
ಡಬ್ಲಿನ್(ಮೇ.04): ಇಂಗ್ಲೆಂಡ್ ಹಾಗೂ ಐರ್ಲೆಂಡ್ ನಡುವಿನ ಏಕೈಕ ಏಕದಿನ ಪಂದ್ಯ ವಿವಾದಕ್ಕೆ ಗುರಿಯಾಗಿದೆ. ಈ ಪಂದ್ಯದ್ಲಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬೆನ್ ಫೋಕ್ಸ್ ಮಾಡಿರುವ ಸ್ಟಂಪ್ ಔಟ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಈ ಸ್ಟಂಪ್ ಔಟ್ ಮಂಕಡಿಂಗ್ ಔಟ್‌ಗಿಂತ ಕೆಟ್ಟದು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಇದನ್ನೂ ಓದಿ: ಐಸಿಸಿ ಟಿ20 ರ‍್ಯಾಂಕಿಂಗ್: 5ನೇ ಸ್ಥಾನಕ್ಕೆ ಕುಸಿದ ಭಾರತ
25ನೇ ಓವರ್‌ನಲ್ಲಿ ಆ್ಯಂಡಿ ಬಾಲ್ಬ್ರೇನ್ ಸ್ವೀಪ್ ಶಾಟ್‌ಗೆ ಯತ್ನಿಸಿದರು. ಆದರೆ ಬಾಲ್ ಕೀಪರ್ ಬೆನ್ ಫೋಕ್ಸ್ ಕೈಸೇರಿತು. ತಕ್ಷಣ ಸ್ಟಂಪ್ ಮಾಡದ ಬೆನ್ ಫೋಕ್ಸ್, ಬ್ಯಾಟ್ಸ್‌ಮನ್ ಕ್ರೀಸ್‌ನಿಂದ ಕಾಲು ತೆಗೆಯುವ ವರೆಗೂ ಕಾದು ಸ್ಟಂಪ್ ಔಟ್ ಮಾಡಿದ್ದಾರೆ. ಬಳಿಕ ಅಂಪೈರ್‌ಗೆ ಮನವಿ ಮಾಡಿದ್ದಾರೆ. ಅಂಪೈರ್ ಔಟ್ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ದ್ರಾವಿಡ್‌ಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದರಂತೆ ಶ್ರೀಶಾಂತ್!
ಇದು ಕ್ರೀಡಾಸ್ಪೂರ್ತಿಗೆ ವಿರುದ್ದವಾಗಿದೆ. ಈ ರೀತಿ ಔಟ್ ಮಾಡುವುದು ಸೂಕ್ತವಲ್ಲ ಎಂದು ಹಲವು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಬೆನ್ ಫೋಕ್ಸ್ ಔಟ್ ಸಮರ್ಥಿಸಿಕೊಂಡಿದ್ದಾರೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.