
ರಷ್ಯಾ(ಜು.03): ಫಿಫಾ ವಿಶ್ವಕಪ್ ಟೂರ್ನಿಯ ಕೊನೆಯ ನಾಕೌಟ್ ಪಂದ್ಯದಲ್ಲಿ ಕೊಲಂಬಿಯಾ ತಂಡವನ್ನ 4-3 ಅಂತರದಿಂದ ಮಣಿಸಿದ ಇಂಗ್ಲೆಂಡ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ಮೊದಲಾರ್ಧದಲ್ಲಿ ಗೋಲ್‌ಗಾಗಿ ಉಭಯ ತಂಡಗಳ ಹೋರಾಟ ತೀವ್ರ ಹೋರಾಟ ನಡೆಸಿತು. ಆದರೆ ಕೊಲಂಬಿಯಾ ಹಾಗೂ ಇಂಗ್ಲೆಂಡ್ ತಂಡ ಡಿಫೆಂಡರ್‌ಗಳು ಗೋಲಿಗೆ ಅವಕಾಶ ನೀಡಲಿಲ್ಲ. ಜಿದ್ದಾಜಿದ್ದಿನ ಹೋರಾಟದಲ್ಲಿ ವಾಗ್ವಾದಗಳು ನಡೆಯಿತು. ಹೀಗಾಗಿ 2 ಹಳದಿ ಕಾರ್ಡ್‌ಗಳು ರಾರಾಜಿಸಿತು. ಆದರೆ ಫಸ್ಟ್ ಹಾಫ್‌ನಲ್ಲಿ ಗೋಲು ಮಾತ್ರ ದಾಖಲಾಗಲಿಲ್ಲ.
ದ್ವಿತಿಯಾರ್ಧದ ಹೋರಾಟ ಮತ್ತಷ್ಟು ರೋಚಕಗೊಂಡಿತು. ಆಕ್ರಣಕಾರಿ ಆಟಕ್ಕೆ ಮುಂದಾದ ಇಂಗ್ಲೆಂಡ್ 57ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನ ಉಪಯೋಗಿಸಿಕೊಂಡಿತು. ಹ್ಯಾರಿ ಕೇನ್ ಗೋಲು ಬಾರಿಸೋ ಮೂಲಕ ಇಂಗ್ಲೆಂಡ್ ತಂಡಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಇನ್ನೇನು ಇಂಗ್ಲೆಂಡ್‌ಗೆ ಸುಲಭ ಗೆಲುವು ಅನ್ನುವಷ್ಟರಲ್ಲೇ 90+3 ನೇ ನಿಮಿಷದಲ್ಲಿ ಕೊಲಂಬಿಯಾದ ಯೆರಿ ಮಿನಾ ಗೋಲು ಬಾರಿಸೋ ಮೂಲಕ 1-1 ಅಂತರದಲ್ಲಿ ಸಮಭಲಗೊಳಿಸಿದರು. ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಕಾರಣ ಪೆನಾಲ್ಟಿ ಶೂಟೌಟ್ ಮೂಲಕ ಫಲಿತಾಂಶ ನಿರ್ಧರಿಸಲಾಯಿತು. ಶೂಟೌಟ್‌ನಲ್ಲಿ ಇಂಗ್ಲೆಂಡ್ 4 ಗೋಲು ಸಿಡಿಸಿದರೆ, ಕೊಲಂಬಿಯಾ 3 ಗೋಲು ಸಿಡಿಸಿ ಸೋಲೊಪ್ಪಿಕೊಂಡಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಐಪಿಎಲ್ ಲೈವ್ ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.