ಕಾಫಿ ವಿತ್ ಧವನ್; ರವಿ ಶಾಸ್ತ್ರಿ ಕಾಲೆಳೆದ ಫ್ಯಾನ್ಸ್!

Published : Sep 16, 2019, 05:28 PM ISTUpdated : Sep 16, 2019, 06:52 PM IST
ಕಾಫಿ ವಿತ್ ಧವನ್; ರವಿ ಶಾಸ್ತ್ರಿ ಕಾಲೆಳೆದ ಫ್ಯಾನ್ಸ್!

ಸಾರಾಂಶ

ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿಯ ಕಾಫಿ ವಿಥ್ ಧವನ್ ಇದೀಗ ಟ್ರೋಲ್ ಆಗಿದೆ. ಈಗಾಗಲೇ ಕಾಫಿ ವಿಥ್ ಕರಣ್ ಕಾರ್ಯಕ್ರಮ ಮಾಡಿದ ಆವಾಂತರ ಅಷ್ಟಿಷ್ಟಲ್ಲ. ಇದರ ಬೆನ್ನಲ್ಲೇ ಶಾಸ್ತ್ರಿ ಹಂಚಿಕೊಂಡಿರುವ ಹೊಸ ಫೋಟೋ ಮತ್ತೆ ಟ್ರೋಲ್ ಆಗಿದೆ.

ಧರ್ಮಶಾಲಾ(ಸೆ.16): ಟ್ರೋಲಿಗರಿಗೆ ಹೆಚ್ಚು ಆಹಾರವಾಗಿರುವ ವ್ಯಕ್ತಿಗಳ ಪೈಕಿ ಟೀಂ ಇಂಡಿಯಾ ಕೋಚ್ ರವಿ ಶಾಸ್ತ್ರಿ ಮುಂಚೂಣಿಯಲ್ಲಿದ್ದಾರೆ. ಶಾಸ್ತ್ರಿ ಎಲ್ಲೋ ಹೋದರೂ, ಏನೇ ಮಾಡಿದರೂ ಟ್ರೋಲ್ ಆಗ್ತಾರೆ. ಪಂದ್ಯ ಗೆದ್ದರೂ, ಸೋತರೂ ಮೊದಲು ಗುರಿಯಾಗುವುದು ಶಾಸ್ತ್ರಿ. ಧರ್ಮಶಾಲಾದ ಮೊದಲ ಟಿ20 ಪಂದ್ಯಕ್ಕೂ ಮುನ್ನ ರವಿ ಶಾಸ್ತ್ರಿ ಶೇರ್ ಮಾಡಿರುವ ಫೋಟೋ ಇದೀಗ ಟ್ರೋಲ್ ಆಗಿದೆ.

ಇದನ್ನೂ ಓದಿ: ಟ್ರೋಲಿಗರಿಗೆ ತಿರುಗೇಟು ನೀಡಲು ಹೋದ ಶಾಸ್ತ್ರಿಗೆ ಮತ್ತೆ ಕ್ಲಾಸ್!

ಟೀಂ ಇಂಡಿಯಾ ಆರಂಭಿಕ ಶಿಖರ್ ಧವನ್ ಜೊತೆ ರವಿ ಶಾಸ್ತ್ರಿ ಕಾಫಿ ಕುಡಿಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಕಾಫಿ ಕಪ್ ಒಳಗಡೆ ಏನಿದೆ ಅನ್ನೋದು ಎಲ್ಲರಿಗೂ ತಿಳಿದಿದೆ. ಟೀಂ ಇಂಡಿಯಾದಲ್ಲಿ ಕಾಫಿ ಮಾಡಿದ ಆವಾಂತರ ಗೊತ್ತಿದೆಯಲ್ವಾ ಎಂದು ಟ್ರೋಲಿಗರು ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗಿಯರ ಜೊತೆ ಪೋಸ್- ಕೋಚ್ ರವಿ ಶಾಸ್ತ್ರಿಗೆ ಫುಲ್ ಕ್ಲಾಸ್!

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೈಲೆಂಟ್ ಆದ ಸೌತ್ ಆಫ್ರಿಕಾ , 74 ರನ್‌ಗೆ ಆಲೌಟ್ ಮಾಡಿ 101 ರನ್ ಗೆಲುವು ದಾಖಲಿಸಿದ ಭಾರತ
100 ಸಿಕ್ಸರ್ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ, ಸೌತ್ ಆಫ್ರಿಕಾಗೆ 176 ರನ್ ಟಾರ್ಗೆಟ್