ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೂರ್ನಿಯ ಫೈನಲ್‌ಗೆ ಫೆಡರರ್ ಪ್ರವೇಶ ಪಡೆದಿದ್ದಾರೆ. ಸ್ವಿಸ್ ದೊರೆ ಫೆಡರರ್ ಪಾಲಿಗಿದು 50ನೇ ಎಟಿಪಿ ಮಾಸ್ಟರ್ಸ್ ಫೈನಲ್ ಆಗಿದೆ.
ಮಿಯಾಮಿ: ಟೆನಿಸ್ ದಿಗ್ಗಜ ರೋಜರ್ ಫೆಡರರ್ ವೃತ್ತಿಬದುಕಿನ 101ನೇ ಪ್ರಶಸ್ತಿ ಗೆಲ್ಲುವ ಹೊಸ್ತಿಲಲ್ಲಿದ್ದಾರೆ.
ಇಲ್ಲಿ ನಡೆಯುತ್ತಿರುವ ಮಿಯಾಮಿ ಓಪನ್ ಟೂರ್ನಿಯ ಫೈನಲ್‌ಗೆ ಫೆಡರರ್ ಪ್ರವೇಶ ಪಡೆದಿದ್ದಾರೆ. ಸ್ವಿಸ್ ದೊರೆ ಫೆಡರರ್ ಪಾಲಿಗಿದು 50ನೇ ಎಟಿಪಿ ಮಾಸ್ಟರ್ಸ್ ಫೈನಲ್ ಆಗಿದೆ.
100 ಪ್ರಶಸ್ತಿ ಗೆದ್ದ ಸ್ವಿಸ್ ದಿಗ್ಗಜ ಫೆಡರರ್
ಶುಕ್ರವಾರ ನಡೆದ ಸೆಮಿಫೈನಲ್‌ನಲ್ಲಿ ಕೆನಡಾದ 19 ವರ್ಷದ ಡೆನಿಸ್ ಶಾಪೋವಲೊವ್ ವಿರುದ್ಧ 6-2, 6-4 ನೇರ ಸೆಟ್‌ಗಳಲ್ಲಿ ಸುಲಭ ಗೆಲುವು ಸಾಧಿಸಿದರು. ಭಾನುವಾರ ನಡೆಯಲಿರುವ ಫೈನಲ್‌ನಲ್ಲಿ ಫೆಡರರ್, ಅಮೆರಿಕದ ಜಾನ್ ಇಸ್ನರ್ ವಿರುದ್ಧ ಸೆಣಸಲಿದ್ದಾರೆ.