ನಾನು ಬಿಸಿಸಿಐ ಆಯ್ಕೆಗಾರನಾಗಬೇಕು: ಸೆಹ್ವಾಗ್

By Web DeskFirst Published Aug 13, 2019, 12:45 PM IST
Highlights

ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ಭಾರತ ತಂಡದ ಆಯ್ಕೆಗಾರನಾಗುವತ್ತ ಚಿತ್ತ ಹರಿಸಿದ್ದಾರೆ. ಟ್ವೀಟ್ ಮೂಲಕ ಈ ಕುರಿತ ಸುಳಿವು ನೀಡಿದ್ದಾರೆ ಡೆಲ್ಲಿ ಡ್ಯಾಷರ್. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಆ.13]: ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್’ಮನ್ ವಿರೇಂದ್ರ ಸೆಹ್ವಾಗ್‌ ಅಚ್ಚರಿಯ ಬೆಳವಣಿಗೆಯಲ್ಲಿ ಭಾರತ ಕ್ರಿಕೆಟ್‌ ತಂಡದ ಆಯ್ಕೆಗಾರನಾಗಲು ಬಯಸಿರುವುದಾಗಿ ಹೇಳಿದ್ದಾರೆ.

ಸೆಹ್ವಾಗ್ ಪತ್ನಿಗೆ 4.5 ಕೋಟಿ ರೂ ವಂಚಿಸಿದ ಬಿಸ್‌ನೆಸ್ ಪಾರ್ಟ್ನರ್!

‘ನಾನು ಆಯ್ಕೆಗಾರನಾಗಬೇಕು. ಯಾರು ನನಗೆ ಅವಕಾಶ ನೀಡುತ್ತೀರಿ?’ ಎಂದು ಸೋಮವಾರ ಸೆಹ್ವಾಗ್‌ ಟ್ವೀಟ್‌ ಮಾಡಿದ್ದಾರೆ. ಎಂ.ಎಸ್‌.ಕೆ.ಪ್ರಸಾದ್‌ ಬಿಸಿಸಿಐನ ಹಾಲಿ ಆಯ್ಕೆಗಾರರಾಗಿದ್ದು, ಅಕ್ಟೋಬರ್‌ನಲ್ಲಿ ನಡೆಯಲಿರುವ ವಾರ್ಷಿಕ ಚುನಾವಣೆ ಬಳಿಕ ಅವರ ಕಾರ್ಯಾವಧಿ ಮುಕ್ತಾಯಗೊಳ್ಳಲಿದೆ.

Mujhe Selector banna hai… Kaun mujhe mauka dega?

— Virender Sehwag (@virendersehwag)

ಟೀಂ ಇಂಡಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್’ಮನ್’ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿ ನಿಲ್ಲುವ ವಿರೇಂದ್ರ ಸೆಹ್ವಾಗ್, ಟೆಸ್ಟ್ ಕ್ರಿಕೆಟ್’ನಲ್ಲಿ ಎರಡು ತ್ರಿಶತಕ ಸಿಡಿಸಿದ ಏಕೈಕ ಭಾರತೀಯ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಬರೆದಿದ್ದಾರೆ. 2015ರ ಅಕ್ಟೋಬರ್’ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ವಿದಾಯ ಹೇಳಿರುವ ವೀರೂ, ಇದೀಗ ಟ್ವೀಟ್ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಾ ಬರುತ್ತಿದ್ದಾರೆ. 

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 

click me!