ನಡಾಲ್ ಇನ್'ಕ್ರಿಡಿಬಲ್ ಎಂದ ಫೆಡರರ್

Published : Jun 13, 2017, 06:36 PM ISTUpdated : Apr 11, 2018, 12:44 PM IST
ನಡಾಲ್ ಇನ್'ಕ್ರಿಡಿಬಲ್ ಎಂದ ಫೆಡರರ್

ಸಾರಾಂಶ

ಒಂದೇ ಟೂರ್ನಿಯಲ್ಲಿ 10 ಗ್ರ್ಯಾಂಡ್'ಸ್ಲಾಂ ಗೆದ್ದ ಜಗತ್ತಿನ ಏಕೈಕ ಆಟಗಾರ ಎನ್ನುವ ದಾಖಲೆಗೆ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್ ಭಾಜನರಾಗಿದ್ದಾರೆ.

ಪ್ಯಾರೀಸ್(ಜೂ.13): ಫ್ರೆಂಚ್‌ ಓಪನ್‌ನಲ್ಲಿ ದಾಖಲೆಯ 10ನೇ ಬಾರಿಗೆ ಪ್ರಶಸ್ತಿ ಗೆದ್ದ ಸ್ಪೇನ್‌'ನ ರಾಫೆಲ್‌ ನಡಾಲ್‌ ಅವರನ್ನು 18 ಗ್ರ್ಯಾಂಡ್‌'ಸ್ಲಾಂಗಳ ಒಡೆಯ ರೋಜರ್‌ ಫೆಡರರ್‌ ಅಭಿನಂದಿಸಿ­ದ್ದಾರೆ.

ಫೈನಲ್‌'ನಲ್ಲಿ ವಾವ್ರಿಂಕಾ ಎದುರು ಗೆಲುವು ಸಾಧಿಸಿದ ನಡಾಲ್‌ ಇತಿಹಾಸ ನಿರ್ಮಿಸಿದ್ದ ಸಾಂಪ್ರದಾಯಿಕ ಎದುರಾಳಿ ಹಾಗೂ ನೆಚ್ಚಿನ ಸ್ನೇಹಿತನನ್ನು ಫೆಡರರ್ ಮನಸಾರೆ ಕೊಂಡಾಡಿದ್ದಾರೆ.

 

ಟ್ವಿಟರ್‌'ನಲ್ಲಿ ಫೆಡರರ್‌ ‘ನಿಸ್ಸಂದೇಹವಾಗಿ ಇದು ಟೆನಿಸ್‌'ನ ಅತಿದೊಡ್ಡ ಸಾಧನೆ' ಎಂದು ನಡಾಲ್‌ ದಾಖಲೆಯನ್ನು ಬಣ್ಣಿಸಿದ್ದಾರೆ. ಇನ್ನು ನಡಾಲ್‌ ತಮ್ಮ ಗೆಲುವನ್ನು ತಮ್ಮ ಕೋಚ್‌ ಟೋನಿ ನಡಾಲ್‌ಗೆ ಅರ್ಪಿಸಿದ್ದಾರೆ. 

ಒಂದೇ ಟೂರ್ನಿಯಲ್ಲಿ 10 ಗ್ರ್ಯಾಂಡ್'ಸ್ಲಾಂ ಗೆದ್ದ ಜಗತ್ತಿನ ಏಕೈಕ ಆಟಗಾರ ಎನ್ನುವ ದಾಖಲೆಗೆ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್ ಭಾಜನರಾಗಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

IPL 2026: ಐಪಿಎಲ್ ಆರಂಭಕ್ಕೂ ಮುನ್ನ ಅಭ್ಯಾಸ ಪಂದ್ಯದಲ್ಲಿ ಅಬ್ಬರಿಸಿ ಬೊಬ್ಬಿರಿದ ಕಿಂಗ್‌ ಕೊಹ್ಲಿ!
ಐಪಿಎಲ್ ಪ್ರೇಮಿಗಳಿಗೆ ನಮ್ಮ ಮೆಟ್ರೋ ಸಿಹಿ ಸುದ್ದಿ: ಪಂದ್ಯದ ದಿನ ಮುಂಜಾನೆ 2 ಗಂಟೆಯವರೆಗೆ ರೈಲು ಸಂಚಾರ