ಸನತ್ ಜಯಸೂರ್ಯ ವಿರುದ್ಧ ಕೇಸ್-ಉತ್ತರಿಸಲು 14 ದಿನ ಕಾಲವಕಾಶ!

By Web Desk  |  First Published Oct 16, 2018, 9:52 AM IST

ಶ್ರೀಲಂಕಾ ಮಾಜಿ ನಾಯಕನ ವಿರುದ್ದ ಐಸಿಸಿ ಕೇಸು ದಾಖಲಿಸಿದೆ. ಭ್ರಷ್ಟಚಾರ ಆರೋಪ ಎದುರಿಸುತ್ತಿರುವ ಸನತ್ ಜಯಸೂರ್ಯಗೆ ಇದೀಗ 14 ದಿನಗಳ ಗಡುವು ನೀಡಲಾಗಿದೆ. ಅಷ್ಟಕ್ಕೂ ಜಯಸೂರ್ಯ ಮೇಲಿನ ಆರೋಪ ಏನು? ಇಲ್ಲಿದೆ.
 


ದುಬೈ(ಅ.16) : ಶ್ರೀಲಂಕಾ ಕ್ರಿಕೆಟ್‌ನ ಭ್ರಷ್ಟಾಚಾರ ಪ್ರಕರಣದ ತನಿಖೆಗೆ ಸಹಕರಿಸುತ್ತಿಲ್ಲ ಎನ್ನುವ ಕಾರಣಕ್ಕೆ ಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ (ಐಸಿಸಿ) ಕೇಸು ದಾಖಲಿಸಿದೆ.

ಐಸಿಸಿ ತನ್ನ ಪ್ರಕಟಣೆಯಲ್ಲಿ 2 ಅಂಶಗಳನ್ನು ದಾಖಲಿಸಿದ್ದು, ಜಯಸೂರ್ಯ ವಿರುದ್ಧ ಆರೋಪ ಮಾಡಲು ನಿರ್ದಿಷ್ಟ ಕಾರಣವನ್ನು ತಿಳಿಸಿಲ್ಲ. ಆದರೆ ಶ್ರೀಲಂಕಾ ಕ್ರಿಕೆಟ್‌ನ ಮೂಲಗಳ ಪ್ರಕಾರ, 2015ರಲ್ಲಿ ಆರಂಭಗೊಂಡ ತನಿಖೆಗೆ ಜಯಸೂರ್ಯ ಅಡ್ಡಿಯಾಗುತ್ತಿದ್ದಾರೆ ಎನ್ನಲಾಗಿದೆ. ಗಾಲೆ ಮೈದಾನದ ಕ್ಯುರೇಟರ್ ಜಯಾನಂದ ವರ್ಣವೀರಾ ಪಿಚ್ ಫಿಕ್ಸಿಂಗ್ ನಡೆಸಿದ್ದರು ಎನ್ನುವ ಆರೋಪದ ಮೇಲೆ ಐಸಿಸಿ ತನಿಖೆ ಆರಂಭಿಸಿತ್ತು.

Latest Videos

undefined

ಐಸಿಸಿ ಭ್ರಷ್ಟಾಚಾರ ವಿರೋಧಿ ನಿಯಮವನ್ನು ಜಯಸೂರ್ಯ ಉಲ್ಲಂಘಿಸಿರುವು ದಾಗಿ ಪ್ರಕಟಣೆಯಲ್ಲಿ ಹೇಳಲಾಗಿದೆ. ಅವರ ವಿರುದ್ಧ ತನಿಖೆಗೆ ಸಹಕರಿಸುತ್ತಿಲ್ಲ, ಇಲ್ಲವೇ ಹಾಜರಾಗುತ್ತಿಲ್ಲ. ಸೂಕ್ತ ಮಾಹಿತಿ ಒದಗಿಸುತ್ತಿಲ್ಲ ಹಾಗೂ ತನಿಖೆಗೆ ಅಡ್ಡಿ, ಸಾಕ್ಷ್ಯನಾಶ ಆರೋಪಗಳನ್ನು ಐಸಿಸಿ ಮಾಡಿದೆ. 

ಲಂಕಾ ಕ್ರಿಕೆಟ್ ಅಧಿಕಾರಿಯೊಬ್ಬರು ಈ ಬೆಳವಣಿಯ ಕುರಿತು ಪ್ರತಿಕ್ರಿಯಿಸಿದ್ದು, ‘ಐಸಿಸಿ ತನಿಖೆಯಲ್ಲಿ ಭಾಗವಹಿಸಿಲು ಆರಂಭದಲ್ಲಿ ಜಯಸೂರ್ಯ ನಿರಾಕರಿಸಿ
ದರು. ಜತೆಗೆ ತಮ್ಮ ಫೋನ್‌ನಲ್ಲಿರುವ ಮಾಹಿತಿಯನ್ನು ನೀಡಲು ಸಹ ಅವರು ಒಪ್ಪುತ್ತಿಲ್ಲ. ಆದರೆ ಐಸಿಸಿ ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಇಲ್ಲವೇ ಭ್ರಷ್ಟಾಚಾರ
ಚಟುವಟಿಕೆ ನಡೆಸಿದ್ದಾರೆ ಎಂದು ಪ್ರಕರಣ ದಾಖಲಿಸಿಲ್ಲ. ತನಿಖೆಗೆ ಸಹಕರಿಸುತ್ತಿಲ್ಲ ಎಂದಷ್ಟೇ ಆರೋಪಿಸಿದೆ’ ಎಂದಿದ್ದಾರೆ. 

ಐಸಿಸಿ ಆರೋಪಗಳಿಗೆ ಉತ್ತರಿಸಲು ಸೋಮವಾರದಿಂದ 14 ದಿನಗಳ ಕಾಲಾವಕಾಶ ನೀಡಲಾಗಿದ್ದು, ಅಲ್ಲಿಯ ವರೆಗೂ ಐಸಿಸಿ ಯಾವುದೇ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದೆ. 2013ರಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಸಮಿತಿ ಮುಖ್ಯಸ್ಥರಾಗಿದ್ದ ಜಯಸೂರ್ಯ, ತಂಡದ ಕಳಪೆ ಪ್ರದರ್ಶನ ಕಾರಣ 2015ರಲ್ಲಿ ಹುದ್ದೆ ಕಳೆದುಕೊಂಡಿದ್ದರು.

click me!