350 ಕೋಟಿ ಜನರಿಂದ ವಿಶ್ವಕಪ್‌ ವೀಕ್ಷಣೆ: ಫಿಫಾ

Published : Dec 22, 2018, 11:37 AM IST
350 ಕೋಟಿ ಜನರಿಂದ ವಿಶ್ವಕಪ್‌ ವೀಕ್ಷಣೆ: ಫಿಫಾ

ಸಾರಾಂಶ

ಫ್ರಾನ್ಸ್‌ ಹಾಗೂ ಕ್ರೊವೇಷಿಯಾ ನಡುವಿನ ಫೈನಲ್‌ ಪಂದ್ಯವನ್ನು 112 ಕೋಟಿ ಮಂದಿ ಕನಿಷ್ಠ 1 ನಿಮಿಷವಾದರೂ ವೀಕ್ಷಿಸಿದ್ದಾರೆ ಎಂದು ಫಿಫಾ ಹೇಳಿದೆ.

ನ್ಯೂಯಾರ್ಕ್[ಡಿ.22]: ರಷ್ಯಾದಲ್ಲಿ ನಡೆದ 2018ರ ಫುಟ್ಬಾಲ್‌ ವಿಶ್ವಕಪ್‌ ಅನ್ನು ಜಗತ್ತಿನಾದ್ಯಂತ 3.5 ಬಿಲಿಯನ್‌ (350 ಕೋಟಿ)ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ ಎಂದು ಫಿಫಾ ಸಮೀಕ್ಷೆ ತಿಳಿಸಿದೆ. 

ಫ್ರಾನ್ಸ್‌ ಹಾಗೂ ಕ್ರೊವೇಷಿಯಾ ನಡುವಿನ ಫೈನಲ್‌ ಪಂದ್ಯವನ್ನು 112 ಕೋಟಿ ಮಂದಿ ಕನಿಷ್ಠ 1 ನಿಮಿಷವಾದರೂ ವೀಕ್ಷಿಸಿದ್ದಾರೆ ಎಂದು ಫಿಫಾ ಹೇಳಿದೆ. ಟೀವಿ ವೀಕ್ಷಕರು, ಆನ್‌ಲೈನ್‌ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ, ಬಾರ್‌ ಹಾಗೂ ಹೋಟೆಲ್‌ಗಳಲ್ಲಿ ಏರ್ಪಡಿಸಿದ್ದ ದೊಡ್ಡ ಪರದೆಯ ಮೇಲೆ ಪ್ರಸಾರವಾಗುತ್ತಿದ್ದ ನೇರ ದೃಶ್ಯಗಳನ್ನು ವೀಕ್ಷಿಸಿದವರನ್ನು ಸಮೀಕ್ಷೆ ವೇಳೆ ಪರಿಗಣಿಸಲಾಗಿದೆ.

ಕ್ರೊವೇಷಿಯಾವನ್ನು ಮಣಿಸಿ ಫ್ರಾನ್ಸ್ 2018ರ ಫಿಫಾ ಫುಟ್ಬಾಲ್ ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ ₹10 ಲಕ್ಷ ಕೊಡಿ, ಮೆಸ್ಸಿ ಜತೆಗೆ ಒಂದು ಫೋಟೋ ತೆಗೆಸಿಕೊಳ್ಳಿ! ಕೇವಲ 100 ಮಂದಿಗಷ್ಟೇ ಈ ಚಾನ್ಸ್!
ಫುಟ್ಬಾಲ್ ಲೆಜೆಂಡ್ ಲಿಯೋನೆಲ್ ಮೆಸ್ಸಿ ಸ್ವಾಗತಕ್ಕೆ ಕೋಲ್ಕತಾ ಸಜ್ಜು! ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್