
ಲಖನೌ(ಅ.05): ಉತ್ತರ ಪ್ರದೇಶ ರಣಜಿ ತಂಡದ ನಾಯಕರನ್ನಾಗಿ ಅನುಭವಿ ಕ್ರಿಕೆಟಿಗ ಸುರೇಶ್ ರೈನಾ ಅವರನ್ನು ನೇಮಕ ಮಾಡಲಾಗಿದೆ. ರೈಲ್ವೇಸ್ ವಿರುದ್ಧ ಲಖನೌದಲ್ಲಿ ಆರಂಭವಾಗಲಿರುವ ಮೊದಲ ರಣಜಿ ಪಂದ್ಯದಲ್ಲಿ ಯುಪಿ ತಂಡವನ್ನು ಮುನ್ನಡೆಸಲಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಗೆ ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ವಿಫಲವಾಗಿದ್ದ ರೈನಾ, ಇದೀಗ ದೇಶಿ ಕ್ರಿಕೆಟ್'ನತ್ತ ಗಮನ ಹರಿಸಲು ಮುಂದಾಗಿದ್ದಾರೆ.
ಈ ಮೊದಲು ಸುರೇಶ್ ರೈನಾ ಪ್ರಸಕ್ತ ಸಾಲಿನ ದುಲೀಪ್ ಟ್ರೋಫಿಯಲ್ಲಿ ಇಂಡಿಯಾ ಬ್ಲೂ ತಂಡವನ್ನು ಮುನ್ನಡೆಸಿದ್ದರು.
2017ನೇ ಆವೃತ್ತಿಯ ರಣಜಿ ಟೂರ್ನಿಯ ಪಂದ್ಯಾವಳಿಗಳು ನಾಳಿನಿಂದ(ಅಕ್ಟೋಬರ್ 6) ಆರಂಭವಾಗಲಿದ್ದು ಒಟ್ಟು 28 ತಂಡಗಳು ಪಾಲ್ಗೊಳ್ಳುತ್ತಿವೆ. 28 ತಂಡಗಳನ್ನು 4 ಗುಂಪುಗಳಾಗಿ ವಿಂಗಡಿಸಲಾಗಿದ್ದು, ಉತ್ತರ ಪ್ರದೇಶ ತಂಡವು ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. 'ಎ' ಗುಂಪಿನಲ್ಲಿ ಕರ್ನಾಟಕ ಸೇರಿದಂತೆ ಡೆಲ್ಲಿ, ಅಸ್ಸಾಂ, ಹೈದ್ರಾಬಾದ್, ಮಹಾರಾಷ್ಟ್ರ ಹಾಗೂ ರೈಲ್ವೇಸ್ ತಂಡಗಳು ಇವೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.