ಸೈನಾ - ಸಿಂಧೂಗೆ ಬೇರೆ ಬೇರೆ ಕೇಂದ್ರಗಳಲ್ಲಿ ಗೋಪಿಚಂದ್ ತರಬೇತಿ ನೀಡುತ್ತಿರುವುದೇಕೆ?

First Published Jun 5, 2018, 1:48 PM IST
Highlights

ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಸದ್ಯ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಆದರೆ ಇಬ್ಬರಿಗೂ ಬೇರೆ ಬೇರೆ ಕೇಂದ್ರಗಳಲ್ಲಿ ಕೋಚ್ ಗೋಪಿಚಂದ್ ಮಾರ್ಗದರ್ಶನ ನೀಡುತ್ತಿದ್ದಾರೆ. 

ಹೈದರಾಬಾದ್(ಜೂನ್.5) ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಭಾರತದ ಅಗ್ರಮಾನ್ಯ ಬ್ಯಾಡ್ಮಿಂಟನ್ ತಾರೆಗಳು. ಇಬ್ಬರೂ ಕೂಡ ಕೋಚ್ ಪುಲ್ಲೇಲ ಗೋಪಿಚಂದ್ ವಿದ್ಯಾರ್ಥಿಗಳು. ಇಷ್ಟೇ ಅಲ್ಲ ಇವರಿಬ್ಬರು ಹೈದರಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡಮಿಯಲ್ಲೇ ತರಬೇತಿ ಪಡೆದವರು. ಆದರೆ ಇತ್ತೀಚೆಗಿನ ಕಾಮನ್‌ವೆಲ್ತ್ ಗೇಮ್ಸ್ ಬಳಿಕ ಸೈನಾ ಹಾಗೂ ನೆಹ್ವಾಲ್‌ಗೆ ಬೇರೆ ಬೇರೆ ತರಬೇತಿ ಕೇಂದ್ರಗಳಲ್ಲಿ ಕೋಚಿಂಗ್ ನೀಡಲಾಗುತ್ತಿದೆ.

ಕೋಚ್ ಪುಲ್ಲೇಲ ಗೋಪಿಚಂದ್ ಇಬ್ಬರಿಗೂ ಬೇರೆ ಬೇರೆ ತರಬೇತಿ ಕೇಂದ್ರಗಳಲ್ಲಿ ಮಾರ್ಗದರ್ಶನ ನೀಡುತ್ತಿದ್ದಾರೆ. ಪುಲ್ಲೇಲ ಗೋಪಿಚಂದ್ ಅಕಾಡಮಿ ಕೋಚಿಂಗ್ ತಂಡ ಈ ನಿರ್ಧಾರವನ್ನ ಕೈಗೊಂಡಿದೆ. ಇಲ್ಲಿ ಕ್ರೀಡಾಪಟುಗಳ ಅನೂಕೂಲ ಮುಖ್ಯ. ಈ ಮೊದಲು ಅವರಿಗೆ ಬೇರೆ ಬೇರೆ ಸಮಯದಲ್ಲಿ ಕೋಚಿಂಗ್ ನೀಡಲಾಗುತ್ತಿತ್ತು. ಇದೀಗ ಇಬ್ಬರಿಗೂ ಒಂದೊಂದು ತರಬೇತಿ ಕೇಂದ್ರಗಳಲ್ಲಿ ಕೋಚಿಂಗ್ ನೀಡಲಾಗುತ್ತಿದೆ ಎಂದು ಕೋಚ್ ಪುಲ್ಲೇಲ ಗೋಪಿಚಂದ್ ಟೈಮ್ಸ್ ಆಫ್ ಇಂಡಿಯಾ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಗೋಪಿಚಂದ್‌ಗೆ ಎರಡು ಟ್ರೈನಿಂಗ್ ಅಕಾಡೆಮಿಗಳಿವೆ. ಕಳೆದ ಸೆಪ್ಟೆಂಬರ್‌ನಲ್ಲಿ ಸೈನಾ ಗೋಪಿಚಂದ್ ಅಕಾಡೆಮಿಗೆ ಮರಳಿದ್ದರು. ಸೈನಾ ನೆಹ್ವಾಲ್  2014ರಲ್ಲಿ ಗೋಪಿಚಂದ್ ಅಕಾಡೆಮಿಯಿಂದ ಹೊರಬಂದು ಬೆಂಗಳೂರಿನಲ್ಲಿ ಕೋಚ್ ವಿಮಲ್ ಕುಮಾರ್ ಬಳಿ ತರಬೇತಿ ಪಡೆಯುತ್ತಿದ್ದರು. ಇದೀಗ ಸೈನಾ ಮತ್ತೆ ಗೋಪಿಚಂದ್ ಅಕಾಡೆಮಿ ಸೇರಿಕೊಂಡಿದ್ದಾರೆ.

click me!