
ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡುವ ಸಂದರ್ಭದಲ್ಲಿ ಮುಖ್ಯ ಆಯ್ಕೆದಾರ ಪ್ರಸಾದ್ ಬಳಿ ಮೂರು ಅತ್ಯಂತ ಪ್ರಮುಖ ಮಾತುಗಳನ್ನು ಆಡಿದ್ದರು 'ಓಕೆ ದಟ್ಸ್ ಇಟ್'. ಇನ್ಮುಂದೆ ನಾನು ವಿರಾಟ್ ಕೊಹ್ಲಿಯ ಮೆಂಟರ್ ಆಗಿ ಕಾರ್ಯ ನಿರ್ವಹಿಸುತ್ತೇನೆ ಎಂದಿದ್ದರು. ಇದೀಗ ತಾನು ಕೊಟ್ಟ ಭಾಷೆಯಂತೆ ಕೊಹ್ಲಿಗೆ ಪ್ರತಿಯೊಂದು ಕ್ಷಣದಲ್ಲೂ ಸಾಥ್ ನೀಡುತ್ತಿದ್ದಾರೆ. ಟೀಂಲ್ಲಿ ಸಕ್ರಿಯರಾಗಿ ಪಾಲ್ಗೊಳ್ಳುತ್ತಿದ್ದಾರೆ. ಸಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇವರು ಮತ್ತೊಮ್ಮೆ ತಾನು ಕೊಟ್ಟ ಭಾಷೆಯಂತೆ ನಡೆದುಕೊಂಡಿದ್ದಾರೆ. ಧೋನಿಯ ಅದ್ಭುತ ಸಲಹೆಯಿಂದಲೇ ಅದ್ಭುತ ಆರಂಭಿಕ ಆಟವಾಡಿದ ದಕ್ಷಿಣ ಆಫ್ರಿಕಾ ತಂಡ ಕೇವಲ 192 ರನ್' ಗಳಿಸಿ ಸೋಲನುಭವಿಸಿತು.
ವಾಸ್ತವವಾಗಿ ನಡೆದಿದ್ದೇನೆ?
ಮೊದಲ ಇನ್ನಿಂಗ್ಸ್'ನಲ್ಲಿ ಆಡಿದ ದಕ್ಷಿಣ ಆಫ್ರಿಕಾ ತಂಡ ಬ್ಯಾಟಿಂಗ್ ಮಾಡುತ್ತಿದ್ದಾಗ, ಪಂದ್ಯದ 43ನೇ ಓವರ್'ನಲ್ಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾನಿಗೆ ಬೌಲಿಂಗ್ ಮಾಡುವ ಅವಕಾಶ ನೀಡಿದರು. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಧೋನಿಯೊಂದಿಗೆ ಸ್ಲಿಪ್'ನಲ್ಲಿದ್ದರು. ಈ ವೇಳೆ ಧೋನಿ ಬುಮ್ರಾ ಬದಲಾಗಿ ಭುವಿಗೆ ಬೌಲಿಂಗ್ ಮಾಡುವ ಅವಕಾಶ ನೀಡುವಂತೆ ಅಲಹೆ ನೀಡಿದ್ದಾರೆ. ಧೋನಿಯ ಮಾತಿಗೆ ಯಾವುದೇ ವಿರೋಧ ವ್ಯಕ್ತಪಡಿಸದ ವಿರಾಟ್ ಬುಮ್ರಾ ಬದಲಾಗಿ ಭುವಿಗೆ ಬೌಲಿಂಗ್ ಮಾಡುವ ಅವಕಾಶ ನೀಡಿದ್ದಾರೆ. ಈ ಓವರ್'ನಲ್ಲಿ ಬೌಲಿಂಗ್ ಮಾಡಿದ ಭುವನೇಶ್ವರ್ ಆ ಓವರ್'ನಲ್ಲಿ ಒಂದಾದ ಬಳಿಕ ಒಂದರಂತೆ ಎರಡು ಬಾಲ್'ಗೆ ದಕ್ಷಿಣ ಆಫ್ರಿಕಾದ ಎರಡು ಪ್ರಮುಖ ವಿಕೆಟ್ ಬೀಳಿಸಿದ್ದಾರೆ. ಇದರಿಂದಾಗಿ ಸೌತ್ ಆಫ್ರಿಕಾ ತಂಡ 9 ವಿಕೆಟ್'ನಷ್ಟಕ್ಕೆ ಕೇವಲ 189 ಸ್ಕೋರ್ ಗಳಿಸಿದ್ದಾರೆ. ಇನ್ನು ಗಮನಿಸಬೇಕಾದ ವಿಚಾರವೆಂದರೆ ದ. ಆಫ್ರಿಕಾ ಈ ಓವರ್'ನಲ್ಲಿ ಗಳಿಸಿದ್ದು ಕೇವಲ 5 ರನ್.
ಪಂದ್ಯದಲ್ಲಿ ಜಯ ಗಳಿಸಿದ ಬಳಿಕ ಮಾತನಾಡಿದ ವಿರಾಟ್ 'ಇಡೀ ಟೂರ್ನಮೆಂಟ್'ನಲ್ಲಿ ಟೀಂ ಇಂಡಿಯಾಗೆ ಇದು ಅತ್ಯಂತ ಮಹತ್ವದ ಪಂದ್ಯವಾಗಿತ್ತು. ಈ ಪಂದ್ಯದ ಪ್ರತಿ ಕ್ಷಣದಲ್ಲೂ ಟೀಂ ಇಂಡಿಯಾ ವಿರೋಧಿ ಟೀಂಗೆ ಕಠಿಣ ಸವಾಲು ನೀಡಿದೆ. ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಹೀಗೆ ಪ್ರತಿಯೊಂದೂ ಕ್ಷೇತ್ರದಲ್ಲೂ ನಾವು ಅವರಿಗಿಂತ ಒಂದು ಹೆಜ್ಜೆ ಬಲಿಷ್ಟವಾಗಿದ್ದೆವು. ಇನ್ನು ಮಾಜಿ ನಾಯಕ ಧೋನಿಯ ಅನುಭವದ ಜಾದೂ ಮತ್ತೊಂದು ಬಾರಿ ನೋಡಲು ಸಿಕ್ಕಿದೆ ಎಂದಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.