
ಜೋಹಾನ್ಸ್‌ಬರ್ಗ್(ಅ.15): ಸೌತ್ಆಫ್ರಿಕಾದ ದಿಗ್ಗಜ ಕ್ರಿಕೆಟಿಗ, ಭಾರತೀಯರ ನೆಚ್ಚಿನ ಬ್ಯಾಟ್ಸ್‌ಮನ್ ಎಬಿ ಡಿವಿಲಿಯರ್ಸ್ 2018ರ ಮೇ ನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು. ಹೀಗಾಗಿ ಸೌತ್ಆಫ್ರಿಕಾ ಅಭಿಮಾನಿಗಳು ಡಿವಿಲಿಯರ್ಸ್ ತವರಿನ ಆಟವನ್ನ ಮಿಸ್ ಮಾಡಿಕೊಂಡಿದ್ದರು.
ಇದೀಗ ಎಬಿಡಿ ತವರಿನ ಅಭಿಮಾನಿಗಳಿಗೆ ಸಿಹಿ ಸುದ್ದಿ ಬಂದಿದೆ. ಎಬಿ ಡಿವಿಲಿಯರ್ಸ್ ತವರಿನಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಆರಂಭಿಸುತ್ತಿರುವ ಮಜಾನ್ಸಿ ಕ್ರಿಕೆಟ್ ಲೀಗ್ ಟೂರ್ನಿಯಲ್ಲಿ ಎಬಿಡಿ ಆಡುವುದು ಖಚಿತವಾಗಿದೆ.
ಮಜಾನ್ಸಿ ಲೀಗ್ ಟೂರ್ನಿಯಲ್ಲಿ ಎಬಿಡಿ ಸ್ವಾನ್ ಸ್ಪಾರ್ಟನ್ ತಂಡದ ಪರ ಕಣಕ್ಕಿಳಿಯಲಿದ್ದಾರೆ ಎಂದು ಸೌತ್ಆಫ್ರಿಕಾ ಕ್ರಿಕೆಟ್ ಮಂಡಳಿ ಸ್ಪಷ್ಟಪಡಿಸಿದೆ. ನವೆಂಬರ್ 16 ರಿಂದ ನೂತನ ಮಜಾನ್ಸಿ ಲೀಗ್ ಟೂರ್ನಿ ಆರಂಭಗೊಳ್ಳಲಿದೆ.
ಡರ್ಬನ್ ಹೀಟ್ ಪರ ಹಶೀಮ್ ಆಮ್ಲಾ ಕಣಕ್ಕಿಳಿದರೆ, ಪರ್ಲ್ ರಾಕ್ಸ್ ಪರ ಫಾಫ್ ಡುಪ್ಲೆಸಿಸ್ ಆಡಲಿದ್ದಾರೆ. ಇನ್ನು ವೆಸ್ಟ್ಇಂಡೀಸ್ ಸ್ಟಾರ್ ಕ್ರಿಸ್ ಗೇಲ್, ಡ್ವೇನ್ ಬ್ರಾವೋ ಸೇರಿದಂತೆ ವಿದೇಶಿ ಆಟಗಾರರು ಮಜಾನ್ಸಿ ಲೀಗ್ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.