ಬಾಲ್ ಟ್ಯಾಂಪರ್‌ನಿಂದಾಗಿ ನಾಲ್ಕು ದಿನ ಗಳಗಳನೆ ಅತ್ತಿದ್ದ ಸ್ಟೀವ್ ಸ್ಮಿತ್

First Published Jun 5, 2018, 1:14 PM IST
Highlights

ಬಾಲ್ ಟ್ಯಾಂಪರ್ ಪ್ರಕJಣ ಸಾಬೀತಾದ ಬಳಿಕ ನಾಲ್ಕು ದಿನ ಅತ್ತಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಸಿಡ್ನಿಯಲ್ಲಿ ಹೇಳಿದ್ದಾರೆ. ನಿಷೇಧದ ಬಳಿಕ ಇದೇ ಮೊದಲ ಬಾರಿಗೆ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸ್ಮಿತ್ ಭಾವುಕರಾದರು.

ಸಿಡ್ನಿ(ಜೂನ್.5):  ಬಾಲ್ ಟ್ಯಾಂಪರಿಂಗ್ ಪ್ರಕರಣದಲ್ಲಿ ಸಿಕ್ಕಿಹಾಕಿಕೊಂಡ ಬಳಿಕ ಸತತ ನಾಲ್ಕು ದಿನ ಅತ್ತಿದ್ದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಸ್ಟೀವ್ ಸ್ಮಿತ್ ಹೇಳಿದ್ದಾರೆ. ಚೆಂಡು ವಿರೂಪಗೊಳಿಸಿ ಮೋಸದಾಟ ನಡೆಸಿದ ಪ್ರಕರಣದ ಬಳಿಕ ಯಾವುದೇ ಸಮಾರಂಭಗಳಲ್ಲಿ ಕಾಣಿಸಿಕೊಳ್ಳದ ಸ್ಮಿತ್ ಇದೀಗ ಸಿಡ್ನಿಯ ಬಾಲಕರ ಶಾಲೆಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಸ್ಮಿತ್ ಸತತ ನಾಲ್ಕು ದಿನ ನನಗೆ ಅಳು ತಡೆಯಲಾಗಲಿಲ್ಲ. ಹೀಗಾಗಿ ಒಂದೇ ಸಮನೆ ಅತ್ತಿದ್ದೆ ಎಂದು ಶಾಲಾ ಮಕ್ಕಳಲ್ಲಿ ಹೇಳಿದರು.

ಕೇಪ್‌ಟೌನ್‌ನಲ್ಲಿ ನಡೆದ ಸೌತ್ಆಫ್ರಿಕಾ ವಿರುದ್ಧಧ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಆಟಗಾರಾದ ಕ್ಯಾಮರಾನ್ ಬ್ಯಾಂಕ್ರಾಫ್ಟ್, ಡೇವಿಡ್ ವಾರ್ನರ್ ಹಾಗೂ ಸ್ಟೀವ್ ಸ್ಮಿತ್ ಬಾಲ್ ಟ್ಯಾಂಪರ್ ನಡೆಸಿ ಸಿಕ್ಕಿಬಿದ್ದಿದ್ದರು. ಚೆಂಡು ವಿರೂಪಗೊಳಿಸಿರೋದು ಸಾಬೀತಾದ ಬೆನ್ನಲ್ಲೇ, ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಸ್ಮಿತ್ ಹಾಗೂ ವಾರ್ನರ್‌ಗೆ ಒಂದು ವರ್ಷ ನಿಷೇಧ ಹಾಗೂ ಬ್ಯಾಂಕ್ರಾಫ್ಟ್‌ಗೆ 9 ತಿಂಗಳ ನಿಷೇಧ ಹೇರಲಾಗಿದೆ.

ನಿಷೇಧದ ಬಳಿಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಸ್ಮಿತ್ ಹಾಗೂ ವಾರ್ನರ್ ಇದೀಗ ಮಂದಿನ ತಿಂಗಳು ಆರಂಭವಾಗಲಿರುವ ಕೆನಡಾ ಟಿ-ಟ್ವೆಂಟಿ ಲೀಗ್ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ. 

click me!