ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇನ್ಫ್ಯಾಂಟಿನೋ ಅವರು ನೀಡಿದ ನೀಲಿ ಬಣ್ಣದ ಜೆರ್ಸಿಯ ಫೋಟೋವನ್ನು ಪ್ರಕಟಿಸಿದ್ದಾರೆ.
ಅಲ್ಲದೆ, ‘ಅರ್ಜೆಂಟೀನಾ ಫುಟ್ಬಾಲ್ ಆಟಗಾರರು ಭಾರತದ ಹೆಚ್ಚು ಜನಪ್ರಿಯರಾಗಿದ್ದಾರೆ. ನಾನು ಇದೀಗ ಫಿಫಾ ಅಧ್ಯಕ್ಷರಿಂದ ಜೆರ್ಸಿಯನ್ನು ಸ್ವೀಕರಿಸಿದ್ದೇನೆ,’ ಎಂದು ಬರೆದುಕೊಂಡಿದ್ದಾರೆ.
ಬ್ಯೂನಸ್ ಐರಿಸ್(ಅರ್ಜೆಂಟೀನಾ): ಜಿ-20 ರಾಷ್ಟ್ರಗಳ ಶೃಂಗಸಭೆಗೆ ಇಲ್ಲಿಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಫಿಫಾ ಅಧ್ಯಕ್ಷ ಗಿಯನ್ನಿ ಇನ್ಫ್ಯಾಂಟಿನೋ ಅವರನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ಸಲ್ಲಿಸಿದ ಫಿಫಾ ಅಧ್ಯಕ್ಷ ಇನ್ಫ್ಯಾಂಟಿನೋ ಅವರು ವಿಶೇಷವಾದ ಫುಟ್ಬಾಲ್ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.
ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಇನ್ಫ್ಯಾಂಟಿನೋ ಅವರು ನೀಡಿದ ನೀಲಿ ಬಣ್ಣದ ಜೆರ್ಸಿಯ ಫೋಟೋವನ್ನು ಪ್ರಕಟಿಸಿದ್ದಾರೆ. ಅಲ್ಲದೆ, ‘ಅರ್ಜೆಂಟೀನಾ ಫುಟ್ಬಾಲ್ ಆಟಗಾರರು ಭಾರತದ ಹೆಚ್ಚು ಜನಪ್ರಿಯರಾಗಿದ್ದಾರೆ. ನಾನು ಇದೀಗ ಫಿಫಾ ಅಧ್ಯಕ್ಷರಿಂದ ಜೆರ್ಸಿಯನ್ನು ಸ್ವೀಕರಿಸಿದ್ದೇನೆ,’ ಎಂದು ಬರೆದುಕೊಂಡಿದ್ದಾರೆ.
Impossible to come to Argentina and not think about football. Argentinian players are tremendously popular in India.
Today, received this jersey from President Gianni Infantino. I thank him for the kind gesture. pic.twitter.com/6IszG7fyFC
ಗುರುವಾರವಷ್ಟೇ ಶಾಂತಿಗಾಗಿ ಯೋಗ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ್ದ ಮೋದಿ ಅವರು, ಭಾರತ ಮತ್ತು ಅರ್ಜೆಂಟೀನಾ ನಡುವೆ ಫುಟ್ಬಾಲ್ ಆಟ ಬೆಸೆದ ಭಾವನಾತ್ಮಕ ಸಂಬಂಧದ ಬಗ್ಗೆ ವಿವರಣೆ ನೀಡಿದರು.
‘ಅರ್ಜೆಂಟೀನಾವು ಭಾರತದ ತತ್ವಶಾಸ್ತ್ರ, ಕಲೆ, ಸಂಗೀತ ಮತ್ತು ಡ್ಯಾನ್ಸ್ ಬಗ್ಗೆ ಅರ್ಜೆಂಟೀನಾ ಜನತೆಗೆ ಕುತೂಹಲವಿದೆ.. ಹಾಗೆಯೇ, ಭಾರತದಲ್ಲಿಯೂ ಅರ್ಜೆಂಟೀನಾ ಫುಟ್ಬಾಲ್ ಆಟಗಾರರ ಅಭಿಮಾನಿಗಳೇ ಭಾರತದಲ್ಲಿ ತುಂಬಿಕೊಂಡಿದ್ದಾರೆ,’ ಎಂದು ಹೇಳಿದ್ದರು ಮೋದಿ.