ಆಲ್‌ ಇಂಡಿಯಾ ಹಾಕಿ: ಕರ್ನಾಟಕಕ್ಕೆ ಗೆಲುವು

By Web Desk  |  First Published Aug 13, 2019, 12:22 PM IST

ಬೆಂಗಳೂರು ಕಪ್‌ ಆಲ್‌ ಇಂಡಿಯಾ ಹಾಕಿ ಟೂರ್ನಿಯಲ್ಲಿ ಕರ್ನಾಟಕ ತಂಡ ಗೆಲುವಿನ ಖಾತೆ ತೆರೆದಿದೆ. ಇಂಡಿಯನ್ ಏರ್ ಫೋರ್ಸ್ ತಂಡದೆದರು ನಾಯಕ ನಿಕ್ಕಿನ್ ತಿಮ್ಮಯ್ಯ ಪಡೆ ಭರ್ಜರಿ ಜಯ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ... 


ಬೆಂಗಳೂರು(ಆ.13): ನಾಯಕ ನಿಕ್ಕಿನ್‌ ತಿಮ್ಮಯ್ಯ ನೇತೃತ್ವದ ಕರ್ನಾಟಕ ಹಾಕಿ ತಂಡ, ಇಲ್ಲಿ ನಡೆಯುತ್ತಿರುವ ಬೆಂಗಳೂರು ಕಪ್‌ ಆಲ್‌ ಇಂಡಿಯಾ ಹಾಕಿ ಟೂರ್ನಿಯಲ್ಲಿ ಮೊದಲ ಗೆಲುವು ಸಾಧಿಸಿದೆ. 

ಅಖಿಲ ಭಾರತ ಹಾಕಿ ಟೂರ್ನಿಗೆ ಕರ್ನಾಟಕ ತಂಡ ಪ್ರಕಟ: ನಿಕ್ಕಿನ್ ತಿಮ್ಮಯ್ಯ ನಾಯಕ!

Tap to resize

Latest Videos

ಸೋಮವಾರ ನಡೆದ ಪಂದ್ಯದಲ್ಲಿ ಕರ್ನಾಟಕ, ದೆಹಲಿಯ ಇಂಡಿಯನ್‌ ಏರ್‌ ಫೋರ್ಸ್‌ ತಂಡದ ವಿರುದ್ಧ 2-1 ಗೋಲುಗಳಿಂದ ಜಯ ಪಡೆಯಿತು. ಕರ್ನಾಟಕ ಪರ ನಿಕ್ಕಿನ್‌ (8ನೇ ನಿ.), ಸೋಮಯ್ಯ ಕೆ.ಪಿ. (16ನೇ ನಿ.) ಗೋಲು ಗಳಿಸಿದರು. 

ಏರ್‌ ಫೋರ್ಸ್‌ ಪರ ಆನಂದ್‌ ಲಾಕ್ರಾ 58ನೇ ನಿಮಿಷದಲ್ಲಿ ಗೋಲು ಬಾರಿಸಿ ಸೋಲಿನ ಅಂತರವನ್ನು ತಗ್ಗಿಸಿದರು. ಮೊದಲ ಪಂದ್ಯದಲ್ಲಿ ಮುಂಬೈನ ಏರ್‌ ಇಂಡಿಯಾ ಎದುರು ಕರ್ನಾಟಕ 2-2 ರಿಂದ ಡ್ರಾ ಸಾಧಿಸಿತ್ತು.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
 

click me!