170ಕೀ.ಮಿ ವೇಗದಲ್ಲಿ ಅಪಘಾತ-ಪವಾಡ ಸದೃಶ್ಯ ಬದುಕುಳಿದ F3 ಚಾಲಕಿ!

Published : Dec 23, 2018, 04:38 PM ISTUpdated : Dec 23, 2018, 04:50 PM IST
170ಕೀ.ಮಿ ವೇಗದಲ್ಲಿ ಅಪಘಾತ-ಪವಾಡ ಸದೃಶ್ಯ ಬದುಕುಳಿದ F3 ಚಾಲಕಿ!

ಸಾರಾಂಶ

18 ವರ್ಷದ ಮಹಿಳಾ ರೇಸರ್ ಸೋಫಿಯಾ ಕಳೆದ ನವೆಂಬರ್‌ನಲ್ಲಿ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ರೇಸ್‌ ವೇಳೆ ಸಂಭವಿಸಿದ ಅಪಘಾತ ಬೆಚ್ಚಿಬೀಳಿಸುವಂತಿದೆ. ಇಲ್ಲಿದೆ ಇದರ ವೀಡಿಯೋ.  

ಜರ್ಮನಿ(ಡಿ.23): ವಯಸ್ಸು ಕೇವಲ 18, ಸಾಧನೆ ಬೆಟ್ಟದಷ್ಟು. ಇದು ಜರ್ಮನಿ ಮೂಲದ  F3 ಮಹಿಳಾ ರೇಸರ್ ಸೋಫಿಯಾ ಫ್ಲಾರ್ಶ್ ಸಾಧನೆ. F3 ರೇಸ್‌ನಲ್ಲಿ ವಿಶ್ವದಲ್ಲೇ ಸದ್ದು ಮಾಡುತ್ತಿದ್ದಾಳೆ. ಆದರೆ 2018ರ ನವೆಂಬರ್‌ನಲ್ಲಿ ನಡೆದ ಅಪಘಾತದಿಂದ ಚೇತರಿಸಿಕೊಂಡಿರುವ ಸೊಫಿಯಾ ಇದೀಗ ಮತ್ತೆ ಅಖಾಡಕ್ಕೆ ಇಳಿಯಲು ಸಜ್ಜಾಗಿದ್ದಾಳೆ.

ಇದನ್ನೂ ಓದಿ: ಪತ್ನಿ ನಟನೆ ಹೊಗಳಿದ ವಿರಾಟ್ ಕೊಹ್ಲಿ ಫುಲ್ ಟ್ರೋಲ್!

2018 ಮಾಕ್ಯೂ ಗ್ರ್ಯಾನ್ ಪ್ರಿಕ್ಸ್ F3  ರೇಸ್‌ನಲ್ಲಿ ಸೋಫಿಯಾ ಭೀಕರ ಅಪಘಾತಕ್ಕೆ ತುತ್ತಾಗಿದ್ದರು. ಬರೋಬ್ಬರಿ 170 ಕೀ.ಮಿ ವೇಗದಲ್ಲಿ ನಡೆದ ಅಪಘಾತದಲ್ಲಿ ಕಾರು ಛಿದ್ರ ಛಿದ್ರವಾಗಿತ್ತು. ತಿರುವಿನಲ್ಲಿ ಸಂಭವಿಸಿದ ಅಪಘಾತದಲ್ಲಿ ಕಾರು ನೇರವಾಗಿ ವೀಕ್ಷಕರಿಗಾಗಿ ಹಾಕಿದ್ದ ಶೀಟ್ ಮೇಲೆ ಡಿಕ್ಕಿಯಾಗಿ ಬಿದ್ದಿತ್ತು. ಈ ಅಪಘಾತದಲ್ಲಿ ನಾನು ಬದುಕಿದ್ದೇ ಪವಾಡ ಸದೃಶ್ಯ ಎಂದು ಸೋಫಿಯಾ ಹೇಳಿದ್ದಾರೆ.

 

 

ಹಲವು ಮೂಳೆಗಳು ಮುರಿದಿದೆ.  ಆದರೆ ನಾನು ರೇಸ್‌ನಿಂದ ಹಿಂದೆ ಸರಿಯುವುದಿಲ್ಲ ಎಂದು ಸೋಫಿಯಾ ಹೇಳಿದ್ದಾರೆ. ಸದ್ಯ ನಾನು ಚೇತರಿಸಿಕೊಳ್ಳುತ್ತಿದ್ದೇನೆ. ಭೀಕರ ಅಪಘಾತ ಇನ್ನೂ ನನ್ನ ಕಣ್ಣ ಮುಂದಿದೆ. ಮುಂದಿನ ದಿನಗಳಲ್ಲಿ ನನಗಿದು ಎಚ್ಚರಿಕೆ ಗಂಟೆ ಎಂದು ಸೋಫಿಯಾ ಹೇಳಿದ್ದಾರೆ.

 

 

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

20 ಮ್ಯಾಚ್ ಬಳಿಕ ಕೊನೆಗೂ ಟಾಸ್ ಗೆದ್ದ ಭಾರತ! ದಕ್ಷಿಣ ಆಫ್ರಿಕಾ ತಂಡದಲ್ಲಿ 2 ಬದಲಾವಣೆ!
ಭಾರತ ಎದುರಿನ 3ನೇ ಏಕದಿನ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾಗೆ ಬಿಗ್ ಶಾಕ್! 2 ಸ್ಟಾರ್ ಆಟಗಾರರು ಔಟ್!