮತ್ತು 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದೆ ಕೊನೆ. ಆ ಬಳಿಕ ಯಾವೊಂದು ಐಸಿಸಿ ಟ್ರೋಫಿ ಭಾರತ ಜಯಿಸಿಲ್ಲ. ಕಳೆದೆರಡು ವಿಶ್ವಕಪ್​​​ನಲ್ಲಿ ಇದಕ್ಕೆ ಉತ್ತಮ ಅವಕಾಶವಿದ್ರು ಕನಸು ಕಮರಿತ್ತು. ಸದ್ಯ 2019 ಏಕದಿನ ಮತ್ತು 2021ರ ಟಿ20 ವಿಶ್ವಕಪ್ ಸೋಲಿಗೆ ಉತ್ತಮ ಆಲ್​ರೌಂಡರ್​​​ ಕೊರತೆನೇ ಕಾರಣ ಎಂದು ಮಾಜಿ ಕೋಚ್​​ ರವಿಶಾಸ್ತ್ರಿ ಹೇಳಿದ್ದಾರೆ.

ಹೌದು, ವಿಶ್ವಕಪ್​​​ನಂತ ದೊಡ್ಡ ಟೂರ್ನಿಗಳಲ್ಲಿ ಹಾರ್ದಿಕ್​​ ಪಾಂಡ್ಯ ಇಲ್ಲದೇ ತಂಡ ಮುನ್ನಡೆಸಿದ್ದು ಭಾರತ ತಂಡದ ಮೇಲೆ ರಿಸಲ್ಟ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು. ಯಾಕಂದ್ರೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಬೌಲಿಂಗ್​ ಮಾಡಲು ಅಗ್ರ 6 ರಲ್ಲಿ ಯಾರೂ ಇರ್ಲಿಲ್ಲ. ಇದು ದೊಡ್ಡ ಸಮಸ್ಯೆಯಾಯ್ತು. ಆಯ್ಕೆಗಾರರಿಗೆ ಹುಡುಕಲು ಹೇಳಿದ್ರು, ಯಾರನ್ನ ಹುಡುಕಿ ಕೊಡ್ಲಿಲ್ಲ ಎಂದು ಆಯ್ಕೆ ಸಮಿತಿ ವಿರುದ್ಧ ರವಿಶಾಸ್ತ್ರಿ ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ವಿಶ್ವಕಪ್ ಸೋತಿದ್ದು ಸೋತಾಗಿದೆ. ಶಾಸ್ತ್ರಿಯು ಸೋಲಿಗೆ ಕಾರಣ ರಿವೀಲ್​ ಮಾಡಿದ್ದಾರೆ. ಇನ್ನಾದ್ರು ಈ ಮಿಸ್ಟೇಕ್ಸ್​  ತಿದ್ದಿಕೊಂಡು, ಮುಂಬರೋ ವಿಶ್ವಕಪ್​​​​ಗಳನ್ನಾದ್ರು ಭಾರತ ತಂಡ ಗೆದ್ದು ಚರಿತ್ರೆ ಸೃಷ್ಟಿಸಲಿ.

T20 World Cup: ಕೊಹ್ಲಿಯನ್ನ ಟಾರ್ಗೆಟ್ ಮಾಡಿದ್ದಾರೆ ಬಿಗ್​ಬಾಸ್​ಗಳು?

2011ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವರಾಜ್ ಸಿಂಗ್, ಸುರೇಶ್ ರೈನಾ ಅವರಂತಹ ಆಲ್ರೌಂಡರ್‌ಗಳಿದ್ದರು. ಇನ್ನು ಸಚಿನ್ ತೆಂಡುಲ್ಕರ್, ವಿರೇಂದ್ರ ಸೆಹ್ವಾಗ್‌ ಕೂಡಾ ಕೆಲ ಓವರ್‌ಗಳನ್ನು ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿದ್ದರು. ಆದರೆ 2019 ಹಾಗೂ 2021ರ ವಿಶ್ವಕಪ್ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಇದ್ದರೂ ಸಹಾ ಪರಿಪೂರ್ಣ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರಲಿಲ್ಲ. ಇದು ಟೀಂ ಇಂಡಿಯಾ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು. 

ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ನವೆಂಬರ್ 13ರ ವರೆಗೆ ಆಸ್ಟ್ರೇಲಿಯಾದಲ್ಲಿ ನಡೆಯಲಿದ್ದು, ತನ್ನೆಲ್ಲಾ ನ್ಯೂನ್ಯತೆಗಳನ್ನು ಬದಿಗೊತ್ತಿ ಎರಡನೇ ಟಿ20 ವಿಶ್ವಕಪ್ ಟೂರ್ನಿಯನ್ನು ಭಾರತ ಜಯಿಸಲಿ ಎನ್ನುವುದು ಕೋಟ್ಯಾಂತರ ಅಭಿಮಾನಿಗಳ ಹಾರೈಕೆಯಾಗಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್: ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!