ರಶ್ಯಾದಲ್ಲಿ ವೈಫೈ ಬಳಸುವ ಫಿಫಾ ಅಭಿಮಾನಿಗಳಿಗೆ ಕಾದಿದೆ ಸಂಕಷ್ಠ!

 |  First Published Jun 5, 2018, 3:33 PM IST

ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗಾಗಿ ರಶ್ಯಾಗೆ ಪ್ರಯಾಣ ಬೆಳೆಸೋ ಕ್ರೀಡಾಭಿಮಾನಿಗಳಿಗೆ ಎಚ್ಚರಿಕೆಯ ಸಂದೇಶ. ರಶ್ಯಾದಲ್ಲಿ ಅಳವಡಿಸಲಾಗಿರುವ ವೈಫೈ ಸೇವೆಯನ್ನ ಬಳಸಿದರೆ, ನಿಮ್ಮ ರಹಸ್ಯ ಮಾಹಿತಿ ಹ್ಯಾಕ್ ಆಗೋ ಸಾಧ್ಯತೆಗಳಿವೆ.


ರಶ್ಯಾ(ಜೂನ್.5): ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಗೆ ರಶ್ಯಾ ಸಜ್ಜುಗೊಂಡಿದೆ.  ಪಂದ್ಯಗಳಿಗೆ ಆತಿಥೇಯವಹಿಸುತ್ತಿರುವ 11 ನಗರಗಳು ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ. ಫುಟ್ಬಾಲ್ ಪಂದ್ಯ ವೀಕ್ಷಿಸಲು ಅಗಮಿಸುವ ಅಭಿಮಾನಿಗಳ ಅನುಕೂಲಕ್ಕಾಗಿ ಆಯೋಜಕರು 7000 ವೈಫೈ ಸ್ಪಾಟ್‌ಗಳನ್ನ ಅಳವಡಿಸಲಾಗಿದೆ. ಆದರೆ ಈ ವೈಫೈ ಸುರಕ್ಷಿತವಲ್ಲ ಅನ್ನೋದು ಅಧ್ಯಯನದಿಂದ ಬಯಲಾಗಿದೆ.

ಸೈಂಟ್‌ ಪೀಟರ್ಸ್‌ಬರ್ಗ್, ಮಾಸ್ಕೋ ಹಾಗೂ ಸೋಚಿ ಸೇರಿದಂತೆ ಫುಟ್ಬಾಲ್ ಪಂದ್ಯಗಳಿಗೆ ಆತಿಥ್ಯವಹಿಸುವ 11 ನಗರಗಳಲ್ಲಿ ಅಳವಡಿಸಲಾಗಿರುವ ವೈಫೈ ಸುರಕ್ಷಿತವಲ್ಲ ಎಂದು ಅಧ್ಯಯನದಲ್ಲಿ ಬಯಲಾಗಿದೆ. ಈ ವೈಫೈ ಬಳಸುವ ಅಭಿಮಾನಿಗಳ ರಹಸ್ಯ ಮಾಹಿತಿಗಳನ್ನ ಹ್ಯಾಕರ್‌ಗಳು ಸುಲಭವಾಗಿ ಕದಿಯಲು ಸಾಧ್ಯವಿದೆ ಎಂದು ಅಧ್ಯಯನ ಹೇಳಿದೆ. ವೈಫೈ ಬಳಸುವ ಕ್ರೀಡಾಭಿಮಾನಿಗಳು ಎಚ್ಚರವಿರಬೇಕು ಎಂದು ರಶ್ಯಾದ ಅಧ್ಯಯನ ಕೇಂದ್ರ ಸೂಚಿಸಿದೆ. ಆದರೆ ಫಿಫಾ ಆಯೋಜಕರು ಮಾತ್ರ ಎಲ್ಲಾ ವೈಫೈ ಸುರಕ್ಷತವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

Latest Videos

undefined

ಜೂನ್ 14 ರಿಂದ ಜುಲೈ 15 ವರೆಗೆ ರಶ್ಯಾದಲ್ಲಿ ಫಿಫಾ ವಿಶ್ವಕಪ್ ಫುಟ್ಬಾಲ್ ನಡೆಯಲಿದೆ. 64 ಪಂದ್ಯಗಳನ್ನೊಳಗೊಂಡ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ 32 ತಂಡಗಳು ಪಾಲ್ಗೊಳ್ಳುತ್ತಿವೆ. 8 ಗುಂಪುಗಳಾಗಿ ತಂಡಗಳನ್ನ ವಿಂಗಡಿಸಲಾಗಿದೆ. ಪ್ರತಿ ಗುಂಪಿನಲ್ಲಿ 4 ತಂಡಗಳು ಇರಲಿವೆ. ಪ್ರತಿ ಗುಂಪಿನಲ್ಲಿ ಅಗ್ರಸ್ಥಾನ ಪಡೆದ 2 ತಂಡಗಳು ರೌಂಡ್ 16 ಸುತ್ತಿಗೆ ಆಯ್ಕೆಯಾಗಲಿದೆ.
 

ಫಿಫಾ ವಿಶ್ವಕಪ್ ಫುಟ್ಬಾಲ್ 2018ರ ವೇಳಾಪಟ್ಟಿ ಹಾಗೂ ಪಂದ್ಯದ ಸಮಯ

 

click me!